ರಾಜ್ಯದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್ : ಸಿಎಂ ನೇತೃತ್ವದಲ್ಲಿ ನಡೆಯುತ್ತೆ ಮಹತ್ವದ ಸಭೆ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕರ್ನಾಟಕ ದಲ್ಲಿ ಇಳಿಕೆಯಾಗುತ್ತಿದೆ. ಆದರೆ ಸಾವಿನ ಪ್ರಮಾಣ ಇಳಿಕೆ ಕಾಣುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಸ ಬೇಕೆ ? ಬೇಡವೇ ? ಅನ್ನೋ ಕುರಿತು ಇಂದು ಸಂಜೆ ನಿರ್ಧಾರವಾಗ ಲಿದೆ.

ರಾಜ್ಯ ಸರಕಾರ ಜಾರಿ ಮಾಡಿದ್ದ ಲಾಕ್ ಡೌನ್ ಜೂನ್ 7 ರಂದು ಮುಕ್ತಾಯವಾಗಲಿದೆ. ಆದರೆ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಡಿಮೆ ಯಾಗಿಲ್ಲ. ಜೊತೆಗೆ  ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಾದರೆ ಕರ್ಫ್ಯೂ ನಿಯಮ ಸಡಿಲಿಸಬಹುದು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ತೆರವು ರಾಜ್ಯದಲ್ಲಿ ಆಗುತ್ತಾ ಅನ್ನೋ ಕುತೂಹಲ ಮೂಡಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದೆ. ಪ್ರಸ್ತುತ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.12.30 ರಷ್ಟಿದೆ. ಲಾಕ್‌ಡೌನ್ ತೆರವು‌ ಮಾಡಿದ್ರೆ ಸೋಂಕಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಲಾಕ್ ಡೌನ್ ಜಾರಿಯ ಬೆನ್ನಲ್ಲೇ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಯಾಗಿತ್ತು. ಹೀಗಾಗಿ ಲಾಕ್ ಡೌನ್ ಇನ್ನೊಂದು ವಾರ ಮುಂದುವರಿಕೆ ಮಾಡುವುದು ಸೂಕ್ತ ಅನ್ನೋ ಕುರಿತು ಕೆಲ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ.

ಇಂದು ಸಂಜೆ ಸಿಎಂ ಯಡಿಯೂರಪ್ಪ ಖ್ಯಾತ ತಜ್ಞ ಡಾ. ದೇವಿ ಶೆಟ್ಟಿ ಸೇರಿದಂತೆ ಹಲವು ತಜ್ಞರ ಜೊತೆಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಲಾಕ್ ಡೌನ್ ತೆರವು ಮಾಡ ಬೇಕೆ ? ಇಲ್ಲ ಇನ್ನೆಷ್ಟು ದಿನ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಅನ್ನುವ ಕುರಿತು ಚರ್ಚೆ ನಡೆಸಲಿದ್ದಾರೆ. ತಜ್ಞರ ಸಭೆಯ ನಂತರದಲ್ಲಿ ಸಚಿವರ ಜೊತೆ ಸಭೆ ನಡೆಸಿ ಒಂದೆರಡು ದಿನಗಳ ನಂತರ ಲಾಕ್ ಡೌನ್ ಭವಿಷ್ಯ ನಿರ್ಧಾರವಾಗಲಿದೆ.

Comments are closed.