ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್‌ ಗಂಭೀರ ಆರೋಪ

ಬೆಂಗಳೂರು : ಬ್ಯಾಡರಹಳ್ಳಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ತನ್ನ ತಂದೆ ಶಂಕರ್‌ನಿಂದ ಅನುಭವಿಸಿದ್ದ ನೋವನ್ನುಇದೀಗ ಮಧುಸಾಗರ್‌ ಡೆತ್‌ ನೋಟ್‌ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ತನ್ನ ಅಪ್ಪನಿಗೆ ಕಾಲ್‌ಗರ್ಲ್ಸ್‌, ವೇಶ್ಯೆಯರ ಸಹವಾಸವಿತ್ತು. ಆತ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ ಎಂದೆಲ್ಲಾ ಗಂಭೀರ ಆರೋಪ ಮಾಡಿದ್ದಾನೆ.

ಬ್ಯಾಡರಹಳ್ಳಿಯಲ್ಲಿರುವ ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ಒಂಬತ್ತು ತಿಂಗಳ ಮಗುವನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ನಡೆದ ಬೆನ್ನಲ್ಲೇ ಪತ್ನಿಯ ವಿರುದ್ದ ಗಂಭೀರ ಆರೋಪ ಮಾಡಿದ್ದ ಶಂಕರ್‌ಗೆ ಪ್ರಕರಣ ಉರುಳಾಗಿ ಪರಿಣಮಿಸುತ್ತಿದೆ. ಅದ್ರಲ್ಲೂ ಮನೆಯಲ್ಲಿ ನಡೆದ ಮಹಜರು ವೇಳೆಯಲ್ಲಿ ಸಿಕ್ಕ ಮೂರು ಡೆತ್‌ನೋಟ್‌ನಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗ ಮಧುಸಾಗರ್‌ ಗಂಭೀರ ಆರೋಪವನ್ನು ಮಾಡಿದ್ದಾರೆ.

ಜೆರಾಕ್ಸ್‌ ಮಾಡಿ ಅಪ್ಪ ವಿರುದ್ದದ ದೂರು ಹಂಚಿದ ಮಗ

ಮಧುಸಾಗರ ಬದುಕಿದ್ದಾಗಲೇ ತನ್ನ ತಂದೆಯ ವಿರುದ್ದ ಪೊಲೀಸರಿಗೆ ದೂರನ್ನು ನೀಡಿದ್ದಾನೆ. ತಂದೆಯ ವಿರುದ್ದದ ಆರೋಪ ಹಾಗೂ ದೂರಿನ ಪ್ರತಿಯನ್ನು ಜೆರಾಕ್ಸ್‌ ಮಾಡಿ ತನಗೆ ಗೊತ್ತಿದ್ದವರಿಗೆಲ್ಲಾ ಹಂಚಿದ್ದಾನೆ. ಅದ್ರಲ್ಲೂ ತಂದೆಯ ವಿರುದ್ದ ನೀಡಿದ್ದ ದೂರಿನಲ್ಲಿ ಮಧು ಸಾಗರ್‌ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾನೆ.

ತಾಯಿಗೆ ಚಪ್ಪಲಿ ಬಾಯಿಗೆ ಇಟ್ಟು ಅವಮಾನ

ನನ್ನ ತಾಯಿಗೆ ಹಲವು ವರ್ಷಗಳಿಂದಲೂ ಕಿರುಕುಳ ನೀಡುತ್ತಿದ್ದ. ತಾಯಿಯ ಬಾಯಲ್ಲಿ ಚಪ್ಪಲಿಯನ್ನು ಇಟ್ಟು ಅವಮಾನಿಸಿದ್ದ. ಅಪ್ಪ ತುಂಬಾ ಸ್ವಾರ್ಥಿ, ಅಪ್ಪನಿಗೆ ಅನೈತಿಕ ಸಂಬಂಧವಿತ್ತು ಎಂದು ಮೂರ್ನಾಲ್ಕು ಮಹಿಳೆಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಐದಾರು ಮಂದಿಯ ಜೊತೆಗೆ ಅನೈತಿಕ ಸಂಬಂಧ

