Muthappa Rai : ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಕೋರ್ಟ್‌ ತಡೆಯಾಜ್ಞೆ : ಪುತ್ರರ ವಿರುದ್ದ ಹೈಕೋರ್ಟ್‌ ಮೆಟ್ಟಿಲೇರಿದ ಎರಡನೇ ಪತ್ನಿ

ಬೆಂಗಳೂರು : ಒಂದು ಕಾಲದಲ್ಲಿ ಭೂಗತ ಲೋಕವನ್ನೇ ಅಲುಗಾಡಿಸಿದ್ದ ಡಾನ್ ಮುತ್ತಪ್ಪ ರೈ ಸಾವಿನ ಬಳಿಕ ಅವರ ಕುಟುಂಬದ ಆಸ್ತಿ ಜಗಳ ಮತ್ತೆ ಕೋರ್ಟ್ ಮೆಟ್ಟಿಲೇರಿದೆ. ಆಸ್ತಿಯ ಉಯಿಲು ಬರೆದಿದ್ದರೂ ಕೂಡ ಮುತ್ತಪ್ಪ ರೈ ಎರಡನೇ ಪತ್ನಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಈಗ ಮತ್ತೊಮ್ಮೆ ಮುತ್ತಪ್ಪ ರೈಗೆ (Muthappa Rai Property) ಸಂಬಂಧಿಸಿದ ಆಸ್ತಿ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಭೂಗತಲೋಕ ಮಾಜಿ ದೊರೆ ಹಾಗೂ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮತ್ತಪ್ಪ ರೈಗೆ ಸಂಬಂಧಿಸಿದ ಕೆಲ ಆಸ್ತಿಗಳ ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ(Karnataka High Court Injuction Order) ನೀಡಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ನೇತೃತ್ವದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಉಲ್ಲೇಖಿಸಿದ ಕೆಲ ನಿರ್ದಿಷ್ಟ ಆಸ್ತಿಗಳನ್ನು ನ್ಯಾಯಾಲಯದ ಮುಂದಿನ ಅದೇಶದವರೆಗೂ ಹಸ್ತಾಂತರ ಮಾಡದಂತೆ ಆದೇಶಿಸಿದೆ.

ಮುತ್ತಪ್ಪ ರೈಯವರ ಎರಡನೇ ಪತ್ನಿ ಅನುರಾಧ ಅವರು ಮುತ್ತಪ್ಪ ರೈ ಒಟ್ಟು ಆಸ್ತಿಯಲ್ಲಿ ಮೂರನೇ ಒಂದು ಭಾಗಕ್ಕಾಗಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಮಧ್ಯೆ ಡಾನ್ ಮುತ್ತಪ್ಪ್ ರೈ ಪುತ್ರರಾದ ರಿಕ್ಕಿ ರೈ ಹಾಗೂ ರಾಕಿ ರೈ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದರು. ಇದಕ್ಕೂ ಮುನ್ನ ಆಸ್ತಿ ಮಾರಾಟ ಮಾಡದಂತೆ ಅನುರಾಧ್ ತಂದಿದ್ದ ತಡೆಯಾಜ್ಞೆಗೆ ಸಿವಿಲ್ ಕೋರ್ಟ್ ಇತ್ತೀಚಿಗೆ ತೆರವು ಅದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಮತ್ತೆ ಅನುರಾಧ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಮತ್ತೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ್ ಗೆ ಮೇಲುಗೈ ಆದಂತಾಗಿದೆ. 2020 ರ ಮೇ ತಿಂಗಳಿನಲ್ಲಿ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಮುತ್ತಪ್ಪ್ ರೈ ತಮ್ಮ ಆಸ್ತಿಯನ್ನು ವಿಲ್ ಮಾಡಿ ಇಟ್ಟಿದ್ದರು. ಮುತ್ತಪ್ ರೈ ಆಸ್ತಿಯನ್ನು ಪುತ್ರರು, ಎರಡನೇ ಪತ್ನಿ ಮಾತ್ರವಲ್ಲದೇ ತಮ್ಮ ಭದ್ರತಾ ಸಿಬ್ಬಂದಿಗೂ ನೀಡುವ ಮೂಲಕ ಸುದ್ದಿಯಾಗಿದ್ದರು.

41 ಪುಟಗಳ ಸುಧೀರ್ಘ ವಿಲ್ ನಲ್ಲಿ ತಮ್ಮ 1500 ರಿಂದ 2000 ಕೋಟಿ ಆಸ್ತಿಯನ್ನು ಹಂಚಿಕೆ‌ಮಾಡಿದ್ದಾರೆ. 15 ವರ್ಷದಿಂದ ಮನೆಗೆಲಸ ಮಾಡಿಕೊಂಡಿರುವ 25 ಕ್ಕೂ ಹೆಚ್ಚು ಕೆಲಸಗಾರರಿಗೂ ಮುತ್ತಪ್ಪ ರೈ ಆಸ್ತಿ ನೀಡಿದ್ದರು. ಅದರೆ ಅವರ ನಿಧನದ ಬಳಿಕ ಮತ್ತೆ ಆಸ್ತಿ ವಿವಾದ ಸೃಷ್ಟಿಯಾಗಿದ್ದು , ಎರಡನೇ ಪತ್ನಿ ತಮ್ಮ ಪಾಲಿಗೆ ಇನ್ನಷ್ಟು ಆಸ್ತಿ ಬರಬೇಕೆಂದು ದಾವೆ ಹೂಡಿದ್ದಾರೆ.

ಇದನ್ನೂ ಓದಿ : ವಿಜಯ ಬ್ಯಾಂಕ್ ಕ್ಲರ್ಕ್ ಆಗಿದ್ದ ಮುತ್ತಪ್ಪ ರೈ ಭೂಗತ ಲೋಕದ ಡಾನ್ ಆಗಿದ್ದು ಹೇಗೆ ಗೊತ್ತಾ ?

ಇದನ್ನೂ ಓದಿ : ಮುತ್ತಪ್ಪ ರೈಗೆ ಕೇರಳ‌ನಂಟು….! ಎಂಆರ್ ಗೆ ಜೋಡಿಯಾದ ಸೌಮ್ಯ ಮೆನನ್…!!

( Karnataka High Court Injuction Order Dont Sale Muthappa Rai Property)

Comments are closed.