ಹಾಲು ಮತ್ತು ಬೆಲ್ಲದ ಗುಟ್ಟು ! ತಿಂದವರಿಗಷ್ಟೆ ಗೊತ್ತು !

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಬೆಲ್ಲವನ್ನು ಗುರ್ ಎಂದು ಕರೆಯಲಾಗುತ್ತದೆ. ಔಷಧೀಯ ಮೌಲ್ಯಗಳಿಂದಾಗಿ, ಇದನ್ನು ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಕಬ್ಬು, ತಾಳೆ ಅಥವಾ ಖರ್ಜೂರದ ತಾಜಾ ರಸದಿಂದ ಬೆಲ್ಲವನ್ನು ತಯಾರಿಸಲಾಗುತ್ತದೆ. ಹಾಲು ಮತ್ತು ಬೆಲ್ಲ ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎರಡನ್ನೂ ಒಟ್ಟಿಗೆ ಸೇರಿಸಿದರೆ ಇದರ ಲಾಭ ದುಪ್ಪಟಾಗುತ್ತದೆ.

ಸಿಹಿ ಮತ್ತು ರುಚಿಕರವಾದ ಬೆಲ್ಲ ಮತ್ತು ಹಾಲಿನ ಮಿಶ್ರಣವನ್ನು ಹಾಗೇ ಕುಡಿಯಬಹುದು. ಈ ಮಿಶ್ರಣವನ್ನು ಸಿಹಿ ಖಾದ್ಯಗಳಾದ ಪಾಯಸ, ಸ್ವೀಟ್ ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು. ಸಕ್ಕರೆಯ ಬದಲು ಅನೇಕ ಸಿಹಿ ಖಾದ್ಯಗಳಿಗೆ ಬೆಲ್ಲವನ್ನು ಸಿಹಿಯಾಗಿ ಸೇರಿಸಬಹುದು. ಇದರಿಂದ ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುವುದು. ಇದರ ಜೊತೆಗೆ ನೆಗಡಿ ಮತ್ತು ಕೆಮ್ಮನ್ನು ಗುಣಪಡಿಸಲು, ಬೆಲ್ಲವನ್ನು ಬೆಚ್ಚಗಿನ ಹಾಲಿನೊಂದಿಗೆ ಸೇರಿಸಿ, ಕುಡಿಯಬಹುದು.

ಹಾಲಿನಲ್ಲಿ ಹೆಚ್ಚಿನ ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಬಿ, ಪ್ರೋಟೀನ್ ಮತ್ತು ಇತರ ಅನೇಕ ಪೋಷಕಾಂಶಗಳು ಇರುವುದರಿಂದ, ಅತ್ಯಂತ ಪೌಷ್ಟಿಕ ಪಾನೀಯವಾಗಿದೆ. ಹಾಲನ್ನು ಬೆಲ್ಲದೊಂದಿಗೆ ಬೆರೆಸಿದಾಗ ಹಾಲಿನ ಪೌಷ್ಠಿಕಾಂಶದ ಮೌಲ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಬೆಲ್ಲವನ್ನು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದ್ದು, ದೇಹದ ವಿಷವನ್ನು ಶುದ್ಧೀಕರಿಸುವ ಡಿಟಾಕ್ಸಿಫೈಯಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಬೆಲ್ಲದ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣವಿರುವುದರಿಂದ, ಇದನ್ನು ಪ್ರತಿದಿನ ಸೇವಿಸಿದರೆ, ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿರುವ ಸುಕ್ರೋಸ್ ನಿಂದ ನೀವು ಶಕ್ತಿಯನ್ನು ಪಡೆಯುವುದಲ್ಲದೇ, ಸುಸ್ತು ಹಾಗೂ ದೌರ್ಬಲ್ಯವನ್ನು ದೂರಮಾಡುವುದು. ಬೆಲ್ಲ ಮತ್ತು ಹಾಲು ಕರುಳಿನ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಏಕೆಂದರೆ ಇದು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಪ್ರತಿದಿನ ಊಟದ ನಂತರ, ಜೀರ್ಣಕ್ರಿಯೆ ಸರಿಯಾಗಿ ಆಗಲು ಸ್ವಲ್ಪ ಬೆಲ್ಲವನ್ನು ತಿನ್ನಬಹುದು. ಇದು ಕರುಳಿನ ಹುಳುಗಳ ಅಜೀರ್ಣ, ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆ ಗಳನ್ನು ದೂರಮಾಡಲು ಸಹಾಯ ಮಾಡುತ್ತದೆ. ಇದು ಲ್ಯಾಕ್ಟಿಕ್ ಆಮ್ಲವನ್ನು ಉತ್ಪಾದಿಸಿ, ಚರ್ಮವನ್ನು ಟೋನ್ ಮಾಡಲು ಸಹಾಯ ಮಾಡುವ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಬೆಲ್ಲದ ಹಾಲು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದ್ದು, ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

ಬೆಲ್ಲದಲ್ಲಿರುವ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ನಿಯಂತ್ರಿಸುತ್ತದೆ ಜೊತೆಗೆ, ಚಯಾಪಚಯ ಕ್ರಿಯೆ ಹೆಚ್ಚಿಸುವುದರ ಜೊತೆಗೆ ಸ್ನಾಯು ಗಳನ್ನು ಗಟ್ಟಿ ಮಾಡುವುದು. ಇದು ಮುಟ್ಟಿನೊಂದಿಗೆ ಸಂಬಂಧಿಸಿದ ಸೆಳೆತ ಮತ್ತು ಹೊಟ್ಟೆ ನೋವನ್ನು ಕೂಡ ಕಡಿಮೆ ಮಾಡುತ್ತದೆ. ನೀವು ಕೆನೆರಹಿತ ಅಥವಾ ಕಡಿಮೆ ಕೊಬ್ಬಿನ ಹಾಲನ್ನು ಸೇವಿಸಿದರೆ, ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಲಿಗೆ ಸಕ್ಕರೆ ಹಾಕಿ ಕುಡಿಯೋದು ವಾಡಿಕೆ. ಆದರೆ ಇನ್ನು ಮುಂದೆ ಸಕ್ಕರೆಯ ಬದಲು ಬೆಲ್ಲ ಹಾಕಿ ಹಾಲು ಕುಡಿದು, ನಿಮ್ಮ ಅರೋಗ್ಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಿ.

ಇದನ್ನೂ ಓದಿ : ಗರ್ಭಾವಸ್ಥೆಯಲ್ಲಿ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಹೇಗೆ : ಇಲ್ಲಿದೆ ಉಪಯುಕ್ತ ಸಲಹೆ

ಇದನ್ನೂ ಓದಿ : ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಮಾಡಿ ಮಸಾಜ್‌ : ಬೆನಿಫಿಟ್ಸ್‌ ಕೇಳಿದ್ರೆ ನೀವೂ ಖಂಡಿತಾ ಮಿಸ್‌ ಮಾಡಲ್ಲ.

ಇದನ್ನೂ ಓದಿ : ಜೋಳ ತಿಂದ ಕೂಡಲೇ ನೀರು ಕುಡಿತೀರಾ ? ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಲೇ ಬೇಡಿ !

Comments are closed.