mekedatu padayatre : ಸರಕಾರ – ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್, ರಾಮನಗರಕ್ಕೆ ಕೊನೆಯಾಗುತ್ತಾ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

ಬೆಂಗಳೂರು : ಕೈ ಮತ್ತು ಕಮಲ‌ ಪಾಳಯದ ನಡುವೆ ಫೈಟಿಂಗ್ ಗೆ ಕಾರಣವಾಗಿರೋ ಕಾಂಗ್ರೆಸ್ ಪಾದಯಾತ್ರೆಗೆ ಕ್ಷಣಗಣನೆ ನಡೆದಿದೆ. ಕೈ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಬೊಮ್ಮಾಯಿ ಸರ್ಕಾರದ ನಡುವಿನ ಯುದ್ಧ ಎಂದೇ ಪರಿಗಣಿಸಲಾಗುತ್ತಿರುವ ಈ ಹೋರಾಟದಲ್ಲಿ ಬಿಜೆಪಿಗೆ ಮೇಲುಗೈಯಾಗೋ ಸಾಧ್ಯತೆ ಇದ್ದು, ಮೇಕೆದಾಟು ಸಂಗಮದಿಂದ ಆರಂಭವಾಗೋ ಈ ಯಾತ್ರೆ (mekedatu padayatre) ರಾಮನಗರದಲ್ಲೇ ಪೊಲೀಸರ ತಡೆಯುವಿಕೆಯೊಂದಿಗೆ ಕೊನೆಗೊಳ್ಳುವ ಸಾಧ್ಯತೆ ಇದೆ.

ಪಾದಯಾತ್ರೆ ಕನಕಪುರದ ಸಂಗಮದಿಂದ ಯಾತ್ರೆ ಆರಂಭವಾಗಲಿದೆ. ಕರ್ಪ್ಯೂ ನಡುವೆಯೂ ಕಾಂಗ್ರೆಸ್ ನಿಂದ ಪಾದಯಾತ್ರೆ ಮಾಡೋ ಹಿನ್ನೆಲೆಯಲ್ಲಿ ಸರ್ಕಾರ ರಾಮನಗರ ದಲ್ಲಿ ಯಾತ್ರೆಯನ್ನು ತಡೆದು ಡಿಕೆಶಿಯವರನ್ನು ತಾತ್ಕಾಲಿಕವಾಗಿ ಬಂಧಿಸಿ ಬಳಿಕ ಬಿಡುಗಡೆಮಾಡುವ ಪ್ಲ್ಯಾನ್ ನಲ್ಲಿದೆ ರಾಜ್ಯ ಸರಕಾರ. ಇದಕ್ಕಾಗಿ ರಾಮನಗರ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್.ಪಿ. ಗಿರೀಶ್, ಕಾಂಗ್ರೆಸ್ ನಾಯಕರ ಪಾದಯಾತ್ರೆಗೆ ಯಾವುದೇ ಅನುಮತಿ ಕೊಡಲಾಗಿಲ್ಲ. ಅನುಮತಿ ದಿಕ್ಕರಿಸಿ ನಡೆದ್ರೆ ಕಾನೂನು ರೀತಿಯಲ್ಲಿ ಕ್ರಮ ಅನಿವಾರ್ಯವಾಗಲಿದೆ ಎಂದಿದ್ದಾರೆ. ರಾಮನಗರ ಡಿಸಿಯವರು ಈಗಾಗಲೇಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಕೊವೀಡ್ ಕರ್ಪ್ಯೂ ಇರೋದ್ರಿಂದ ಪಾದಯಾತ್ರೆ ಮಾಡೋದಿಕ್ಕೆ ಅವಕಾಶವಿಲ್ಲ ಎಂಬುದನ್ನು ಮನವರಿಕೆ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ರಾಮನಗರದಲ್ಲಿ ಕರ್ಪ್ಯೂ ಜಾರಿ ಯಲ್ಲಿದೆ ಎಂದು ಗಿರೀಶ್ ವಿವರಣೆ ನೀಡಿದ್ದಾರೆ.

ಈಗಾಗಲೇ ಜನರು ಕಾನೂನನ್ನು ಅರ್ಥ ಮಾಡಿಕೊಂಡಿದ್ದಾರೆ. ನಾವು ನೋಡಿದಂತೆ ಹೆಚ್ಚಾಗಿ ಯಾರು ಓಡಾಡ್ತಿಲ್ಲ. ಮುಂದೆ ಯಾರೇ ಏನಾದರೂ ನೋಟಿಸ್ ಉಲ್ಲಂಘನೆ ಮಾಡಿದ್ರೆ, ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗಿರೀಶ್ ಎಚ್ಚರಿಸಿದ್ದಾರೆ. ಪೊಲೀಸ್ ಭದ್ರತೆ ಬಗ್ಗೆ ವಿವರಣೆ ನೀಡಿರುವ‌ ಎಸ್.ಪಿ. ಗಿರೀಶ್, ರಾಮನಗರದಲ್ಲಿ ಸುಮಾರು ೨೦೦೦ ಜನ ಪೊಲೀಸರು ಇದ್ದಾರೆ. ಈ ಭದ್ರತೆ ಪಾದಯಾತ್ರೆಗಲ್ಲ, ಬದಲಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು. ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಮತ್ತೆ ಏನಾದರೂ ಅರೆಸ್ಟ್ ಮಾಡುವ ಸಂದರ್ಭ ಬಂದಾಗ, ಕಾನೂನು ಸುವ್ಯವಸ್ಥೆ ಕಾಪಾಡಲು ಈ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಕಾನೂನು ಕ್ರಮ ಹಾಗೂ ಕೊರೋನಾ ನಿಯಮದ ಬಗ್ಗೆ ಡಿಕೆಶಿಯವರು ಹಾಗೂ ಕಾಂಗ್ರೆಸ್ ನಾಯಕರ ಮನವೊಲಿಸುವ ಪ್ರಯತ್ನ ಈಗಾಗಲೇ ನನ್ನ ಹಾಗೂ ಜಿಲ್ಲಾಧಿಕಾರಿಗಳಿಂದ ನಡೆದಿದೆ. ಡಿಕೆಶಿ, ಸಿದ್ದರಾಮಯ್ಯ ಯಾರೇ ಆದರೂ ತಿಳುವಳಿಕೆ ಕೊಟ್ರು, ಪಾದಯಾತ್ರೆ ಮಾಡಿದ್ರೆ ಕಾನೂನು ರೀತಿಯಲ್ಲಿ ನಾವು ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ರಾಮನಗರದಲ್ಲೇ ಕೊರೋನಾ ನಿಯಮದ ಕಾರಣ ನೀಡಿ ಡಿಕೆಶಿ ಪಾದಯಾತ್ರೆ ಮೊಟಕುಗೊಳಿಸುತ್ತಾರೆ ಎಂಬ ಮುನ್ಸೂಚನೆ ಸಿಕ್ಕಿದ್ದು, ಇದಕ್ಕೆ ಕೈ ನಾಯಕರು ಯಾವ ರೀತಿ ಉತ್ತರ ನೀಡುತ್ತಾರೆ ಕಾದುನೋಡಬೇಕಿದೆ.

ಇದನ್ನೂ ಓದಿ : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ

ಇದನ್ನೂ ಓದಿ : Village Corona fear : ಸರಕಾರದ ಎಡವಟ್ಟು, ಹಳ್ಳಿಯತ್ತ ಹೊರಟ ಜನರು : ಹಳ್ಳಿಯಲ್ಲೂ ಕೊರೊನಾ, ಓಮಿಕ್ರಾನ್‌ ಭೀತಿ

(Government and Police Master Plan, Congress mekedatu padayatre Ramanagara Ending )

Comments are closed.