No Re exam : ಪರೀಕ್ಷೆ ಗೈರಾದ್ರೆ ಮರು ಪರೀಕ್ಷೆಯಿಲ್ಲ; ಅಂತಿಮ ಪರೀಕ್ಷೆಗೂ ಹಿಜಾಬ್‌ ಧರಿಸಲು ಅವಕಾಶವಿಲ್ಲ : ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ನಮ್ಮ ಹಕ್ಕು.‌ಹಿಬಾಜ್ ಧರಿಸಲು ಅವಕಾಶವಿಲ್ಲದಿದ್ದರೇ ತರಗತಿಗೆ ಹಾಜರಾಗೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ‌ಮಧ್ಯೆ ಸೋಮವಾರದಿಂದ ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಿದೆ. ಹಿಜಾಬ್ ಗಾಗಿ ಹೋರಾಟಕ್ಕೆ ಮುಂದಾಗಿರೋ ಕೆಲವು ದ್ವೀತಿಯ ಪಿಯುಸಿ ಸೈನ್ಸ್ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದಾರೆ. ಆದ್ರೀಗ ಪರೀಕ್ಷೆಗೆ ಗೈರು ಹಾಜರಾಗಿರುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಖಡಕ್‌ ಸೂಚನೆಯನ್ನು ರವಾನಿಸಿದ್ದಾರೆ. ಪರೀಕ್ಷೆಗೆ ಗೈರು ಹಾಜರಾದವರಿಗೆ ಮರು ಪರೀಕ್ಷೆಯಿಲ್ಲ (No Re exam ), ಜೊತೆಗೆ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಮಾರ್ಚ್ 25 ರವರೆಗೆ ದ್ವೀತಿಯ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಂ ಗಳು ನಡೆಯಲಿವೆ. ಆದರೆ ಹಿಜಾಬ್ ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿನಿಯರು ಸೋಮವಾರದಿಂದ ಆರಂಭಗೊಂಡಿರುವ ಪರೀಕ್ಷೆಗೆ ಹಾಜರಾಗಿಲ್ಲ. ಆದರೆ ಈ ಎಲ್ಲಾ ಸಂದೇಹಗಳಿಗೆ ಸ್ಪಷ್ಟನೆ ನೀಡಿರೋ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೈಕೋರ್ಟ್ ಆದೇಶ ಬಂದ ಮೇಲೆ ಮುಗಿತು. ಸಮವಸ್ತ್ರ ಪಾಲಿಸಿ ಅಂತ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ಮೇಲೆ ಹಿಜಾಬ್ ಗೆ ಅವಕಾಶ ನೀಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಯರು ಪರೀಕ್ಷೆ ಗೆ ಅಟೆಂಡ್ ಆಗೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ನಾವು ಅವರ ಕೈಹಿಡಿದು ಪರೀಕ್ಷೆ ಬರೆಸಲು ಸಾಧ್ಯವಿಲ್ಲ. ಆದರೆ ಪರೀಕ್ಷೆಗೆ ಹಿಜಾಬ್ ಧರಿಸಿ ಬರೆಯಲು ಯಾವ ಕಾರಣಕ್ಕೂ ಅವಕಾಶವಿಲ್ಲ.

ಕೇವಲ ಪ್ರಾಯೋಗಿಕ ಪರೀಕ್ಷೆಗೆ ಮಾತ್ರ ಅಂತಿಮ ಪರೀಕ್ಷೆಗೂ ಹಿಜಾಬ್ ಧರಿಸಿ ಬರುತ್ತೇನೆ ಎಂದು ಹಠ ಹಿಡಿದರೆ ಅವಾಗಲೂ ಅವಕಾಶ ನೀಡಲ್ಲ. ಪ್ರ್ಯಾಕ್ಟಿಕಲ್ ಎಕ್ಸಾಂಗೆ ಗೈರಾದರೇ ಮತ್ತೆ ಸಪ್ಲಿಮೆಂಟರಿ ಪರೀಕ್ಷೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ವಿದ್ಯಾರ್ಥಿನಿಯರು ಒಂದೊಮ್ಮೆ ಪ್ರಾಯೋಗಿಕ ಪರೀಕ್ಷೆಗೆ ಗೈರಾದರೇ ಅವರು 30 ಅಂಕ ಕಳೆದುಕೊಳ್ಳುತ್ತಾರೆ. ಒಂದೊಮ್ಮೆ ಅಂತಿಮ ಪರೀಕ್ಷೆಯೊಳಗೆ ಹಿಜಾಬ್ ಪ್ರಕರಣದ ಕೋರ್ಟ್ ತೀರ್ಪು ಬಂದರೇ ಆಗ ವಿದ್ಯಾರ್ಥಿಗಳು ಹೈಕೋರ್ಟ್ ಸೂಚನೆ ಪಾಲಿಸಬಹುದು.

ಅದರೆ ಹೈಕೋರ್ಟ್ ಆದೇಶ ಬರುವರೆಗೂ ಯಾವ ಕಾರಣಕ್ಕೂ ಹಿಜಾಬ್ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ರಾಜ್ಯದಾದ್ಯಂತ 86 ಸಾವಿರ ಮುಸ್ಲಿಂ ವಿದ್ಯಾರ್ಥಿನಿ ಯರು ಅಧ್ಯಯನ ಮಾಡುತ್ತಿದ್ದಾರೆ ‌. ಈ ಪೈಕಿ ಕೇವಲ 500-600 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಹೋರಾಟದ ಹೆಸರಿನಲ್ಲಿ ಗೈರಾಗುತ್ತಿದ್ದಾರೆ ಎಂದಿದ್ದಾರೆ. ವಿದ್ಯಾರ್ಥಿನಿಯರು ಯೋಚನೆ ಮಾಡಿ ತೀರ್ಮಾನಮಾಡಬೇಕು. ಒಂದೊಮ್ಮೆ ಪ್ರ್ಯಾಕ್ಟಿಕಲ್ ಮಿಸ್ ಮಾಡಿದರೇ ಅವರು ಮುಂದೇ ಕೇವಲ 70 ಮಾರ್ಕ್ಸ್ ಗೆ ಪರೀಕ್ಷೆ ಬರೆಯಬೇಕಾಗುತ್ತದೆ ಎಂದು ಸಚಿವ ಬಿ.ಸಿ.ನಾಗೇಶ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಯೂಟ್ಯೂಬ್ ವಿಡಿಯೋ ಮೂಲಕ ಕಲಿತು ನೀಟ್ ಎಕ್ಸಾಂ ಕ್ಲಿಯರ್ ಮಾಡಿದ ಕಾಶ್ಮೀರಿ ಹುಡುಗ ತುಫೈಲ್ ಅಹ್ಮದ್

ಇದನ್ನೂ ಓದಿ : ನಾಳೆಯಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ: ಕುತೂಹಲ‌ ಮೂಡಿಸಿದೆ ಹಿಜಾಬ್ ಮಕ್ಕಳ ನಡೆ

( Hijab Row : There is no re exam, The final test is not allowed to wear the hijab says Education Minister BC Nagesh)

Comments are closed.