Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ಇನ್ನೇನೂ ಕೆಲವು ತಿಂಗಳುಗಳು ಅಷ್ಟೇ ಬಾಕಿ ಉಳಿದಿದೆ. ರಾಜ್ಯದಲ್ಲಿ ಉಳಿದ ಪಕ್ಷಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಜೆಡಿಎಸ್‌ ಪಕ್ಷ ಇಂದು ತಮ್ಮ ಮೊದಲ ಹೆಜ್ಜೆಯನ್ನು ಇಟ್ಟಿದೆ.

ರಾಷ್ಟ್ರೀಯ ಪಕ್ಷಗಳಿಗೂ ಮೊದಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವುದು ವಿಶೇಷವಾಗಿದೆ. ಇಂದು ಜೆಡಿಎಸ್‌ 2023ನೇ ಸಾಲಿನ ವಿಧಾನಸಭೆ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಭವಿಷ್ಯದ ರಾಜಕಾರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳ ಪಾಲಿಗೆ ಜೆಡಿಎಸ್‌ ಬಹುಮುಖ್ಯ ಪಾತ್ರ ವಹಿಸಲಿರುವುದು ಖಂಡಿತ. ಒಂದು ವೇಳೆ ರಾಷ್ಟ್ರೀಯ ಪಕ್ಷಗಳು ಬಹುಮತ ಸಂಪಾದಿಸುವಲ್ಲಿ ವಿಫಲವಾದರೆ ಸರಕಾರ ರಚನೆಗೆ ಜೆಡಿಎಸ್‌ ಪಕ್ಷದ ಬೆಂಬಲ ಅವಶ್ಯವಾಗಿರುತ್ತದೆ.

ದಕ್ಷಿಣ ಕರ್ನಾಟಕದಲ್ಲಿ ಬಲಿಷ್ಠವಾಗಿರುವ ಜೆಡಿಎಸ್‌ ಒಟ್ಟು 93 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಇದರಲ್ಲಿ ಟಾಪ್‌ 10 ಅಭ್ಯರ್ಥಿಗಳು ಯಾರು ಹಾಗೂ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ನೀಡಲಾಗಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ : Karnataka Assembly : ಕರ್ನಾಟಕ ವಿಧಾನಸಭೆಯಲ್ಲಿ ಸಾವರ್ಕರ್ ಭಾವಚಿತ್ರ ಅನಾವರಣ : ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು

ಇದನ್ನೂ ಓದಿ : ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಗೌರವಧನ ಹೆಚ್ಚಳ

ಇದನ್ನೂ ಓದಿ : Karnataka assembly election 2023: ಟಿಕೆಟ್‌ ಹಂಚಿಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿ

  1. ಚನ್ನಪಟ್ಟಣ – ಹೆಚ್‌ ಡಿ ಕುಮಾರಸ್ವಾಮಿ
  2. ರಾಮನಗರ – ನಿಖಿಲ್‌ ಕುಮಾರಸ್ವಾಮಿ
  3. ಚಾಮುಂಡೇಶ್ವರಿ – ಜಿಟಿ ದೇವೇಗೌಡ
  4. ಕೆ. ಆರ್‌ ನಗರ – ಸಾ. ರಾ ಮಹೇಶ್‌
  5. ಶ್ರೀ ರಂಗಪಟ್ಟಣ – ರವೀಂದ್ರ ಶ್ರೀಕಂಠಯ್ಯ
  6. ಬೀದರ್‌ ದಕ್ಷಿಣ – ಬಂಡೆಪ್ಪ ಕಾಶೆಂಪೂರ್‌
  7. ಹರಿಹರ – ಎಚ್‌ ಎಸ್‌ ಶಿವಶಂಕರ್‌
  8. ಭದ್ರಾವತಿ – ಶಾರದಾ ಅಪ್ಪಾಜಿಗೌಡ
  9. ತುರುವೆಕೆರೆ – ಎಂ.ಟಿ. ಕೃಷ್ಣಪ್ಪ
  10. ಚಿಕ್ಕಬಳ್ಳಾಪುರ – ಕೆಪಿ ಬಚ್ಚೇಗೌಡ

JDS First List Released for 2023 Karnataka Assembly Election: Here are the names of the candidates in the list

Comments are closed.