ಉಡುಪಿ : MASK ಇಲ್ಲದಿದ್ರೆ ಕೊರೊನಾ ಟೆಸ್ಟ್‌ : ಮಾಸ್ಕ್‌ ಮರೆತೀರಾ ಹುಷಾರ್ !

ಉಡುಪಿ : ಒಂದೆಡೆ ಕೊರೊನಾ ಮಿತಿಮೀರುತ್ತಿದೆ. ಇನ್ನೊಂದೆಡೆ ಮಾಸ್ಕ್‌ ಮರೆತು ಜನರು ಸಂಚರಿಸುತ್ತಿದ್ದಾರೆ. ಇನ್ಮುಂದೆ ಮಾಸ್ಕ್‌ ಇಲ್ಲದೇ ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರ. ಯಾಕೆಂದ್ರೆ ಮಾಸ್ಕ್‌ ಮರೆತು ಮನೆಯಿಂದ ಹೊರ ಬಂದ್ರೆ ನಿಮಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್‌ ನಡೆಸೋದು ಗ್ಯಾರಂಟಿ.

ಕರಾವಳಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಜನರು ಕೊರೊನಾ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಇನ್ಮುಂದೆ ಮಾಸ್ಕ್‌ ಧರಿಸದೇ ಓಡಾಡುವವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್‌ ನಡೆಸಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಸೇರಿದಂತೆ ಕೋವಿಡ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾದ ಅಗತ್ಯವಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಮಾಸ್ಕ್‌ ಕಡ್ಡಾಯವಾಗಿ ಧರಿಸಲೇ ಬೇಕು. ಸಾರ್ವಜನಿಕವಾಗಿ ಮಾಸ್ಕ್‌ ಇಲ್ಲದೇ ಓಡಾಡುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗವು ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚಳವಾಗುತ್ತಿದೆ. ಆದರೂ ಕೂಡ ಜನರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಇನ್ಮುಂದೆ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕೊರೊನಾ ನಿಯಮ ಪಾಲನೆಗೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ : ಮಂಗಳೂರು – ದುಬೈ ವಿಮಾನಯಾನ ಆರಂಭ : ಏರ್‌ಪೋರ್ಟ್‌ನಲ್ಲೇ RTPCR ಟೆಸ್ಟ್‌

ಇದನ್ನೂ ಓದಿ : ದ.ಕ, ಉಡುಪಿಯಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲಾ ಕೊರೊನಾ : ಈ ನಿಯಮಗಳನ್ನು ಪಾಲಿಸಿ ಅಂತಿದೆ ಆರೋಗ್ಯ ಇಲಾಖೆ

ಇದನ್ನೂ ಓದಿ : ಕರಾವಳಿಯ ಶಿಕ್ಷಣ ಸಂಸ್ಥೆಗಳಿಗೆ ಹೊಡೆತ ಕೊಟ್ಟ ಕೊರೊನಾ : ಮಕ್ಕಳನ್ನು ಕಾಲೇಜಿಗೆ ದಾಖಲಿಸಲು ಪೋಷಕರ ಹಿಂದೇಟು

Comments are closed.