ಭಾರತ – ಪಾಕಿಸ್ತಾನ ಪಂದ್ಯ : ಟಾಸ್ ಗೆದ್ದ ಭಾರತ ಬೌಲಿಂಗ್‌ ಆಯ್ಕೆ, ತಂಡಕ್ಕೆ ಮರಳಿದ ಶುಭಮನ್‌ ಗಿಲ್‌

ಭಾರತ ಹಾಗೂ ಪಾಕಿಸ್ತಾನ ತಂಡಗಳು (india vs pakistan) ಮುಖಾಮುಖಿಯಾಗುತ್ತಿವೆ. ಟಾಸ್‌ ಗೆದ್ದಿರುವ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡಕ್ಕೆ ಶುಭಮನ್‌ ಗಿಲ್‌ (Shubman Gill In)  ವಾಪಾಸಾಗಿದ್ದು, ಇಶಾನ್‌ ಕಿಶಾನ್‌ (Ishan Kishan out) ತಂಡದಿಂದ ಹೊರಬಿದ್ದಿದ್ದಾರೆ.

ಅಹಮದಾಬಾದ್‌ : ವಿಶ್ವಕಪ್‌ನಲ್ಲಿ (world Cup 2023) ಭಾರತ ಹಾಗೂ ಪಾಕಿಸ್ತಾನ ತಂಡಗಳು (india vs pakistan) ಮುಖಾಮುಖಿಯಾಗುತ್ತಿವೆ. ಟಾಸ್‌ ಗೆದ್ದಿರುವ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡಕ್ಕೆ ಶುಭಮನ್‌ ಗಿಲ್‌ (Shubman Gill In)  ವಾಪಾಸಾಗಿದ್ದು, ಇಶಾನ್‌ ಕಿಶಾನ್‌ (Ishan Kishan out) ತಂಡದಿಂದ ಹೊರಬಿದ್ದಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Ahamedabad Narendra modi stadium )ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೊದಲು ಬ್ಯಾಟಿಂಗ್‌ ನಡೆಸಲಿದೆ. ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ದ ಆಡಿರುವ ತಂಡವನ್ನೇ ಕಣಕ್ಕೆ ಇಳಿಸಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಪಂದ್ಯವನ್ನು 1.20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ.

India vs Pakistan match Cricket World Cup 2023 India won the toss and chose to bowl, Shubman Gill in Ishan Kishan and Ashwin Out
Image Credit : BCCI

ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಹಲವು ಬಾರಿ ಮುಖಾಮುಖಿಯಾಗಿವೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ಪಾಕಿಸ್ತಾನವೇ ಅತೀ ಹೆಚ್ಚು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ವಿಶ್ವಕಪ್‌ ಅಂಕಿ ಅಂಶಗಳನ್ನು ನೋಡಿದ್ರೆ ಭಾರತದ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 7 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಪಾಕಿಸ್ತಾನ ಇದುವರೆಗೂ ಒಂದೇ ಒಂದು ಪಂದ್ಯಗಳನ್ನು ಜಯಿಸಿಲ್ಲ.

ಇದನ್ನೂ ಓದಿ :ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ವಾಡಾ ನಿಷೇಧದ ಭೀತಿ !

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 36 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನವಿದೆ. ಹಗಲು ರಾತ್ರಿಯ ಪಂದ್ಯವಾಗಿರುವ ಹಿನ್ನೆಲೆಯಲ್ಲಿ ಇಬ್ಬನಿಯು ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ. ಪಿಚ್‌ ಕಪ್ಪು ಬಣ್ಣದಿಂದ ಕೂಡಿದ್ದು, ಹಸಿರು ಹೊದಿಕೆಯನ್ನು ಒಳಗೊಂಡಿದೆ. ಇಲ್ಲಿನ ಪಿಚ್‌ನಲ್ಲಿ 330-340 ರನ್‌ ಗಳಿಸಲು ನೆರವಾಗಲಿದೆ.

India vs Pakistan match Cricket World Cup 2023 India won the toss and chose to bowl, Shubman Gill in Ishan Kishan and Ashwin Out
image Credit to Original Source

ಈ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಗ್‌ ಸ್ನೇಹಿಯಾಗಿದೆ. ಒಟ್ಟು 29 ಏಕದಿನ ಪಂದ್ಯಗಳು ನಡೆದಿದ್ದು, ಈ ಪೈಕಿ 16 ಬಾರಿ ಮೊದಲ ಬಾರಿಗೆ ಬ್ಯಾಟಿಂಗ್‌ ನಡೆಸಿದ ತಂಡ ಗೆಲುವು ದಾಖಲಿಸಿದ್ರೆ, 13 ಬಾರಿ ಎರಡನೇ ಬ್ಯಾಟಿಂಗ್‌ ನಡೆಸಿದ ತಂಡ ಜಯಿಸಿದೆ. ಈ ಮೈದಾನದಲ್ಲಿ 365 ಸರ್ವಾಧಿಕ ರನ್‌ ದಾಖಲಿಸಿದೆ. ಜೊತೆಗೆ ಎರಡನೇ ಬಾರಿಗೆ ಬ್ಯಾಟಿಂಗ್‌ ಮಾಡಿದ ತಂಡ 325 ರನ್‌ ಬಾರಿಸಿತ್ತು. ಈ ಪಿಚ್‌ನಲ್ಲಿ 85 ರನ್‌ ಕನಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌ ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್‌ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್

ಇದನ್ನೂ ಓದಿ : ವಿಶ್ವಕಪ್‌ನಲ್ಲಿ 7-0 ಅಂತರ : ಭಾರತ ವಿರುದ್ದ ಇನ್ನೂ ಗೆದ್ದಿಲ್ಲ ಪಾಕಿಸ್ತಾನ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಯಾರಿಗೆ ಗೆಲುವು ?

‌ವಿಶ್ವಕಪ್‌ 2023 ಕ್ಕೆ ತಂಡಗಳು:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್‌ ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ , ಸೂರ್ಯಕುಮಾರ್ ಯಾದವ್

ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್‌ ಕೀಪರ್)‌ , ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಘಾ ಸಲ್ಮಾನ್, ಫಖರ್ ಜಮಾನ್ , ಉಸಾಮಾ ಮಿರ್, ಮೊಹಮ್ಮದ್ ವಾಸಿಂ ಜೂ

India vs Pakistan match Cricket World Cup 2023 India won the toss and chose to bowl, Shubman Gill in Ishan Kishan and Ashwin Out

Comments are closed.