ಬೆಂಗಳೂರು : ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ನಟ ಚೇತನ್ ರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಧೀಶರು ಚೇತನ್ ಗೆ 14 ದಿನಗಳನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇನ್ನೊಂದೆಡೆ ನಟ ಚೇತನ್ ಬಿಡುಗಡೆಗಾಗಿ ಚೇತನ್ ಪರ ವಕೀಲರಾದ ಕೆ.ಬಾಲನ್ 8 ನೇ ಎಸಿಎಂಎಂ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಂದು ನಟ ಚೇತನ್ (Actor Chetan bail ) ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಮಂಗಳವಾರ ಸಂಜೆ ನಾಲ್ಕು ಗಂಟೆ ವೇಳೆಗೆ ಚೇತನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಸುಮೋಟು ಪ್ರಕರಣ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ರನ್ನು ವಶಕ್ಕೆ ಪಡೆದಿದ್ದಾರೆ . ವೈದ್ಯಕೀಯ ಪರೀಕ್ಷೆ ಬಳಿಕ ಚೇತನ್ ರನ್ನ ಮಧ್ಯರಾತ್ರಿ 12 ಗಂಟೆ ವೇಳೆಗೆ ಕೋರಮಂಗಲದ ನ್ಯಾಯಾಧೀಶರ್ ಸಂಕೀರ್ಣದಲ್ಲಿ ಜಡ್ಜ್ ಮುಂದೇ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರಿಗೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಿದ್ದಾರೆ. ಇನ್ನು ತಮ್ಮ ಪತಿಯನ್ನು ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡದೇ ಬಂಧಿಸಲಾಗಿದೆ ಎಂದು ಆರೋಪಿಸಿ ನಟ ಚೇತನ್ ಪತ್ನಿ ಮೇಘಾ ಪತಿ ಬಂಧನದ ಬಳಿಕ ಆರೋಪಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಲೈವ್ ನಡೆಸಿದ್ದರು.
ಮಾತ್ರವಲ್ಲ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಚೇತನರನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು. ಬಳಿಕ ಶೇಷಾದ್ರಿಪುರಂ ಪೊಲೀಸರು ಚೇತನ್ ಬಂಧನವನ್ನು ಖಚಿತಪಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ನನ್ನು ನ್ಯಾಯಾಧೀಶರ್ ನಿವಾಸಕ್ಕೆ ಹಾಜರು ಪಡಿಸಿದ ಬಳಿಕ ಮಾತನಾಡಿದ ಚೇತನ್ ಪತ್ನಿ ಮೇಘಾ, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ.ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ
ಯಾವುದೇ ಆಕ್ಷೇಪಾರ್ಹ ಪದಗಳನ್ನ ಬಳಸಿ ಚೇತನ್ ಮಾತನಾಡಿಲ್ಲ.ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಚೇತನ್ ವಿರುದ್ಧ ಕಾನೂನಿನ ಘನತೆಗೆ ಧಕ್ಕೆ ತರುವಂತ ಬರಹಗಳನ್ನು ಪೋಸ್ಟ್ ಮಾಡುವಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲಿನ ಜನಸಾಮಾನ್ಯರ ನಂಬಿಕೆಗೆ ಧಕ್ಕೆ ತರುವಂತ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪವಿದೆ. ಈಗಾಗಲೇ ಜೈಲು ಸೇರಿರುವ ಚೇತನ್ ಗೆ ತುರ್ತು ಬೇಲ್ ಸಿಗೋದು ಅನುಮಾನವಾಗಿದ್ದು ಇನ್ನೇರಡು ದಿನಗಳ ಕಾಲ ಜೈಲೇ ಗತಿ ಎನ್ನಲಾಗುತ್ತಿದೆ.
ಇದನ್ನೂ ಓದಿ : ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣ : 6 ಮಂದಿ ಅರೆಸ್ಟ್, ಫೆ. 25ರ ವರೆಗೆ ಶಾಲೆ, ಕಾಲೇಜಿಗೆ ರಜೆ ವಿಸ್ತರಣೆ
ಇದನ್ನೂ ಓದಿ : ನ್ಯಾಯಾಂಗ ನಿಂದನೆ ಆರೋಪ : ನಟ ಚೇತನ್ ರನ್ನು ವಶಕ್ಕೆ ಪಡೆದ ಪೊಲೀಸರು
(Actor Chetan, who was sentenced to jail for contempt of court, will be held today in a bail application hearing)