ವಾಹನ ಚಾಲಕರಿಗೆ ಮಹತ್ವದ ಮಾಹಿತಿ : ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

ಮೂಡಿಗೆರೆ : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಂತಿರುವ ಚಾರ್ಮಾಡಿ ಘಾಟ್‌ ರಸ್ತೆಯಲ್ಲೀಗ ಇಡೀ ದಿನ ವಾಹನ ಚಾಲನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸಂಜೆ 7ರ ಬಳಿಕ ಬೆಳಗ್ಗೆ 6 ಗಂಟೆ ತನಕ ಹೇರಲಾಗಿದ್ದ ವಾಹನ ಸಂಚಾರ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿತ್ತು. ಅಲ್ಲದೇ ಲಘು ವಾಹನ ಗಳಿಗೆ ಬೆಳಗಿನಿಂದ ಸಂಜೆಯ ವರೆಗೆ ಮಾತ್ರವೇ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಆದ್ರೀಗ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿಯನ್ನು ನಡೆಸಲಾಗಿದೆ. ಮರಳಿನ ಚೀಲವನ್ನು ಅಳವಡಿಸಿ, ರಸ್ತೆ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ : ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ಬಂದ್‌ : ಜಿಲ್ಲಾಧಿಕಾರಿ ಆದೇಶ

ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಸಣ್ಣ ವಾಹನಗಳಿಗೆ ಮಾತ್ರವೇ ದಿನವಿಡೀ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಘನ ವಾಹನಗಳಾದ ಬಸ್‌, ಲಾರಿಗಳು ಸಂಜೆ 7 ಗಂಟೆ ಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಸಂಚಾರವನ್ನು ಅವಕಾಶವನ್ನು ನಿಷೇಧಿಸಲಾಗಿದೆ. ಅಲ್ಲದೇ ಟ್ಯಾಂಕರ್‌, ಕಂಟೈನರ್‌, ಲಾಂಗ್‌ ಚಾರ್ಸಿಂಗ್‌ ವಾಹನ, ಮಲ್ಟಿ ಎಕ್ಸೆಲ್‌ ಬಸ್‌, ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ಸುಗಳ ಸಂಚಾರವನ್ನು ದಿನ 24 ಗಂಟೆಯೂ ಮುಂದಿನ ಆದೇಶದ ವರೆಗೆ ನಿರ್ಬಂಧಿಸಿ ಚಿಕ್ಕಮಗಳೂರು ಡಿಸಿ ಆದೇಶ ಹೊರಡಿಸಿದ್ದಾರೆ.\

ಇದನ್ನೂ ಓದಿ : ಭಾರೀ ಮಳೆಯಿಂದ ಹೊಂಡಕ್ಕೆ ಜಾರಿದ ಬಸ್‌ : 25 ಕ್ಕೂಅಧಿಕ ಪ್ರಯಾಣಿಕರು ಸೇಫ್‌

Comments are closed.