ಬೆಂಗಳೂರು : ಶಾಸಕ ಪತ್ರಿಕೆಯ ಸಂಪಾದಕ ಶಂಕರ್ ಮನೆಯಲ್ಲಿ ನಡೆದಿರುವ ಕುಟುಂಬದ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ದೊರೆಯುತ್ತಿದೆ. ಶಂಕರ್ ಮಕ್ಕಳು ಪ್ರತ್ಯೇಕವಾಗಿ ಡೆತ್ ನೋಟ್ ಬರೆದಿಟ್ಟಿದ್ರೆ, ಮನೆಯಲ್ಲೀಗ 15 ಲಕ್ಷ ರೂ. ನಗದು , 2 ಕೆ.ಜಿ ಚಿನ್ನಾಭರಣ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಶಂಕರ್‌ಗೆ ಉರುಳಾದ ಡೆತ್ ನೋಟ್ !
ಕುಟುಂಬಸ್ಥರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಪೊಲೀಸರು ಇಂದು ಶಂಕರ್ ಮನೆಯಲ್ಲಿ ಮಹಜರು ಕಾರ್ಯವನ್ನು ನಡೆಸುವ ವೇಳೆಯಲ್ಲಿ ಸಿಂಧೂರಾಣಿ, ಸಿಂಚನಾ ಹಾಗೂ ಮಧುಸಾಗರ್ ಬರೆದಿರುವ ಡೆತ್ ನೋಟ್ ಬರೆದಿದ್ದ, ತಮ್ಮ ಸಾವಿಗೆ ತಂದೆಯೇ ಕಾರಣ ಅನ್ನೋ ಬಗ್ಗೆ ಉಲ್ಲೇಖಿಸಿದ್ದಾರೆ. ಸಂಪಾದಕ ಹಲ್ಲೇಗೆರೆ ಶಂಕರ್ ಅನೈತಿಕ ಸಂಬಂಧದ ಬಗ್ಗೆಯೂ ಮಗ ತನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ.
ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ರ, ನಗದು, ಚಿನ್ನ !
ಇನ್ನೊಂದೆಡೆಯಲ್ಲಿ ಮನೆಯಲ್ಲಿ ಮಹಜರು ಕಾರ್ಯದ ವೇಳೆಯಲ್ಲಿ ಸುಮಾರು 15 ಲಕ್ಷ ರೂ. ನಗದು ಪತ್ತೆಯಾಗಿದೆ. ಮನೆಯ ತುಂಬೆಲ್ಲಾ ಹರಿದ ನೋಟುಗಳು ಬಿದ್ದಿದ್ದು, ಸುಮಾರು 2 ಕೆ.ಜಿ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿದೆ. ಶಂಕರ್ ಕೋಟ್ಯಾಂತರ ಮೌಲ್ಯದ ಆಸ್ತಿ ಪತ್ತೆಯಾಗಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮಂಡ್ಯದಿಂದ ಖಾಲಿ ಕೈಯಲ್ಲಿ ಬೆಂಗಳೂರಿಗೆ ಬಂದಿದ್ದ ಶಂಕರ್ ಆರಂಭದಲ್ಲಿ ಬಾರ್ ಮಾಡಿಕೊಂಡಿದ್ದರು, ನಂತರದಲ್ಲಿ ಪತ್ರಿಕೆಯನ್ನು ಆರಂಭಿಸಿದ್ದರು. ಪತ್ರಿಕೆಯಿಂದ ಇಷ್ಟೊಂದು ಮೌಲ್ಯದ ಆದಾಯ ಬರೋದಕ್ಕೆ ಸಾಧ್ಯವಿದೆಯೇ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಪೊಲೀಸರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯುವ ಸಾಧ್ಯತೆಯಿದೆ.
ಮನೆಯ ಹಾಲ್‌ನಲ್ಲಿತ್ತು ಸಿಸಿ ಕ್ಯಾಮರಾ !
ಶಂಕರ್ ತಿಗಳರ ಪಾಳ್ಯದಲ್ಲಿ ಕೋಟ್ಯಾಂತರ ಮೌಲ್ಯದ ಭವ್ಯ ಬಂಗಲೆಯನ್ನು ನಿರ್ಮಾಣ ಮಾಡಿದ್ದ ಶಂಕರ್, ತನ್ನ ಮನೆಯ ಹಾಲಿನಲ್ಲಿ ಒಂದು ಸಿಸಿ ಕ್ಯಾಮರಾ ಅಳವಡಿಕೆ ಮಾಡಿಕೊಂಡಿದ್ದ. ಮನೆಯ ಹೊರಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡದೇ ಕೇವಲ ಒಂದನೇ ಮಹಡಿಯಲ್ಲಿ ಮಾತ್ರವೇ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮರಾದ ದೃಶ್ಯಗಳು ಶಂಕರ್ ಮೊಬೈಲ್ ನಲ್ಲಿ ಮಾತ್ರವೇ ರೆಕಾರ್ಡ್ ಆಗ್ತಾ ಇತ್ತು. ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಅನ್ನೋದ ಬಗ್ಗೆ ನಿಗಾ ಇಡ್ತಾ ಇದ್ರು. ಮನೆಯವರ ಮೇಲಿನ ಅನುಮಾನಕ್ಕೆ ಹೀಗೆ ಮಾಡಿದ್ದನಾ ಅನ್ನೋ ಶಂಕೆಯೂ ವ್ಯಕ್ತವಾಗುತ್ತಿದೆ. ಅಲ್ಲದೇ ಕಳೆದ ಭಾನುವಾರದಿಂದಲೂ ಸಿಸಿ ಕ್ಯಾಮರಾ ದೃಶ್ಯಗಳು ರೆಕಾರ್ಡ್ ಆಗಿಲ್ಲ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : 3 ಡೆತ್ ನೋಟ್ ಪತ್ತೆ, ಅನೈತಿಕ ಸಂಬಂಧಕ್ಕೆ ಬಲಿಯಾತ್ತ ಕುಟುಂಬ !
ಇದನ್ನೂ ಓದಿ : ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆ : ಐಎಎಸ್ ಕನಸು ಕಂಡವರು ಸಾವಿಗೆ ಶರಣಾಗಿದ್ಯಾಕೆ
(Shankar, editor of legislative magazine, earns Rs 15 lakh Detection of cash, 2 kg of jewelry )