IPS Roopa VS IAS Rohini: ರೋಹಿಣಿ ಸಿಂಧೂರಿ,‌ ರೂಪಾ ಮೌದ್ಗಿಲ್ ವೈಯಕ್ತಿಕ ಕಿತ್ತಾಟ : ಎಚ್ಚರಿಕೆ ಕೊಟ್ಟ ಕಾನೂನು ಸಚಿವ

ಬೆಂಗಳೂರು: (IPS Roopa VS IAS Rohini) ಸಾಮಾಜಿಕ ಮಾಧ್ಯಮಗಳ ಮೂಲಕ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳಿಬ್ಬರ ವೈಯಕ್ತಿಕ ಜಗಳ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದು, ರೋಹಿಣಿ ಸಿಂಧೂರಿ ವಿರುದ್ದ ಐಪಿಎಸ್‌ ಅಧಿಕಾರಿ ರೂಪಾ ಸಂಚಲನ ಆರೋಪ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ. ಇಬ್ಬರ ನಡುವಿನ ಜಗಳ ಹೀಗೆ ಮುಂದುವರೆದರೆ, ಕಾನೂನಿಗೆ ಕುತ್ತು ತಂದರೆ ಕಾನೂನಿಡಿಯಲ್ಲಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ ಎಂದು ಕಾನೂನು ಸಚಿವ ಎಚ್ಚರಿಕೆ ನೀಡಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮೌದ್ಗಿಲ್ ಅವರು ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ. ಈ ಪೈಕಿ ಬಹುತೇಕ ಆರೋಪಗಳು ಈ ಹಿಂದೆಯೇ ರೋಹಿಣಿ ಸಿಂಧೂರಿ ಅವರ ವಿರುದ್ಧ ಕೇಳಿ ಬಂದಿತ್ತು. ಶಾಸಕ ಸಾರಾ ಮಹೇಶ್ ಜೊತೆಗಿನ ಜಗಳ, ಮೈಸೂರು ಡಿಸಿ ಆಗಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು, ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣದ ವೇಳೆ ರೋಹಿಣಿ ಅವರ ಹೆಸರು ಕೇಳಿ ಬಂದದ್ದು. ಹೀಗೆ ಹಲವು ಆರೋಪಗಳನ್ನ ರೂಪಾ ಮೌದ್ಗಿಲ್ ಮಾಡಿದ್ದಾರೆ.

ಆದರೆ ಕೆಲವು ಐಎಎಸ್ ಹಾಗೂ ಐಪಿಎಸ್ ಪುರುಷ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಅವರು ಕಳಿಸಿದ್ದಾರೆ ಎನ್ನಲಾದ ಕೆಲವು ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇವು ಸ್ಯಾಂಪಲ್ ಅಷ್ಟೇ.ಇಂಥಾ ಹಲವು ಫೋಟೋಗಳು ನನಗೆ ಸಿಕ್ಕಿವೆ, ಅವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದಿರುವ ರೂಪಾ, ಈ ರೀತಿಯ ಫೋಟೋಗಳನ್ನ ಪುರುಷ ಅಧಿಕಾರಿಗಳಿಗೆ ರೋಹಿಣಿ ಅವರು ಕಳಿಸಿದ್ದು ಏಕೆ? ಈ ಕುರಿತು ತನಿಖೆ ಮಾಡಿ ಅಂತಾ ಒತ್ತಾಯ ಮಾಡಿದ್ದಾರೆ.

ತಮ್ಮ ಖಾಸಗಿ ಫೋಟೋಗಳನ್ನ ಸಾರ್ವಜನಿಕವಾಗಿ ಪ್ರಕಟ ಮಾಡಿದ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಹರಿಹಾಯ್ದಿದ್ದಾರೆ. ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತನೆ ಮಾಡ್ತಿದ್ದಾರೆ ಅಂತಾ ಟೀಕಿಸಿದ್ಧಾರೆ. ಎಲ್ಲಕ್ಕಿಂತಾ ಹೆಚ್ಚಾಗಿ ನಾನು ನನ್ನ ಖಾಸಗಿ ಫೋಟೋಗಳನ್ನು ಯಾವ ಅಧಿಕಾರಿಗೆ ಕಳಿಸಿದ್ದೆ? ಅವರ ಹೆಸರನ್ನು ಬಹಿರಂಗ ಮಾಡಿ ಅಂತಾ ರೋಹಿಣಿ ಸಿಂಧೂರಿ ಒತ್ತಾಯ ಮಾಡಿದ್ದಾರೆ. ಇನ್ನು ಮಾಧ್ಯಮ ಪ್ರತಿನಿಧಿಗಳು ತಮ್ಮ ಮನೆ ಬಾಗಿಲಿಗೇ ಬಂದು ಪ್ರತಿಕ್ರಿಯೆ ಕೊಡಿ ಎಂದು ಕೇಳಿದಾಗಲೂ ತಣ್ಣನೆಯ ಉತ್ತರ ನೀಡಿರುವ ರೋಹಿಣಿ ಸಿಂಧೂರಿ, ವೈಯಕ್ತಿಕ ತೇಜೋವಧೆ ಸರಿಯಲ್ಲ ಎಂದಷ್ಟೇ ಹೇಳಿದ್ದಾರೆ.

