ಮೈಸೂರು ಕೋರ್ಟ್‌ ನಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ : NIA ಕೋರ್ಟ್‌ನಿಂದ ಮಹತ್ವದ ತೀರ್ಪು : 3 ಆರೋಪಿಗಳಿಗೆ ಶಿಕ್ಷೆ ಪ್ರಕಟ

ಮೈಸೂರು : ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಎನ್ಐಎ ವಿಶೇಷ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಮೂವರು ಉಗ್ರರು ಆರೋಪಿಗಳು ತಪ್ಪಿತಸ್ಥರು ತೀರ್ಪು ನೀಡಿದ್ದು, ಸೋಮವಾರ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ.

ತಮಿಳುನಾಡು ಮೂಲದ ಅಬ್ಬಾಸ್ ಆಲಿ, ಸಮ್ ಸುನ್ ಕರೀಮ್ ರಾಜ ಹಾಗೂ ದಾವುದ್ ಸುಲೈಮಾನ್ ಎಂಬ ಮೂವರು ಉಗ್ರರು, ಮೈಸೂರಿನ ನ್ಯಾಯಾಲಯದ ಆವರಣದಲ್ಲಿ 2016 ರ ಆಗಸ್ಟ್ 16 ರಂದು ಆರೋಪಿಗಳು ಬಾಂಬ್ ಬ್ಲಾಸ್ ಮಾಡಿದ್ದರು. ಈ ಮೂವರು ಕೂಡ ಆಲ್‌ ಖೈದಾ ಉಗ್ರ ಸಂಘಟನೆಯ ಜೊತೆಗೆ ನಂಟು ಹೊಂದಿದ್ದಾರೆ ಅನ್ನೋದು ತನಿಖೆಯಲ್ಲಿ ಬಯಲಾಗಿತ್ತು. ಇದೀಗ ಮೂವರು ಉಗ್ರರನ್ನು ತಪ್ಪಿತಸ್ಥರು ಎಂದು ನ್ಯಾಯಾಲಯದ ನ್ಯಾಯಾಧೀಶರಾದ ಕಸನಪ್ಪ ನಾಯ್ಕ್ ಅವರು ತೀರ್ಪು ನೀಡಿದ್ದಾರೆ.

ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಗ್‌ ಸ್ಪೋಟ ಮಾಡಲು ಅಡುಗೆ ಕುಕ್ಕರ್ ನಲ್ಲಿ ಬಾಂಬ್ ತಯಾರಿಸಿ ಬ್ಲಾಸ್ಟ್‌ ಮಾಡಿದ್ದರು. ಅತ್ಯಾಧುನಿಕ ಬಾಂಬ್‌ಗಳನ್ನು ತಯಾರಿ ಮಾಡುವಲ್ಲಿ ಈ ಮೂವರು ಪರಿಣಿತರಾಗಿದ್ದರು. ಮೊಳೆ, ಬ್ಯಾಟರಿ, ಲ್ಬ್ಸ್, ಗ್ಲಾಸ್ ಪೀಸ್ ಗಳು, ಪಾಟಾಕಿ ಪೌಡರ್, ವೈಯರ್ ಬಳಸಿ ಬಾಂಬ್‌ ತಯಾರಿಸಿರುವುದು ತನಿಖೆಯ ವೇಳೆಯಲ್ಲಿ ಬಯಲಾಗಿತ್ತು. ಮೈಸೂರಿನ ಜಿಲ್ಲಾ ಕೋರ್ಟ್ ಶೌಚಾಲಯದಲ್ಲಿ ನಡೆದಿದ್ದ ಸ್ಪೋಟದಲ್ಲಿ ಒಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದ ಬಗ್ಗೆ ಒಪ್ಪಿ ಸಾಕ್ಷಿಯಾಗಿದ್ದ ಹಿನ್ನೆಲೆ ಯಲ್ಲಿ ಮೂರನೇ ಆರೋಪಿ ಮಹಮ್ಮದ್‌ ಆಯೂಬ್‌ಗೆ ಕ್ಷಮಾದಾನ ಸಿಕ್ಕಿತ್ತು. ಅಲ್ಲದೇ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದ ಸಂಶುದ್ದೀನ್‌ ಕರ್ವನ ಪಾತ್ರ ಈ ಕೇಸ್‌ನಲ್ಲಿ ಇಲ್ಲದ ಕಾರಣ ಆತನ ಹೆಸರನ್ನು ಕೈಬಿಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ತನಿಖೆಯನ್ನು ನಡೆಸಿತ್ತು. ಇದೀಗ ಮೂವರ ವಿರುದ್ದ ಎನ್‌ಐಎ ಕೋರ್ಟ್‌ ಆರೋಪಿಗಳು ಎಂದು ತೀರ್ಪನ್ನು ನೀಡಿದೆ. ಮೂವರು ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೋಮವಾರ ಉಗ್ರರಿಗೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆಯಿದೆ. ಎನ್ಐಎ ಪರ SPP ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ಇದನ್ನೂ ಓದಿ : 75 ಲಕ್ಷಕ್ಕೆ ಸಬ್‌ಇನ್ಸ್ಪೆಕ್ಟರ್‌ ಹುದ್ದೆ ! ತಂದೆ, ಮಗಳಿಗೆ ವಂಚಿಸಿದ ಸ್ನೇಹಿತ