ಅಷ್ಟೇ ಅಲ್ಲಾ ತನ್ನ ತಂದೆ ಸ್ಯಾಡಿಸ್ಟ್‌, ಕಾಮುಕ, ಆತನಿಗೆ ಕಚೇರಿಯಲ್ಲಿರುವ ಮಹಿಳೆಯ ಜೊತೆಗೆ ಸಂಬಂಧವಿತ್ತು. ನಮ್ಮ ಏರಿಯಾದಲ್ಲಿರುವ ಮಹಿಳೆಯ ಜೊತೆಗೂ ಸಂಪರ್ಕವಿತ್ತು. ಆಕೆಯ ಮಗಳನ್ನೇ ಮದುವೆಯಾಗುವಂತೆಯೂ ನನಗೆ ಹೇಳಿದ್ದ. ಇಷ್ಟೇ ಅಲ್ಲ ಹಲವು ಮಹಿಳೆಯರಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ಸಂಪರ್ಕವನ್ನೂ ಹೊಂದಿದ್ದಾನೆ. ಹಲವರನ್ನು ಟ್ರ್ಯಾಪ್‌ ಮಾಡಿ ಸಂಬಂಧ ಇರಿಸಿಕೊಂಡಿದ್ದ. ಅಪ್ಪನ ಅನೈತಿಕ ಸಂಬಂಧದದ ಕಾರಣದಿಂದಲೇ ಅಮ್ಮ ಹಾಗೂ ನಾವು ದೂರ ಉಳಿದ್ದಿದ್ದೇವು. ಅಪ್ಪನ ಕಿರುಕುಳದಿಂದಲೇ ಅಮ್ಮನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದೇವು ಅಂತಾ ಬರೆದುಕೊಂಡಿದ್ದಾನೆ.

ಇಬ್ಬರು ಹೆಣ್ಣು ಮಕ್ಕಳ ಬಾಳನ್ನೇ ಹಾಳು ಮಾಡಿದ್ದ !

ಇನ್ನ ತನ್ನ ಸಹೋದರಿಯರ ಬಾಳು ಹಾಳಾಗೋದಕ್ಕೂ ಕೂಡ ತನ್ನ ತಂದೆಯೇ ಕಾರಣವೆಂದು ಉಲ್ಲೇಖಿಸಿದ್ದಾನೆ. ಅಪ್ಪ ಅಮ್ಮನಿಗೆ ಮಾತ್ರವಲ್ಲ, ತನ್ನಿಬ್ಬರು ಅಕ್ಕಂದಿರಿಗೂ ಕೂಡ ಕಿರುಕುಳವನ್ನು ನೀಡುತ್ತಿದ್ದ. ಅಕ್ಕಂದಿರಿಗೆ ಯಾವುದೇ ಅಸ್ತಿಯನ್ನೂ ಅಪ್ಪ ನೀಡಿಲ್ಲ, ಜೊತೆಗೆ ಗಂಡನ ಮನೆಯಲ್ಲೂ ಚೆನ್ನಾಗಿ ನೋಡಿಕೊಳ್ಳುತ್ತಾ ಇರಲಿಲ್ಲ. ಅಷ್ಟೇ ಯಾಕೆ ತನ್ನ ಹಿರಿಯ ಸಹೋದರಿಯ ಅತ್ತೆ ಮಾವ ಹಾಗೂ ಗಂಡನಿಗೆ ಹೇಳಿ ಆಕೆಗೆ ಹೊಡೆಸುವ ಕಾರ್ಯವನ್ನು ಅಪ್ಪ ಮಾಡುತ್ತಿದ್ದರು. ಈ ಮೂಲಕ ಅಕ್ಕಂದಿರ ಬಾಳನ್ನೂ ಹಾಳು ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ.

ಅಪ್ಪನ ಕಿರಕುಳದಿಂದ ಕೆಲಸಕ್ಕೆ ರಾಜೀನಾಮೆ

ಅಪ್ಪ ಅಮ್ಮನ ಅಸಹಾಯಕತೆಯನ್ನೇ ಬಳಸಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದರು. ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಾರಣದಿಂದಲೇ ನಾವು ಊಟ ಮಾಡಿ ಬೇಗನೇ ಮಲಗುತ್ತಿದ್ದೇವು. ಅಪ್ಪನ ಕಿರುಕುಳ ತಾಳಲಾರದೆ ನಾನು ಕೆಲಸಕ್ಕೆ ಕೂಡ ರಾಜೀನಾಮೆಯನ್ನು ನೀಡದ್ದೇ. ಅಕ್ಕನ ಶಿಕ್ಷಣ ಕೂಡ ಹಾಳಾಗಿತ್ತು ಎಂದು ಅಪ್ಪ ಶಂಕರ್‌ ನೀಡುತ್ತಿದ್ದ ಕಿರುಕುಳವನ್ನು ಮಧುಸಾಗರ್‌ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ನಮ್ಮ ಶವವನ್ನು ಅಪ್ಪನಿಗೆ ಕೊಡಬೇಡಿ !

