ಕಾರ್ಕಳ ಪರಶುರಾಮ ಪ್ರತಿಮೆ ಪ್ರಕರಣ : ನ್ಯಾಯಾಲಯಕ್ಕೆ ಮುನಿಯಾಲು ಪಿಐಎಲ್‌ ಸಲ್ಲಿಕೆ

Karkala Parashurama statue : ಕಾರ್ಕಳ : ಪರಶುರಾಮ ಥೀಮ್‌ ಪಾರ್ಕ್‌ನಲ್ಲಿರುವ ಪರಶುರಾಮ ಮೂರ್ತಿ ಮರುಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಉದಯ್‌ ಕುಮಾರ್‌ ಶೆಟ್ಟಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಚುನಾವಣೆಯಲ್ಲಿ ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದರು.

ಅಲ್ಲದೇ ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿದೆ ಅನ್ನೋ ಆರೋಪ ಮಾಡಿದ್ದರು. ಕಳೆದ ಎರಡು ವರ್ಷಗಳಿಂದಲೂ ಪರಶುರಾಮನ ಮೂರ್ತಿ ಫೈಬರ್‌ನಿಂದ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಮೂರ್ತಿ ಮರು ಸ್ಥಾಪನೆಗೆ ಬಿಡುವುದಿಲ್ಲ ಎಂದಿದ್ದರು.

ಅಲ್ಲದೇ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಕಾರ್ಕಳಕ್ಕೆ ಕರೆಯಿಸಿ ಬೃಹತ್‌ ಸಮಾವೇಶ ನಡೆಸಿದ್ದರು. ಕಾರ್ಕಳದಲ್ಲಿ ಈ ಹಿಂದೆ ನಡೆಸಿದ್ದ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ ಜೇಳಿಕೆಯೊಂದನ್ನು ನೀಡಿದ್ದರು.

ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿ ನಿರ್ಮಾಣ ಮಾಡುವುದು ಬೇಡಾ. ಜನರು ಮೂರ್ತಿಯನ್ನೇ ನೋಡಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಕೊಡ್ತಾರೆ ಅಂತಾನೂ ಹೇಳಿಕೆ ನೀಡಿದ್ದರು.

ಈ ಹಿಂದೆ ಉದಯ್‌ ಕುಮಾರ್‌ ಶೆಟ್ಟಿ ಅವರೇ ಪರಶುರಾಮ ಥೀಮ್‌ ಪಾರ್ಕ್‌ ರಸ್ತೆಗೆ ಮಣ್ಣು ತಂದು ಸುರಿದಿದ್ದರು ಅನ್ನೋ ಆರೋಪವೂ ಕೇಳಿಬಂದಿತ್ತು.

ಆದ್ರೆ ಕಳೆದ ಒಂದು ವಾರದ ಹಿಂದೆಯಷ್ಟೇ ಪರಶುರಾಮ ಮೂರ್ತಿ ವಿಚಾರದಲ್ಲಿ ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

Also Read : ಪಿಎಂ ಕಿಸಾನ್ ಯೋಜನೆ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಹಣ

ಪರಶುರಾಮ ಮೂರ್ತಿಯನ್ನು ಫೈಬರ್‌ ನಿಂದ ಮಾಡಿಲ್ಲ ಅನ್ನೋದನ್ನು ಚಾರ್ಜ್‌ಶೀಟ್‌ನಲ್ಲಿ ಕಾರ್ಕಳ ಪೊಲೀಸರು ಉಲ್ಲೇಖಿಸಿದ್ದರು.

ಆದ್ರೀಗ ಉದಯ್‌ ಕುಮಾರ್‌ ಶೆಟ್ಟಿ ಅವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ತಮ್ಮ ಅರ್ಜಿಯಲ್ಲಿ ಪರಶುರಾಮನ ಮೂರ್ತಿಯನ್ನು ಮರು ಸ್ಥಾಪನೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ಥೀಮ್‌ ಪಾರ್ಕ್‌ ಯೋಜನೆಗೆ ತಡೆಯೊಡ್ಡಿದ ಉದಯ್‌ ಕುಮಾರ್‌ ಶೆಟ್ಟಿ ಅವರೇ ಇದೀಗ ನ್ಯಾಯಾಲಕ್ಕೆ ಪಿಐಎಲ್‌ ಸಲ್ಲಿಕೆ ಮಾಡಿದ್ದಾರೆ.

ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್‌ ನಲ್ಲಿ ಇರುವ ಪರಶುರಾಮ ಮೂರ್ತಿ ಫೈಬರ್‌ ಅಲ್ಲಾ ಅನ್ನೋದು ದೃಢಪಟ್ಟದೆ.

ಇದರ ಬೆನ್ನಲ್ಲೇ ನ್ಯಾಯಾಲಯದ ಮೊರೆ ಹೋಗಿರುವ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಅವರ ನಿಲುವು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Karkala Parashurama statue case Muniyalu Uday kumar Shetty files PIL in court

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories