ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

ದೆಹಲಿ: ಭಾರತ ಕ್ರಿಕೆಟ್ ( Team india) ತಂಡದ ನಾಯಕತ್ವ ವಹಿಸಿಕೊಂಡ ಸಂಭ್ರಮದಲ್ಲಿದ್ದ ಕನ್ನಡಿಗ ಕೆ.ಎಲ್ ರಾಹುಲ್ ( KL Rahul ) ಅದೃಷ್ಟವೇ ಸರಿ ಇಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಎಂಬಂತಾಗಿದೆ ರಾಹುಲ್ ಪರಿಸ್ಥಿತಿ. ಐಪಿಎಲ್ ಟೂರ್ನಿ ಗೆಲ್ಲುವ ರಾಹುಲ್ ಕನಸು ಇತ್ತೀಚೆಗಷ್ಟೇ ನುಚ್ಚುನೂರಾಗಿತ್ತು. ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪ್ಲೇ ಆಫ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ಮನೆ ಸೇರಿತ್ತು. ಇದ್ರ ಬೆನ್ನಲ್ಲೇ ರಾಹುಲ್’ಗೆ (KL Rahul ruled out) ಈಗ ಮತ್ತೊಂದು ಆಘಾತ.

ಹಾಗಾದ್ರೆ ರಾಹುಲ್”ಗೆ ಆಗಿದ್ದೇನು..? ಇದು ದುರಾದೃಷ್ಟವಲ್ಲದೆ ಮತ್ತಿನ್ನೇನೂ ಅಲ್ಲ. ಅಂದ ಹಾಗೆ ಆಗಿದ್ದೇನಂದ್ರೆ, ದಕ್ಷಿಣ ಆಫ್ರಿಕಾ ವಿರುದ್ಧದ (India vs South Africa) ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಕೆ.ಎಲ್ ರಾಹುಲ್ ಆಯ್ಕೆಯಾಗಿದ್ರು. ಇನ್ನೇನು ಮೊದಲ ಪಂದ್ಯ ಗುರುವಾರ ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿತ್ತು. ಆದ್ರೆ ಅದಕ್ಕೂ ಮೊದ್ಲೇ ರಾಹುಲ್”ಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸಾರಥ್ಯ ವಹಿಸಬೇಕಿದ್ದ ರಾಹುಲ್ ದುರದೃಷ್ಟವಶಾತ್ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದಾರೆ.

ಬುಧವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ರಾಹುಲ್ ಅವರಿಗೆ ತೊಡೆ ಸಂದು (groin injury) ಗಾಯಕ್ಕೆ ಗುರಿಯಾಗಿದ್ದಾರೆ. ಗಾಯದ ಸ್ವರೂಪ ಸ್ವಲ್ಪ ಗಂಭೀರವಾಗಿರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ರಾಹುಲ್ ಹೊರ ಬಿದ್ದಿದ್ದಾರೆ. ರಾಹುಲ್ ಜೊತೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಕೂಡ ದಕ್ಷಿಣ ಆಫ್ರಿಕಾ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ನೆಟ್ ಪ್ರಾಕ್ಟೀಸ್ ವೇಳೆ ಕುಲ್ದೀಪ್ ಯಾದವ್ ಅವರ ಬಲೈಗೆಗೆ ಗಾಯವಾಗಿದ್ದು, ಇಡೀ ಸರಣಿಯಿಂದ ಔಟ್ ಆಗಿದ್ದಾರೆ. ರಾಹುಲ್ ಮತ್ತು ಕುಲ್ದೀಪ್ ಯಾದವ್ ಭಾರತದ ತಂಡದ ಕ್ಯಾಂಪ್ ತೊರೆದಿದ್ದು, ಇನ್ನೆರಡು ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ, ಪುನಶ್ಚೇತನ ಶಿಬಿರಕ್ಕೆ ಹಾಜರಾಗಲಿದ್ದಾರೆ.

ಗಾಯಾಳು ರಾಹುಲ್ ಬದಲು ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಮುನ್ನೆಡಸಲಿದ್ದಾರೆ. ಐಪಿಎಲ್ ವಿಜೇತ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ರಾಹುಲ್ ಮತ್ತು ಯಾದವ್ ಇಬ್ಬರಿಗೂ ಬದಲಿ ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿ ಹೆಸರಿಸಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ02 ಸರಣಿ ಭಾರತದ ಪರಿಷ್ಕೃತ ತಂಡ ಹೀಗಿದೆ:

ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

ಇದನ್ನೂ ಓದಿ : Mithali Raj : ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಕ್ಕೆ ಮಿಥಾಲಿ ರಾಜ್​ ರಾಜೀನಾಮೆ

KL Rahul ruled out of India vs South Africa T20I series

Comments are closed.