ಈ ವೇಳೆ ತಮ್ಮ ಅಭಿಪ್ರಾಯ ಮಂಡಿಸಿದ ಕೆ. ವಿ. ಧನಂಜಯ ಅವರು, ಅಧಿಕಾರಿಗಳ ನಡುವಣ ಗುದ್ದಾಟದ ವಿಚಾರ ಅತಿರೇಕಕ್ಕೆ ಹೋದ್ರೆ ಸರ್ಕಾರ ಖಂಡಿತಾ ಮಧ್ಯ ಪ್ರವೇಶ ಮಾಡಲಿದೆ ಅಂತಾ ಹೇಳಿದ್ರು. ರೋಹಿಣಿ ಸಿಂಧೂರಿ ಹಾಗೂ ರೂಪಾ ಮೌದ್ಗಿಲ್ ನಡುವಣ ಕಿತ್ತಾಟ ಹೆಚ್ಚಾದ್ರೆ, ಸರ್ಕಾರದ ಘನತೆಗೆ ಕುತ್ತು ತಂದರೆ, ಇಬ್ಬರನ್ನೂ ಸಸ್ಪೆಂಡ್ ಮಾಡುವ ಆಯ್ಕೆ ಸರ್ಕಾರದ ಬಳಿ ಇದೆ. ಸರ್ಕಾರದ ಘನತೆಯನ್ನು ಎತ್ತಿ ಹಿಡಿಯಬೇಕಾದ್ದು ಅಧಿಕಾರಿಗಳ ಕೆಲಸ. ಸರ್ಕಾರ ಇದೀಗ ಕಾದು ನೋಡುವ ತಂತ್ರ ಅನುಸರಿಸುತ್ತಿರಬಹುದು. ಈ ಪ್ರಕರಣ ತಂತಾನೇ ಕ್ಷೀಣಿಸಬಹುದು. ಇದು ವೈಯಕ್ತಿಕ ಕಿತ್ತಾಟವಾದ್ರೂ ಸರ್ಕಾರದ ಮೇಲೆ ಪ್ರಭಾವ ಬೀರಬಹುದಾಗಿದೆ.ಇಬ್ಬರ ಕಿತ್ತಾಟ ಅತಿರೇಕದ ಹಂತ ತಲುಪಿದೆ ಎಂದು ಸರ್ಕಾರದ ಗಮನಕ್ಕೆ ಬಂದರೆ ಶಿಸ್ತು ಕ್ರಮ ಕೈಗೊಳ್ಳಬಹುದು.

ಇನ್ನೂ ರೋಹಿಣಿ ಸಿಂಧೂರಿ ಅವರು ರೂಪಾ ಮೌದ್ಗಿಲ್ ಅವರ ಪತಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದರೆ, ಆಗ ರೂಪಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಫೋಟೋ ಪ್ರಕಟಿಸಿ ದನಿ ಎತ್ತಬಹುದು. ಆಗ ಮಾತ್ರ ಅದು ಅರ್ಥಪೂರ್ಣ ಎನಿಸಿಕೊಳ್ಳುತ್ತೆ. ಇನ್ನು ಒಬ್ಬ ಅಧಿಕಾರಿ ಮತ್ತೊಬ್ಬ ಅಧಿಕಾರಿ ವಿರುದ್ಧ ಸಾರ್ವಜನಿಕವಾಗಿ ಭ್ರಷ್ಟಾಚಾರ ಆರೋಪವನ್ನು ಮಾಡೋದು ತಪ್ಪಲ್ಲ. ರೂಪಾ ಮೌದ್ಗಿಲ್ ಅವರ ವಿಚಾರಕ್ಕೆ ಬಂದರೆ ಈ ಹಿಂದೆ ಅವರು ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆ ಎಳೆದಿದ್ದಾರೆ. ಹೀಗಾಗಿ, ರೂಪಾ ಅವರ ಹಿನ್ನೆಲೆ ಪರಿಗಣಿಸಿದರೆ ಸದ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ಭ್ರಷ್ಟಾಚಾರ ಆರೋಪ ತಪ್ಪಲ್ಲ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಕೆ. ವಿ. ಧನಂಜಯ ಅವರು ಅಭಿಪ್ರಾಯಪಟ್ಟಿದ್ಧಾರೆ.

ಇದನ್ನೂ ಓದಿ : ಮುಂದಿನ ತಿಂಗಳು ಬೆಂಗಳೂರಿಗೆ ಬರಲಿದೆ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್

ಅಧಿಕಾರಿಗಳ ಕಿತ್ತಾಟ ಹೀಗೆ ಮುಂದುವರಿದರೆ ಕ್ರಮ ಜರುಗಿಸುತ್ತೇವೆ. ಅವರ ವೈಯಕ್ತಿಕ ವಿಚಾರ ಅಂತ ನಾವು ಸುಮ್ಮನಿದ್ದೆವು. ಈ ವಿಚಾರ ವಿಧಾನಸೌಧದವರೆಗೂ ಬಂದಿದೆ ಅಂದ್ರ ಸುಮ್ಮನಿರಲ್ಲ. ಸಿಎಂ ಬೊಮ್ಮಾಯಿ ಜೊತೆ ಈ ಬಗ್ಗೆ ಚರ್ಚೆ ಮಾಡಿ ಕಾನೂನಿನಡಿ ಏನೆಲ್ಲ ಕ್ರಮಕೈಗೊಳ್ಳಬೇಕೆಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

IPS Roopa VS IAS Rohini: Rohini Sindhuri, Roopa Maudgil personal feud: Law Minister warns

Comments are closed.