Indian ABD Suryakumar Yadav: ಸೂರ್ಯಕುಮಾರ್ ಯಾದವ್ ಭಾರತದ ಎಬಿ ಡಿ’ವಿಲಿಯರ್ಸ್ ಎಂದ ಆಸ್ಟ್ರೇಲಿಯಾ ದಿಗ್ಗಜ

ಮುಂಬೈ: (Indian ABD Suryakumar Yadav) ಭಾರತದ ಹೊಸ ಬ್ಯಾಟಿಂಗ್ ಸ್ಟಾರ್ ಸೂರ್ಯಕುಮಾರ್ ಯಾದವ್ ತಮ್ಮ ವೃತ್ತಿಜೀವನದ ಅಮೋಘ ಫಾರ್ಮ್’ ನಲ್ಲಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಸೂರ್ಯ, ವೆಸ್ಟ್ ಇಂಡೀಸ್ ವಿರುದ್ಧದ ಇನ್ನಿಂಗ್ಸ್ ಆರಂಭಿಸಿ ಉತ್ತಮ ಪ್ರದರ್ಶನ ತೋರಿದ್ದರು.

ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಮಿಸ್ಟರ್ 360 ಡಿಗ್ರಿ ಆಟಗಾರ ಎಂದು ಕರೆಯಲಾಗುತ್ತದೆ. ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಅಂದ್ರೆ ಅದು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ಸ್. ಎಬಿಡಿ ಅವರಂತೆ ಸೂರ್ಯಕುಮಾರ್ ಅವರಲ್ಲೂ ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬಡಿದಟ್ಟುವ ಸಾಮರ್ಥ್ಯವಿದೆ. ಇದೀಗ ಸೂರ್ಯಕುಮಾರ್ ಯಾದವ್ ಅವರಿಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ, ಮಾಜಿ ನಾಯಕ ರಿಕಿ ಪಾಂಟಿಂಗ್ (Ricky Ponting) ಅವರ ಶಹಬ್ಬಾಸ್’ಗಿರಿ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಆಟದಲ್ಲಿ ನಾನು ಎಬಿ ಡಿ’ವಿಲಿಯರ್ಸ್ ಅವರನ್ನು ಕಾಣುತ್ತಿದ್ದೇನೆ ಎಂದು ಮುಂಬೈಕರ್ ಆಟಕ್ಕೆ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಸೂರ್ಯಕುಮಾರ್ ಯಾದವ್ ಮೈದಾನದ 360 ಡಿಗ್ರಿಯಲ್ಲಿ ರನ್ ಗಳಿಸುತ್ತಾರೆ. ಅವರ ಆಟ ಎಬಿ ಡಿ’ವಿಲಿಯರ್ಸ್ ಅವರನ್ನು ನೆನಪಿಸುತ್ತಿದೆ. ಲ್ಯಾಪ್ ಶಾಟ್, ಲೇಟ್ ಕಟ್, ವಿಕೆಟ್ ಕೀಪರ್ ತಲೆ ಮೇಲಿಂದ ಚೆಂಡನ್ನು ಬಾರಿಸುವುದು.. ಹೀಗೆ ಮೈದಾನದ ಎಲ್ಲಾ ಭಾಗಗಳಿಗೂ ಚೆಂಡನ್ನು ಬಡಿದಟ್ಟಬಲ್ಲ ಸಾಮರ್ಥ್ಯ ಸೂರ್ಯನಿಗಿದೆ” ಎಂದು ಐಸಿಸಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತೀಯ ಆಟಗಾರನ ಬಗ್ಗೆ ರಿಕಿ ಪಾಂಟಿಂಗ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ 4ನೇ ಕ್ರಮಾಂಕದಲ್ಲೇ ಆಡಿಸಬೇಕೆಂದು ರಿಕಿ ಪಾಂಟಿಂಗಗ್ ಸಲಹೆ ನೀಡಿದ್ದಾರೆ. 2022ರಲ್ಲಿ 12 ಟಿ20 ಪಂದ್ಯಗಳನ್ನಾಡಿರುವ 32 ವರ್ಷದ ಸೂರ್ಯಕುಮಾರ್ ಯಾದವ್, 39ರ ಉತ್ತಮ ಸರಾಸರಿಯಲ್ಲಿ ಒಂದು ಶತಕ ಸಹಿತ 428 ರನ್ ಕಲೆ ಹಾಕಿದ್ದಾರೆ. ಭಾರತ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗೆಲ್ಲಬೇಕಾದರೆ ಸೂರ್ಯಕುಮಾರ್ ಯಾದವ್ ಪಾತ್ರ ದೊಡ್ಡದು ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಡುತ್ತಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮುಂಬೈನ ಬಲಗೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್, ಒಂದೇ ವರ್ಷದೊಳಗೆ ಐಸಿಸಿ ಟಿ20 rankingನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಇದನ್ನೂ ಓದಿ : BCCI former Secretary Amitabh Chaudhary : ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ಸಾವು

ಇದನ್ನೂ ಓದಿ : BCCI Instruct Team India : “ಜಿಂಬಾಬ್ವೆಯಲ್ಲಿ ಬೇಗ ಬೇಗ ಸ್ನಾನ ಮುಗಿಸಿ ” ರಾಹುಲ್ ಬಳಗಕ್ಕೆ ಬಿಸಿಸಿಐ ಈ ವಾರ್ನಿಂಗ್ ಕೊಟ್ಟದ್ದೇಕೆ

Indian ABD Suryakumar Yadav is the Australian legend as India’s AB de Villiers

Comments are closed.