ಮನೆಯಲ್ಲಿ ಸಿಕ್ಕಿರುವ ಡೆತ್‌ ನೋಟ್‌ ಹಲವು ವಿಚಾರಗಳನ್ನು ತಿಳಿಸಿ ಹೇಳುತ್ತಿದೆ. ಮಮೆಯಲ್ಲಿ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇತ್ತು ಅನ್ನೋ ವಿಚಾರವೂ ಬಹಿರಂಗವಾಗಿದೆ. ಅಲ್ಲದೇ ಶಂಕರ್‌ ಕುಟುಂಬ ಸ್ಥಳೀಯರು, ಸ್ನೇಹಿತರು, ಸಂಬಂಧಿಕರ ಸಂಪರ್ಕವನ್ನೇ ಕಡಿದುಕೊಂಡು ಜೀವನ ಮಾಡುತ್ತಿತ್ತು. ಹೊರ ಪ್ರಪಂಚವನ್ನೇ ನೋಡದೆ ಬೆಳೆದ ಮಕ್ಕಳಿಗೆ ಗಂಡನ ಮನೆಗೆ ಹೋಗಿ ಬಾಳುವುದಕ್ಕೂ ಕಷ್ಟವಾಗ್ತಿತ್ತಂತೆ. ಇನ್ನು ಡೆತ್‌ ನೋಟ್‌ನಲ್ಲಿ ತಮ್ಮ ಮೃತದೇಹವನ್ನು ತಂದೆಗೆ ನೀಡಬೇಡಿ ಎಂದು ಬರೆಯಲಾಗಿತ್ತು. ಆದರೆ ಡೆತ್‌ ನೋಟ್‌ ಸಿಗುವ ಮೊದಲೇ ಮೃತ ದೇಹವನ್ನು ಶಂಕರ್‌ಗೆ ಹಸ್ತಾಂತರ ಮಾಡಲಾಗಿತ್ತು. ಶಂಕರ್‌, ಸಿಂಚನ ಪತಿ ಪ್ರವೀಣ್‌, ಸಿಂಧೂರಾಣಿ ಪತಿ ಶ್ರೀಕಾಂತ್‌ ಅಂತ್ಯಕ್ರೀಯೆಯನ್ನೂ ನೆರವೇರಿಸಿದ್ದರು.

ಡೆತ್‌ ನೋಟ್‌ ಬರೆದಿದ್ದು ಯಾರು ?

ಇನ್ನು ಮನೆಯಲ್ಲಿ ಮಹಜರು ವೇಳೆಯಲ್ಲಿ ಮೂರು ಲ್ಯಾಪ್‌ಟಾಪ್‌, ಒಂದು ಪೆನ್‌ ಡ್ರೈವ್‌ ಪತ್ತೆಯಾಗಿದೆ. ಹೀಗಾಗಿ ಅದರಲ್ಲಿ ಯಾವುದಾದ್ರೂ ಸಾಕ್ಷಿ ಲಭ್ಯವಾಗಲಿದ್ಯಾ ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಮನೆಯಲ್ಲಿ ಸಿಕ್ಕಿರುವ ಡೆತ್‌ ನೋಟ್‌ ಮಕ್ಕಳೇ ಬರೆದಿದ್ದಾ ಅನ್ನೋ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಒಂದೊಮ್ಮೆ ಡೆತ್‌ ನೋಟ್‌ ಮಕ್ಕಳೇ ಬರೆದಿದ್ದು ಹೌದಾದ್ರೆ, ಶಂಕರ್‌ ಹಾಗೂ ಅಳಿಯಂದಿರ ಕೊರಳಿಗೆ ಉರುಳಾಗೋದು ಗ್ಯಾರಂಟಿ.

ಇದನ್ನೂ ಓದಿ : ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ 15 ಲಕ್ಷ ರೂ. ನಗದು , 2 ಕೆ.ಜಿ ಚಿನ್ನಾಭರಣ ಪತ್ತೆ

ಇದನ್ನೂ ಓದಿ :‌ ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : 3 ಡೆತ್‌ ನೋಟ್‌ ಪತ್ತೆ, ಅನೈತಿಕ ಸಂಬಂಧಕ್ಕೆ ಬಲಿಯಾತ್ತ ಕುಟುಂಬ !

( Bydarahalli five death case son Madhu Sagar filed complaint against father Shankar before suicide)

https://www.youtube.com/watch?v=YXZ3SBZo3M0

Comments are closed.