Mexico Firing : ಮೆಕ್ಸಿಕೋ ಸಿಟಿಯಲ್ಲಿ ಗುಂಡಿನ ದಾಳಿ ; ಮೇಯರ್‌ ಸೇರಿ 18 ಮಂದಿ ಸಾವು

ಮೆಕ್ಸಿಕೋ: ( Mexico Firing )ಸಿಟಿಹಾಲ್ ನಲ್ಲಿ ದುಷ್ಕರ್ಮಿಗಳು ಮತ್ತೆ ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಮೆಕ್ಸಿಕೋದ ಸ್ಯಾನ್‌ ಮಿಗುಯೆಲ್‌ ಟೊಟೊಲಾಪ್‌ನಲ್ಲಿನ ಸಿಟಿ ಹಾಲ್‌ ನಲ್ಲಿ ನಡೆದ ದಾಳಿಯಲ್ಲಿ ಸುಮಾರು 18 ಮಂದಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯ ಭೀಕರತೆಗೆ ಸಿಟಿಹಾಲ್ ನ ಗೋಡೆಯಲ್ಲಿ ರಂಧ್ರಗಳು ಉಂಟಾಗಿದ್ದು, ಸುತ್ತಮುತ್ತಲಿನ ಮನೆಗಳ ಮೇಲೆಯೂ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಲವು ಬಂದೂಕುಧಾರಿಗಳು ಏಕಾಏಕಿಯಾಗಿ ಮೆಕ್ಸಿಕೋದ ಗುರೆರೊ ರಾಜ್ಯದ ಸ್ಯಾನ್‌ ಮಿಗುಯೆಲ್‌ ಟೊಟೊಲಾಪ್‌ನ ಸಿಟಿಹಾಲ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಅಲ್ಲಿದ್ದ ಜನರ ಮೇಲೆ ಗುಂಡು (Mexico Firing ) ಹಾರಿಸಿದ್ದಾರೆ. ಮೇಯರ್ ಸೇರಿದಂತೆ ಒಟ್ಟು 18 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮೇಯರ್‌ ಕಾನ್ರಾಡೋ ಮೆಂಡೋಜಾ ,ಹಾಗೂ ಅವರ ತಂದೆ ಮತ್ತು ಮಾಜಿ ಮೇಯರ್‌ ಜುವಾನ್‌ ಮೆಂಡೋಜಾ ಮತ್ತು ನಗರದ ಇತರೆ ಕೆಲವು ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಪೋಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಮೂವರು ಗಾಯಗೊಂಡಿದ್ದು, ಸಾವಿನ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Acid Served In Water Bottles : ರೆಸ್ಟಾರೆಂಟ್​ನಲ್ಲಿ ನೀರಿನ ಬಾಟಲಿಯಲ್ಲಿ ಆಸಿಡ್​ ಕೊಟ್ಟ ಸಿಬ್ಬಂದಿ : ಇಬ್ಬರು ಮಕ್ಕಳು ಆಸ್ಪತ್ರೆ ದಾಖಲು

ಇದನ್ನೂ ಓದಿ : Karnataka Weather Report : ಕರ್ನಾಟಕದ 8 ಜಿಲ್ಲೆಗಳಲ್ಲಿ ಇನ್ನು 3 ದಿನ ಭಾರೀ ಮಳೆ; Yellow Alert ‌ ಘೋಷಣೆ

ಇದನ್ನೂ ಓದಿ : Hubballi : ವಾಣಿಜ್ಯ ನಗರಿಯಲ್ಲೊಂದು ವಿಸ್ಮಯ:ರಸ್ತೆ ಗುಂಡಿಯಲ್ಲಿ ದೇವಿ ಪ್ರತ್ಯಕ್ಷ

ಸಿಟಿಹಾಲ್‌ ಮಾತ್ರವಲ್ಲ ಸುತ್ತಮುತ್ತಿನ ಮನೆಗಳ ಮೇಲೆಯೂ ಗುಂಡಿನ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮೆಕ್ಸಿಕೋದಲ್ಲಿ ಇತ್ತೀಚಿಗೆ ನಡೆದ ಮೂರನೇ ದಾಳಿಯಾಗಿದ್ದು, ಇಡೀ ಮೆಕ್ಸಿಕೋ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ಉತ್ತರ ಮೆಕ್ಸಿಕೋದಲ್ಲಿ ದಾಳಿ ನಡೆದಿತ್ತು. ನಂತರ ಸಪ್ಟೆಂಬರ್‌ 21 ರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : CT Ravi : ‘ಪರೇಶ್​ ಮೇಸ್ತಾ ಕುಟುಂಬಸ್ಥರ ಪರವಾಗಿ ನಾವು ಎಂದಿಗೂ ನಿಲ್ಲುತ್ತೇವೆ’ :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅಭಯ

ಮೆಕ್ಸಿಕೋದಲ್ಲಿ ನಡೆದಿರುವ ಘಟನೆಯ ಹೊಣೆಯನ್ನು ಲಾಸ್‌ ಟೆಕ್ವಿಲೆರೋಸ್‌ʼ ಎಂಬ ಸಂಘಟನೆ ಹೊತ್ತುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ.ಕಾನ್ರಾಡೋ ಮೆಂಡೋಜಾ ಸೇರಿರುವ ಪಿಆರ್ ಡಿ ರಾಜಕೀಯ ಪಕ್ಷವು ದಾಳಿಯ ನಂತರ ನೀಡಿದ ಹೇಳಿಕೆಯಲ್ಲಿ ಮೇಯರ್‌ ಸಾವನ್ನು ಧೃಡಪಡಿಸಿದ್ದು, ನಮ್ಮ ಪಕ್ಷವು ದಾಳಿಯನ್ನು ಖಂಡಿಸುತ್ತದೆ, ನ್ಯಾಯಕ್ಕಾಗಿ, ಹಿಂಸಾಚಾರ ಮತ್ತು ನಿರ್ಭಯವನ್ನು ನಿಲ್ಲಿಸಲು ಕರೆ ನೀಡುತ್ತದೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ.

(Mexico Firing) Miscreants have again carried out a mass shooting at the City Hall. At least 18 people were killed in the attack on the city hall in San Miguel Totolap, Mexico. Holes were created in the wall of the city hall due to the horror of the shooting and the surrounding houses were also attacked. Three people were seriously injured in the incident and admitted to the hospital.

Comments are closed.