divya suresh violates night curfew : ಮದ್ಯದ ನಶೆಯಲ್ಲಿ ನೈಟ್​ ಕರ್ಫ್ಯೂ ಉಲ್ಲಂಘಿಸಿದ ನಟಿ ದಿವ್ಯಾ ಸುರೇಶ್​..!

ಬೆಂಗಳೂರು : ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ನಿನ್ನೆಯಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ನಿನ್ನೆಯಿಂದ ಆರಂಭವಾದ ನೈಟ್​ ಕರ್ಫ್ಯೂವಿನ ಮೊದಲ ದಿನ ಪೂರ್ಣಗೊಂಡಿದೆ. ನೈಟ್​ ಕರ್ಫ್ಯೂ ಮೊದಲ ದಿನವೇ ಬಿಗ್​ ಬಾಸ್​ ಸೀಸನ್​ 8ರ ಖ್ಯಾತಿಯ ದಿವ್ಯಾ ಸುರೇಶ್​​ ಮದ್ಯಪಾನ ಮಾಡಿ ( divya suresh violates night curfew) ರಂಪಾಟ ಮಾಡಿದ್ದಾರೆ.


ಬೆಂಗಳೂರಿನ ಬ್ರಿಗೇಡ್​ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಸ್ನೇಹಿತರ ಜೊತೆ ಇದ್ದ ದಿವ್ಯಾ ಸುರೇಶ್​ ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ. ಸ್ನೇಹಿತರೊಂದಿಗೆ ಬ್ರಿಗೇಡ್​ ರೋಡ್​ ಸುತ್ತುತ್ತಿದ್ದ ದಿವ್ಯಾ ಸುರೇಶ್​​ಗೆ ಪೊಲೀಸರು ನೈಟ್​ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ದಿವ್ಯಾ ಸುರೇಶ್​​ ಪೊಲೀಸರ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಿಗ್​​ ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಂಡಿದ್ದ ನಟಿ ದಿವ್ಯಾ ಸುರೇಶ್​​ ಈ ಸೀಸನ್​​ನ ಟಾಪ್​​ 6 ಸ್ಪರ್ಧಿಯಾಗಿ ಹೊರಹೊಮ್ಮಿದ್ದರು. ಕೂದಲೆಳೆ ಅಂತರದಲ್ಲಿ ದಿವ್ಯಾ ಸುರೇಶ್​​ಗೆ ಬಿಗ್​ ಬಾಸ್​ ಫೈನಲ್​ನಲ್ಲಿ ಸ್ಪರ್ಧಿಸುವ ಅವಕಾಶ ಕೈತಪ್ಪಿ ಹೋಗಿತ್ತು.

ರಾಜ್ಯಾದ್ಯಂತ ಡಿಸೆಂಬರ್​ 28ರಿಂದ ಜನವರಿ 7ರವರೆಗೆ ನೈಟ್​ ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ. ರಾತ್ರಿ 10 ಗಂಟೆಗೆ ಆರಂಭಗೊಳ್ಳುವ ನೈಟ್​ ಕರ್ಫ್ಯೂ ಬೆಳಗ್ಗೆ 5 ಗಂಟೆಗೆ ಕೊನೆಗಾಣಲಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಸೇವೆ, ಸಾರಿಗೆ ಸೇವೆ, ಕಂಪನಿಗಳು ಸೇರಿದಂತೆ ವಿವಿಧ ಅಗತ್ಯ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪಬ್​,, ಲೇಟ್​ ನೈಟ್​ ಪಾರ್ಟಿ,ಹೋಟೆಲ್​ಗಳಿಗೆ ನೈಟ್​ ಕರ್ಫ್ಯೂ ಅವಧಿಯಲ್ಲಿ ಅವಕಾಶ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಣೆಯನ್ನು ಹೊರಡಿಸಿದೆ. ಅಲ್ಲದೇ ಈ 10 ದಿನಗಳಲ್ಲಿ ಕೊರೊನಾ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ: Omicron Survey : ಬೆಂಗಳೂರಿನಲ್ಲಿ ಸದ್ದಿಲ್ಲದೇ ಏರುತ್ತಿದೆ ಓಮಿಕ್ರಾನ್‌ ಸೋಂಕಿತರ ಸಂಖ್ಯೆ: ಮನೆ ಮನೆ ಸರ್ವೇಗೆ ಆರೋಗ್ಯ ಇಲಾಖೆ ಆದೇಶ

ಇದನ್ನೂ ಓದಿ : Corona Vaccine to Children : ಮಕ್ಕಳಿಗೂ ಸಿಗಲಿದೆ ಲಸಿಕೆ: ವಾಕ್ಸಿನ್ ನೀಡಲು ಬಿಬಿಎಂಪಿ ಮಾಸ್ಟರ್ ಪ್ಲ್ಯಾನ್

biggboss fame divya suresh violates night curfew rules..!

Comments are closed.