ಇನ್ನು ನ್ಯಾಯಾಲಯಕ್ಕೆ ಹಾಜರಾಗುವ ವೇಳೆಯಲ್ಲಿ ನ್ಯಾಯಾಲಯದ ಆದೇಶವನ್ನೇ ಉಗ್ರರು ಬ್ರೇಕ್‌ ಮಾಡಲು ಮುಂದಾಗಿದ್ದರು. ಚಪ್ಪಲಿ ಮತ್ತು ಜರ್ಕಿನ್ ಬಿಚ್ಚಿಟ್ಟು ಒಳ ಹೋಗಲು ಉಗ್ರರು ನಿರಾಕರಿಸಿದ್ದು, ಉಗ್ರ ಇಂಜಿನಿಯರ್‌ ದಾವೂದ್‌ ಸುಲೈಮಾನ್‌ ಕೋರ್ಟ್‌ ಆವರಣದಲ್ಲಿಯೇ ಕೋರ್ಟ್‌ ಸಿಬ್ಬಂದಿ, ವಕೀಲರು ಹಾಗೂ ಪೊಲೀಸರಿಗೆ ಅವಾಜ್‌ ಹಾಕಿದ್ದಾನೆ. ನ್ಯಾಯಾದೀಶರಿಂದ ಆದೇಶ ತರುವಂತೆ ಕಿರಿಕ್‌ ಮಾಡಿದ್ದ. ಬಳಿಕ ಹಿರಿಯ ಪೊಲೀಸ್‌ ಅಧಿಕಾರಿಗಳು ವಾರ್ನಿಂಗ್‌ ಮಾಡುತ್ತಿದ್ದಂತೆಯೇ ಕೋರ್ಟ್‌ ನಿಯಮವನ್ನು ಉಗ್ರರು ಪಾಲಿಸಿದ್ದಾರೆ. ಸುಲೈಮಾನ್‌ ಬಾಂಬ್‌ ತಯಾರಿಸುವುದರಲ್ಲಿ ಎಕ್ಸ್‌ಪರ್ಟ್‌ ಆಗಿದ್ದು, ಈತ ಇಂಟರ್‌ ನೆಟ್‌ ನೋಡಿ ಬಾಂಬ್‌ ತಯಾರಿಯನ್ನು ಮಾಡುತ್ತಿದ್ದ. ಈಗಾಗಲೇ ನಾಲು ಬಾಂಬ್‌ ಬ್ಲಾಸ್ಟ್‌ ಕೇಸ್‌ ನಲ್ಲಿ ಈತ ಭಾಗಿಯಾಗಿದ್ದ ಅನ್ನೋದು ತಿಳಿದು ಬಂದಿದೆ.

ಇದನ್ನೂ ಓದಿ ; ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !

( Bomb blast case in Mysore court: Significant verdict from NIA court )

Comments are closed.