Solar Eclipse 2021: ವರ್ಷದ ಕೊನೆಯ ಸೂರ್ಯಗ್ರಹಣ: ವಿಶೇಷ ಕಾಳಜಿ ಅಗತ್ಯ

2021 ನೇ ವರ್ಷದ ಕೊನೆಯ ಸೂರ್ಯಗ್ರಹಣವು ಡಿಸೆಂಬರ್ 04 ರ ಶನಿವಾರದಂದು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ಈ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲ. ಸೂರ್ಯಗ್ರಹಣವು ಬೆಳಿಗ್ಗೆ 10:59 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 03:07 ಕ್ಕೆ ಕೊನೆಗೊಳ್ಳುತ್ತದೆ. ಆದರೂ ಕೆಲವೊಮ್ಮೆ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ಹೇಳುತ್ತಾರೆ.

ಹಿಂದೂ ನಂಬಿಕೆಗಳ ಪ್ರಕಾರ, ಅಂದು ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಮತ್ತು ಈ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಧಾರ್ಮಿಕ ನಂಬಿಕೆಗಳ ಪ್ರಕಾರ, ಇದು ಸೂರ್ಯದೇವತೆಯ ಮೇಲೆ ರಾಹು ಮತ್ತು ಕೇತುಗಳ ಗ್ರಹಣವಾಗಿದೆ. ಈ ದಿನದಂದು ಗರ್ಭಿಣಿಯರು ವಿಶೇಷವಾಗಿ ತಮ್ಮ ಕಾಳಜಿಯನ್ನು ತೆಗೆದುಕೊಳ್ಳಬೇಕು ಹಾಗೂ ಮಗುವಿನ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಹೇಳಲಾಗಿದೆ.

ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು:

  • ಗ್ರಹಣದ ಸಮಯದಲ್ಲಿ ಸಾಧ್ಯವಾದಷ್ಟು ಹೊರಗೆ ಹೋಗುವುದನ್ನು ತಪ್ಪಿಸಬೇಕು.
    ಗ್ರಹಣದ ಅಡ್ಡ ಪರಿಣಾಮಗಳನ್ನು ತಡೆಯಲು ಅದು ಮುಗಿದ ಕೂಡಲೇ ಸ್ನಾನ ಮಾಡಬೇಕು.
  • ಗ್ರಹಣದ ಸಂದರ್ಭ ಆಹಾರ ಸೇವನೆ ನಿಷಿದ್ಧ. ಆದರೆ, ತಾಜಾ ಹಣ್ಣುಗಳನ್ನು ಸೇವಿಸಿ ತಮ್ಮ ಮತ್ತು ಮಗುವಿನ ಆರೋಗ್ಯ ಕಾಪಾಡಬಹುದು.
    *ಗ್ರಹಣದ ಸಂದರ್ಭ ಚೂಪಾದ ವಸ್ತುಗಳನ್ನು ಬಳಸುವುದು ಕೂಡ ಅಪಾಯ. ಹೀಗಾಗಿ ಗರ್ಭಿಣಿಯರು ಈ ಸಂದರ್ಭದಲ್ಲಿ ಚೂರಿ ಕಟ್ಟಿ, ಬ್ಲೇಡ್ ನಿಂದ ದೂರ ಇರುವುದೇ ಉತ್ತಮ.
  • ಗ್ರಹಣ ಕಾಲದಲ್ಲಿ ಆದಷ್ಟು ದೇವರ ಆರಾಧನೆಗಳನ್ನು ಮಾಡಿದರೆ ಯಾವುದೇ ತೊಂದರೆ ಆಗದು.

ರಾಶಿಗಳ ಮೇಲೆ ಗ್ರಹಣದ ಪ್ರಭಾವ
ಭಾರತದಲ್ಲಿ ಗ್ರಹಣ ಗೋಚರವಾಗದೆ ಇದ್ದರೂ, ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅವರ ಪ್ರಕಾರ ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು, ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಅಶುಭ ಫಲಗಳನ್ನು ಈ ಗ್ರಹಣ ನೀಡಲಿದೆ.
ಅಶುಭ ಫಲ ಇರುವ ರಾಶಿಯವರು ಕೆಂಪು ಬಟ್ಟೆಯಲ್ಲಿ ಮೂರರಿಂದ ಐದು ಹಿಡಿ ಗೋಧಿಯನ್ನು ಕಟ್ಟಿ, ವೀಳ್ಯದೆಲೆ, ದಕ್ಷಿಣೆ, ಬಾಳೆಹಣ್ಣು ಸಮೇತ ದಾನ ಮಾಡಿದರೆ ಗ್ರಹಣದಿಂದ ಆಗುವ ದೋಷಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಎದೆ ತುಂಬಿ ಬಂತು ಸೂರ್ಯನ ಹಾಡು ; ಕೈಮುಗಿದಿದೆ ಕರುನಾಡು

(Solar Eclipse 2021 Here are the Dos and Don’ts for Pregnant Women During Surya Grahan)

Comments are closed.