Heel Pain Home Remedies:ಅತಿಯಾದ ಹಿಮ್ಮಡಿ ನೋವು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದ್ರೆ ಇಲ್ಲಿದೆ ಅತ್ಯುತ್ತಮ ಮನೆಮದ್ದು ಮಾಹಿತಿ

(Heel Pain Home Remedies)ಕೆಲವರಲ್ಲಿ ಅತಿ ಹೆಚ್ಚು ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಅತಿ ಹೆಚ್ಚು ಹಿಮ್ಮಡಿ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಕಾಲಿಗೆ ಹಿಲ್ಡ್‌ ಹಾಕುವುದರಿಂದ ಮಹಿಳೆಯರಲ್ಲಿ ಹಿಮ್ಮಡಿ ನೋವಿನ ಸಮಸ್ಯೆ ಕಾಣಿಕೊಳ್ಳುತ್ತದೆ. ಮತ್ತು ತೂಕ ಹೆಚ್ಚಿರುವವರಲ್ಲಿ ಹಿಮ್ಮಡಿ ನೋವಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಿಮ್ಮಡಿ ನೋವಿಗೆ ಮನೆಯಲ್ಲಿಯೇ ಮದ್ದನ್ನು ತಯಾರಿಸಿಕೊಳ್ಳಬಹುದು. ಹಿಮ್ಮಡಿ ನೋವಿಗೆ ಮನೆಮದ್ದು ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Heel Pain Home Remedies)ಹಾಲು, ಕಲ್ಲುಸಕ್ಕರೆ, ಅಶ್ವಗಂಧ ಮಿಶ್ರಣ

ಬೇಕಾಗುವ ಸಾಮಾಗ್ರಿಗಳು:

  • ಹಾಲು
  • ಕಲ್ಲು ಸಕ್ಕರೆ
  • ಅಶ್ವಗಂಧ ಪುಡಿ

ಮಾಡುವ ವಿಧಾನ:
ಒಂದು ಲೋಟದಲ್ಲಿ ಅರ್ಧ ನೀರು, ಅರ್ಧ ಹಾಲು ಹಾಕಿಕೊಂಡು ಅದನ್ನು ಪಾತ್ರೆಯಲ್ಲಿ ಹಾಕಿ ಕಾಯಿಸಿಕೊಳ್ಳಬೇಕು ಅದಕ್ಕೆ ಅರ್ಧ ಅಶ್ವಗಂಧ ಪುಡಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಬೇಕು. ನಂತರ ಒಂದು ಕಲ್ಲು ಸಕ್ಕರೆ ಹಾಕಿ ಕರಗುವ ವರೆಗೆ ಕಾಯಿಸಿಕೊಳ್ಳಬೇಕು. ನಂತರ ಇದನ್ನು ಲೋಟಕ್ಕೆ ಹಾಕಿಕೊಂಡು ಕುಡಿಯಬೇಕು. ಪ್ರತಿದಿನ ಇದನ್ನು ಕುಡಿಯುತ್ತಾ ಬಂದರೆ ಹಿಮ್ಮಡಿ ನೋವು ಮಾಯಾವಾಗುತ್ತದೆ.

ಇದನ್ನೂ ಓದಿ:Ajawan And Camphor Health Tips:ಅಜವಾನ, ಪಚ್ಚ ಕರ್ಪೂರ ಬಳಸಿದ್ರೆ ಶೀತ ,ಕೆಮ್ಮು ,ತಲೆನೋವು ಕಡಿಮೆಯಾಗುತ್ತೆ

ಇದನ್ನೂ ಓದಿ:Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಇದನ್ನೂ ಓದಿ:How To Improve Eyesight:ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳಬೇಕೆ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ……

ಎಕ್ಕದ ಎಲೆ

ಗ್ಯಾಸ್‌ ಹಚ್ಚಿಕೊಂಡು ಅದರ ಮೇಲೆ ಎಕ್ಕದ ಎಲೆಯನ್ನು ಬಿಸಿ ಮಾಡಬೇಕು ಇಲ್ಲವಾದಲ್ಲಿ ಗ್ಯಾಸ್‌ ಮೇಲೆ ಹಂಚನ್ನು ಇಟ್ಟುಕೊಂಡು ಎಕ್ಕದ ಎಲೆಯನ್ನು ಬಿಸಿಮಾಡಿಕೊಳ್ಳಬೇಕು. ಮುಂಚಿತವಾಗಿ ಬೌಲ್‌ ನಲ್ಲಿ ಒಂದು ಚಮಚ ಅಲವೇರಾ ಜೆಲ್ , ಕಾಲು ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಹಿಮ್ಮಡಿಗೆ ಅಲವೇರಾ ಮತ್ತು ಸಾಸಿವೆ ಎಣ್ಣೆ ಮಿಶ್ರಣವನ್ನು ಹಚ್ಚಿಕೊಂಡು ಎಕ್ಕದ ಎಲೆಯನ್ನು ಇಟ್ಟು ಸಾಕ್ಸ್‌ ಹಾಕಿಕೊಳ್ಳಬೇಕು.ಪ್ರತಿದಿನ ರಾತ್ರಿ ಈ ಮನೆಮದ್ದನ್ನು ಹಚ್ಚಿಕೊಂಡರೆ ಹಿಮ್ಮಡಿ ನೋವು ಕಡಿಮೆ ಆಗುತ್ತದೆ.

ಎಕ್ಕದ ಗಿಡದ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಎಕ್ಕದ ಎಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಸಿ ಮಾಡಿ ಊತವಿರುವ ಜಾಗಕ್ಕೆ ಇಟ್ಟುಕೊಂಡರೆ ಕಾಲಿನ ಊತ ಕಡಿಮೆ ಆಗುತ್ತದೆ. ಎಕ್ಕದ ಎಲೆಯನ್ನು ಬಿಸಿ ಮಾಡಿ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುತ್ತದೆ.

Heel Pain Home Remedies Are you suffering from excessive heel pain? So here is the best home remedy information

Comments are closed.