KSRTC Bus Fare Hike : ಮತ್ತೆ ಬೆಲೆ ಏರಿಕೆ ಶಾಕ್: ಕೆಎಸ್ ಆರ್ ಟಿಸಿ ಲಗೇಜ್ ದರ ಪರಿಷ್ಕರಿಸಿ ಆದೇಶ

ಬೆಂಗಳೂರು : ಈಗಾಗಲೇ ಕೊರೋನಾ ಲಾಕ್ ಡೌನ್ ಹಾಗೂ ಉದ್ಯೋಗ ಕಡಿತದಂತಹ ಸಮಸ್ಯೆಯಿಂದ ಕಂಗೆಟ್ಟಿರುವ ಜನರಿಗೆ ಮತ್ತೆ ಕೆಎಸ್ಆರ್ಟಿಸಿ ಶಾಕ್ ನೀಡಿದೆ. ನಿಧಾನಕ್ಕೆ ಸಹಜಸ್ಥಿತಿಗೆ ಮರಳುತ್ತಿದ್ದ ಜನಜೀವನಕ್ಕೆ ಬೆಲೆ ಏರಿಕೆ ಶಾಕ್ ನೀಡಿದ್ದು ಲಗೇಜ್ ದರಿ ಏರಿಕೆ ಮಾಡಿ (KSRTC Bus Fare Hike)ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.

ಹೊಸ ದರ ಏರಿಕೆ ಡಿಸೆಂಬರ್ 10 ರಿಂದಲೇ ಜಾರಿಯಾಗಲಿದ್ದು, ನಷ್ಟದ ನೆಪವೊಡ್ಡಿ ಬಸ್ ಗಳಲ್ಲಿ ಲಗೇಜ್ ಬೆಲೆ ಏರಿಸಿ ಆದೇಶಿಸಲಾಗಿದೆ. ಇದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ. ಪ್ರತಿ ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಒಟ್ಟು ಶೇ 10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಿದ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದ್ದು, ಕೊರೋನಾ ಸಂದರ್ಭದಲ್ಲಿ ಎದುರಾದ ನಷ್ಟವನ್ನು ಸರಿದೂಗಿಸುವ ಲೆಕ್ಕಾಚಾರದಲ್ಲಿದೆ. ಆದರೆ ಸಾರಿಗೆ ಇಲಾಖೆ ದರ ಏರಿಕೆ ಮಾಡಿರುವುದು ಪ್ರಯಾಣಿಕರಿಗೆ ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪರಿಷ್ಕೃತ ಕೆ ಎಸ್ ಆರ್ ಟಿ ಸಿ ನೂತನ ಲಗೇಜ್ ದರ ಹಾಗೂ ಹಿಂದಿನ ದರ ಪಟ್ಟಿ ಹೀಗಿದೆ.

1.1 ರಿಂದ 5 ಸ್ಟೇಜ್ – ಹಿಂದಿನ ದರ ರೂ.5, ಈಗಿನ ದರ ರೂ.5
2.6 ರಿಂದ 10ನೇ ಹಂತ – ಹಿಂದಿನ ದರ ರೂ.10, ನೂತನ ದರ ರೂ.10
3. 11 ರಿಂದ 15ನೇ ಹಂತ – ಹಿಂದಿನ ದರ ರೂ.15, ನೂತನ ದರ ರೂ.17..
4. 16 ರಿಂದ 20ನೇ ಹಂತ – ಹಿಂದಿನ ದರ ರೂ.18, ನೂತನ ದರ ರೂ.21
5. 21 ರಿಂದ 25ನೇ ಹಂತ – ಹಿಂದಿನ ದರ ರೂ.21, ನೂತನ ದರ ರೂ.24
6. 26 ರಿಂದ 30ನೇ ಹಂತ – ಹಿಂದಿನ ದರ ರೂ.25, ನೂತನ ದರ ರೂ.28
7. 31 ರಿಂದ 35ನೇ ಹಂತ – ಹಿಂದಿನ ದರ ರೂ.29, ನೂತನ ದರ ರೂ.32
8. 36 ರಿಂದ 40ನೇ ಹಂತ – ಹಿಂದಿನ ದರ ರೂ.33, ನೂತನ ದರ ರೂ.36
9.41 ರಿಂದ 45ನೇ ಹಂತ – ಹಿಂದಿನ ದರ ರೂ.36, ನೂತನ ದರ ರೂ.39
10. 46 ರಿಂದ 50ನೇ ಹಂತ – ಹಿಂದಿನ ದರ ರೂ.40, ನೂತನ ದರ ರೂ.43
11 .51 ರಿಂದ 55ನೇ ಹಂತ – ಹಿಂದಿನ ದರ ರೂ.44, ನೂತನ ದರ ರೂ.47
12. 56 ರಿಂದ 60ನೇ ಹಂತ – ಹಿಂದಿನ ದರ ರೂ.48, ನೂತನ ದರ ರೂ.51
13. 61 ರಿಂದ 65ನೇ ಹಂತ – ಹಿಂದಿನ ದರ ರೂ.51, ನೂತನ ದರ ರೂ.54
14. 66 ರಿಂದ 70ನೇ ಹಂತ – ಹಿಂದಿನ ದರ ರೂ.55, ನೂತನ ದರ ರೂ.58
15. 156 ರಿಂದ 160 ನೇ ಹಂತ -123 ,ರಿಂದ 126 ಏರಿಕೆಯಾಗಲಿದೆ.

ಇದನ್ನೂ ಓದಿ : Today Petrol Price : ವಾಹನ ಸವಾರರಿಗೆ ಗುಡ್‌ನ್ಯೂಸ್‌ : ಪೆಟ್ರೋಲ್‌ ಬೆಲೆಯಲ್ಲಿ 8 ರೂ. ಇಳಿಕೆ

ಇದನ್ನೂ ಓದಿ : ಊಬರ್​ ಸೇವೆ ಪಡೆಯಲು ಬೇಕಿಲ್ಲ ಪ್ರತ್ಯೇಕ ಅಪ್ಲಿಕೇಶನ್​ ; ವಾಟ್ಸಾಪ್​ ಮೂಲಕವೇ ಬುಕ್​ ಮಾಡಿ ಊಬರ್​ ರೈಡ್​​

ಇದನ್ನೂ ಓದಿ : ಮತ್ತೆ ಕೊರೊನಾತಂಕ, ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಿದ ಬಿಬಿಎಂಪಿ

(KSRTC Bus Fare Hike)

Comments are closed.