ಕನ್ನಡ ಮಾಧ್ಯಮ ವಿದ್ಯಾರ್ಥಿಗೆ 1.42 ಕೋಟಿ ರೂ. NASA ಸ್ಕಾಲರ್ ಶಿಪ್ ಗೌರವ

ಸಿರಸಿ : ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಯೊಬ್ಬ ನಾಸಾದ ಇನ್ವೆಸ್ಟಿಗೇಟರ್ ಗೌರವಕ್ಕೆ ಪಾತ್ರವಾಗಿದ್ದು 1ಕೋಟಿ 42 ಸಾವಿರ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಶಶಿಗುಳಿ ಗ್ರಾಮದ ದಿನೇಶ್ ವಸಂತ ಹೆಗಡೆ ಇಂತಹದೊಂದು ಸಾಧನೆ ಮೂಲಕ ಗ್ರಾಮಕ್ಕೆ, ರಾಜ್ಯಕ್ಕೆ,ದೇಶಕ್ಕೆ ಗೌರವ ತಂದು ಕೊಟ್ಟಿದ್ದಾರೆ. ದಿನೇಶ್ ಹೆಗಡೆ, ಅಮೇರಿಕಾದ ಅಲಬಾಮಾ ವಿವಿಯಲ್ಲಿ ಎರಡನೇ ವರ್ಷದ ಡಾಕ್ಟರೇಟ್ ಪದವಿ ಓದುತ್ತಿದ್ದು, ಬ್ಯಾಹಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಹೆಚ್ಚಿನ ಸಂಶೋಧನೆಗೆ ಈಗ ಸ್ಕಾಲರ್ ಶಿಪ್ ಪಡೆದಿದ್ದಾರೆ.

ಸದ್ಯ ದಿನೇಶ್, ಯು.ಎ.ಎಚ್ ಸೆಂಟರ್ ಫಾರ್ ಸ್ಪೇಸ್ ಫ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್ ವಿಭಾಗದಲ್ಲಿ ಸಂಶೋಧಕಾ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಬಗ್ಗೆ ಅಧ್ಯಯನ ನಡೆಸಲು ಈ ಅನುದಾನ ನೀಡಲಾಗಿದೆ. ಅವರಿಗೆ ಬಾಹ್ಯಾಕಾಶ ಹವಾಮಾನ ವಿಜ್ಞಾನಿ ಡಾ.ನಿಕೊಲಾಯ್ ಮಾರ್ಗದರ್ಶನ ನೀಡಲಿದ್ದಾರೆ.

ಸಿದ್ಧಾಪುರದ ಅತ್ಯಂತ ಗ್ರಾಮೀಣ ಪ್ರದೇಶವಾದ ವಾಜಗದ್ದೆ ಸರ್ಕಾರಿ ಶಾಲೆ ಹಾಗೂ ಹಾರ್ಸಿಕಟ್ಟಾದ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದ ದಿನೇಶ್, ಮೈಸೂರಿನ ಯುವರಾಜಕಾಲೇಜಿನಲ್ಲಿ ವಿಜ್ಞಾನ ಪದವಿ ಹಾಗೂ ಮೈಸೂರು ವಿವಿಯಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ ಸಿ ಪದವಿ ಪಡೆದಿದ್ದಾರೆ.

Comments are closed.