Bangalore : ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : 3 ಡೆತ್‌ ನೋಟ್‌ ಪತ್ತೆ, ಅನೈತಿಕ ಸಂಬಂಧಕ್ಕೆ ಬಲಿಯಾತ್ತ ಕುಟುಂಬ !

ಬೆಂಗಳೂರು : ಪತ್ರಿಕೆ ಸಂಪಾದಕ ಶಂಕರ್‌ ಮನೆಯಲ್ಲಿ ನಡೆದಿರುವ ಐದು ಮಂದಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮನೆಯಲ್ಲಿ ಮಹಜರು ವೇಳೆಯಲ್ಲಿ ಮೂರು ಡೆತ್‌ನೋಟ್‌ ಪತ್ತೆಯಾಗಿದ್ದು, ತಂದೆಗೆ ಅನೈತಿಕ ಸಂಬಂಧವಿದೆ ಅನ್ನೋ ಕುರಿತು ಪುತ್ರ ಮಧುಸಾಗರ್‌ ಉಲ್ಲೇಖ ಮಾಡಿದ್ದಾನೆ.

ಬೆಂಗಳೂರಿನ ತಿಗಳರಪಾಳ್ಯದ ನಿವಾಸಿಯಾಗಿರು ಸ್ಥಳೀಯ ಪತ್ರಿಕೆಯೊಂದರ ಸಂಪಾದಕ ಶಂಕರ್‌ ಪತ್ನಿಭಾರತಿ (50 ವರ್ಷ), ಮಗಳು ಸಿಂಚನ(33 ವರ್ಷ), 2ನೇ ಮಗಳು ಸಿಂಧುರಾಣಿ (30 ವರ್ಷ), ಮಗ ಮಧುಸಾಗರ್(27 ವರ್ಷ) ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ 9 ತಿಂಗಳ ಮಗು ನಿಗೂಢವಾಗಿ ಸಾವನ್ನಪ್ಪಿತ್ತು. ಐವರ ಸಾವಿನ ಪ್ರಕರಣ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು.

ಸಾವಿನ ಬೆನ್ನಿಗೆ ಬಿದ್ದ ಪೊಲೀಸರಿಗೆ ಕ್ಷಣಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಮೃತಪಟ್ಟವರ ಮರಣೋತ್ತರ ಕಾರ್ಯವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಡಲಾಗಿದ್ದು, ಸಂಬಂಧಿಕರಿಗೆ ಶವಗಳನ್ನು ಹಸ್ತಾಂತರ ಮಾಡಲಾಗಿದೆ. ಅಲ್ಲದೇ ಸಿಂಧೂರಾಣಿ ಹಾಗೂ ಸಿಂಚನಾ ಪತಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾತ್ರವಲ್ಲ ಸಂಪಾದಕ ಶಂಕರ್‌ ಅವರನ್ನೂ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮಹಜರು ವೇಳೆಯಲ್ಲಿ ಪತ್ತೆಯಾಯ್ತು ಮೂರು ಡೆತ್‌ ನೋಟ್‌

ಇನ್ನು ತಿಗಳರ ಪಾಳ್ಯದಲ್ಲಿರುವ ಮನೆಯಲ್ಲಿ ಪೊಲೀಸರು ಇಂದು ಮಹಜರು ಕಾರ್ಯವನ್ನು ನಡೆಸಿದ್ದರು. ಈ ವೇಳೆಯಲ್ಲಿ ಮೂರು ಡೆತ್‌ ನೋಟ್‌ ಪತ್ತೆಯಾಗಿದೆ. ಸಿಂಧೂರಾಣಿ, ಸಿಂಚನಾ ಹಾಗೂ ಮಧುಸಾಗರ್‌ ಪ್ರತ್ಯೇಕವಾಗಿ ಡೆತ್‌ನೋಟ್‌ ಬರೆದು ಇಟ್ಟಿದ್ದಾರೆ. ಡೆತ್‌ ನೋಟ್‌ ನಲ್ಲಿ ತಂದೆ ಕಿರುಕುಳ ನೀಡುತ್ತಿರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಿಲ್ಲಲಿ. ನಮ್ಮ ತಂದೆ ನಮಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಗಂಡನ ಮನೆಯಿಂದಲೂ ಕಿರುಕುಳವಾಗುತ್ತಿತ್ತು ಎಂದು ಡೆತ್‌ ನೋಟ್‌ ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗುತ್ತಿದೆ.

ಐವರ ಆತ್ಮಹತ್ಯೆಗೆ ಕಾರಣವಾಗಿತ್ತ ಅನೈತಿಕ ಸಂಬಂಧ !

ಹೌದು, ಸಂಪಾದಕ ಶಂಕರ್‌ ಅವರ ಪುತ್ರ ಮಧುಸಾಗರ್‌ ಡೆತ್‌ನೋಟ್‌ನಲ್ಲಿ ತನ್ನ ತಂದೆಗೆ ಅನೈತಿಕ ಸಂಬಂಧವಿದೆ ಅನ್ನೋ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ ಎನ್ನಲಾಗುತ್ತಿದ್ದು, ಮಧುಸಾಗರ್‌ ಲ್ಯಾಪ್‌ಟಾಪ್‌ ನಲ್ಲಿ ಅನೈತಿಕ ಸಂಬಂಧಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿದೆ ಎನ್ನಲಾಗುತ್ತಿದೆ. ಈ ಹಿಂದೆಯೂ ಕೂಡ ಶಂಕರ್‌ ಕುಟುಂಬದ ಮನಸ್ತಾಪ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಸಂದರ್ಭದಲ್ಲಿಯೂ ಮಧುಸಾಗರ್‌ ತನ್ನ ಡೈರಿಯಲ್ಲಿ ತಂದೆಯ ಸೀಕ್ರೇಟ್‌ ಬರೆದಿದ್ದೇನೆ ಎಂದು ಹೇಳಿಕೊಂಡಿದ್ದ.

ಡೆತ್‌ನೋಟ್‌ ಪತ್ತೆಯಾದ ಬೆನ್ನಲ್ಲೇ ಇದೀಗ ಮನೆ ಮಾಲೀಕ ಶಂಕರ್‌ ಹಾಗೂ ಇಬ್ಬರೂ ಅಳಿಯಂದಿರಿಗೆ ಢವ ಢವ ಶುರುವಾಗಿದೆ. ಪ್ರಕರಣ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಇದೀಗ ಡೆತ್‌ನೋಟ್‌ ಪ್ರಕರಣದ ಧಿಕ್ಕನ್ನೇ ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಪತ್ರಿಕೆ ಸಂಪಾದಕನ ಕುಟುಂಬದ ಐವರು ಆತ್ಮಹತ್ಯೆ : ಐಎಎಸ್‌ ಕನಸು ಕಂಡವರು ಸಾವಿಗೆ ಶರಣಾಗಿದ್ಯಾಕೆ

ಇದನ್ನೂ ಓದಿ :  ಇಪತ್ತು ರೂಪಾಯಿ ವಿಚಾರಕ್ಕೆ ಸ್ನೇಹಿತನ ಕೊಲೆ : ಮೂವರ ಬಂಧನ

(Big twist Editor Shankar Family 5 suicide case : found 3 death note )

Comments are closed.