Assembly Elections 2022 : ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ

Assembly Elections 2022 : ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ ಉತ್ತರ ಪ್ರದೇಶ, ಉತ್ತರಾಖಂಡ್​, ಮಣಿಪುರ, ಗೋವಾ ಹಾಗೂ ಪಂಜಾಬ್​​ ರಾಜ್ಯಗಳಿಗೆ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ದೇಶವು ಕೋವಿಡ್​ ಸವಾಲನ್ನು ಎದುರಿಸುತ್ತಿದೆ. ಆದರೆ ಈ ಸಂದರ್ಭದಲ್ಲಿಯೂ ಕೋವಿಡ್​ ಮಾರ್ಗಸೂಚಿಗಳನ್ನು ಪಾಲಿಸಿ ಚುನಾವಣೆಯನ್ನು ನಡೆಸುವುದು ನಮ್ಮ ಕರ್ತವ್ಯವಾಗಿದೆ. ಚುನಾವಣೆ ಸಂಬಂಧ ಕೇಂದ್ರ ಸರ್ಕಾರವು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿದೆ. ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್​, ಪಂಜಾಬ್​​ಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಉತ್ತರ ಪ್ರದೇಶ, ಉತ್ತರಾಖಂಡ್​, ಗೋವಾ, ಪಂಜಾಬ್​ ಹಾಗೂ ಮಣಿಪುರದಲ್ಲಿ 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಪಂಜಾಬ್​, ಗೋವಾ ಹಾಗೂ ಉತ್ತರಾಖಂಡ್​ನಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಉತ್ತರಾಖಂಡ್​ನ 70 ಕ್ಷೇತ್ರಗಳಿಗೆ , ಪಂಜಾಬ್​ನ 117 ಕ್ಷೇತ್ರಗಳಿಗೆ ಹಾಗೂ ಗೋವಾದ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ದಿನಾಂಕ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.
ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣಾ ವಿವರ ಇಲ್ಲಿದೆ ನೋಡಿ :

ಫೆಬ್ರವರಿ 10ರಂದು ಮೊದಲ ಹಂತದ ಮತದಾನ,ಫೆಬ್ರವರಿ 14ರಂದು 2ನೇ ಹಂತದ ಮತದಾನ,ಫೆಬ್ರವರಿ 20ರಂದು 3ನೇ ಹಂತದ ಮತದಾನ,ಫೆಬ್ರವರಿ 23ರಂದು 4ನೇ ಹಂತದ ಮತದಾನ,ಫೆಬ್ರವರಿ 27ರಂದು 5ನೇ ಹಂತದ ಮತದಾನ,ಮಾರ್ಚ್ 3ರಂದು 6ನೇ ಹಂತದ ಮತದಾನ ಹಾಗೂ ಮಾರ್ಚ್ 7ರಂದು 7ನೇ ಹಂತದ ಮತದಾನ ಮತ್ತು ಮಾರ್ಚ್ 10ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಣಿಪುರದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದೆ .ಫೆಬ್ರವರಿ 27ರಂದು ಮೊದಲ ಹಂತದ ಮತದಾನ ,ಮಾರ್ಚ್ 3ರಂದು 2ನೇ ಹಂತದ ಮತದಾನ ಹಾಗೂ ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಚುನಾವಣೆ ನಡೆಯಲಿದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುತ್ತದೆ. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. . ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Weekend curfew rules : ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ

ಇದನ್ನೂ ಓದಿ : Curfew Relaxation : ಕಾಂಗ್ರೆಸ್ ಗಾಗಿ ಕರ್ಪ್ಯೂ ಸಡಿಲಿಕೆ : ರೆಸಾರ್ಟ್, ರೆಸ್ಟೋರೆಂಟ್ ಗೆ ಅವಕಾಶ ಕೊಟ್ಟ ಸರ್ಕಾರ

Assembly Elections 2022 LIVE Updates: 7-phase election in UP, results for all states on March 10

Comments are closed.