Neeraj Chopra : ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್​ ವೈರಲ್​ : ನಟನೆಗೂ ಸೈ ಎಂದ ನೀರಜ್​ ಚೋಪ್ರಾ

ಮುಂಬೈ : ಒಲಿಂಪಿಕ್ಸ್​ನಲ್ಲಿ ‌ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಇದೀಗ ಎಲ್ಲರ ಹಾಟ್‌ ಫೇವರೇಟ್.‌ ಇದೀಗ ಚಿನ್ನದ ಹುಡುಗ ನೀರಜ್‌ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ನೀರಜ್​ ಜಾವೆಲಿನ್‌ನಲ್ಲಿ ಅಲ್ಲಾ​ ಬದಲಾಗಿ ನಟನೆಯಿಂದ.

ಹೌದು, ನೀರಜ್ ಚೋಪ್ರಾ​ ಇದೇ ಮೊದಲ ಬಾರಿಗೆ ಜಾಹೀರಾತು ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೀರಜ್​ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಕ್ರೆಡ್​ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ದೃಶ್ಯಾವಳಿಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ನೀರಜ್​ ಶೇರ್​ ಮಾಡಿದ್ದು ಬಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ:Viral Video : 2 ಸುರಂಗದೊಳಗೆ ಚಲಿಸಿತು ವಿಮಾನ : ವೈರಲ್ ಆಯ್ತು ಗಿನ್ನಿಸ್‌ ದಾಖಲೆಯ ವೀಡಿಯೋ

ಈ ಜಾಹಹೀರಾತಿನಲ್ಲಿ ನೀರಜ್​​ ಚೋಪ್ರಾ ನಟನೆ ಕಮಾಲ್​ ಮಾಡುವಂತಿದೆ. ಇದನ್ನು ನೋಡಿದ ಹರ್ಷ್​ ಬೆನಿವಾಲ್, ನಟನೆಯಲ್ಲೂ ನಿಮಗೆ ಬಂಗಾರದ ಪದಕವೇ ಸಿಗಬೇಕು ಎಂದಿದ್ದಾರೆ. ಇದು ಮಾತ್ರವಲ್ಲದೇ ನೀರಜ್​ರ ನಟನೆಯನ್ನು ಹೊಗಳುವಂತಹ ಸಾಕಷ್ಟು ಕಮೆಂಟ್​ಗಳು ಹರಿದಾಡುತ್ತಿವೆ.

ಇದನ್ನೂ ಓದಿ: ವಿಮಾನದೊಳಗೆ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ : ಮುಂದೇನಾಯ್ತು ಗೊತ್ತಾ ?

(Gold boy Neeraj Chopra’s first advertisement went viral)

Comments are closed.