Chemical tanker Balst : ಯಲ್ಲಾಪುರದಲ್ಲಿ ಕೆಮಿಕಲ್‌ ಟ್ಯಾಂಕರ್‌ ಸ್ಪೋಟ : 500 ಮೀಟರ್‌ ವರೆಗೆ ವ್ಯಾಪಿಸಿರುವ ಬೆಂಕಿ

ಕಾರವಾರ : ಕೆಮಿಕಲ್ಸ್‌ ತುಂಬಿದ್ದ ಟ್ಯಾಂಕರ್‌ವೊಂದು ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿಯಲ್ಲಿ ರುವ ಅರ್ತಿಕೆರೆ ಮಂಗಳೂರು ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಸುಮಾರು ಐನೂರು ಮೀಟರ್‌ ವ್ಯಾಪ್ತಿಯ ವರೆಗೆ ಕೆಮಿಕಲ್ಸ್‌ ವ್ಯಾಪಿಸಿದ್ದು, ಆತಂಕ ಶುರುವಾಗಿದೆ.

chemical tanker blast yellapura News Next

ಮಂಗಳೂರಿನಲ್ಲಿ ಕೆಮಿಕಲ್ಸ್‌ ತುಂಬಿದ್ದ ಟ್ಯಾಂಕರ್‌ ಮುಂಬೈಗೆ ಪ್ರಯಾಣಿಸುತ್ತಿತ್ತು. ಬೆಳಿಗ್ಗೆ 5.30ರ ಸುಮಾರಿಗೆ ಅರ್ತಿಕೆರೆ ಕ್ರಾಸ್ ಬಳಿಗೆ ಬರುತ್ತಿದ್ದಂತೆಯೇ ಒಮ್ಮಿಂದೊಮ್ಮೆಲೆ ಟ್ಯಾಂಕರ್‌ನಿಂದ ಕೆಮಿಕಲ್‌ ಸೋರಿಕೆಯಾಗೋದಕ್ಕೆ ಶುರುವಾಗಿತ್ತು. ಸ್ವಲ್ಪ ಹೊತ್ತಲ್ಲೇ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ.

ಟ್ಯಾಂಕರ್‌ ನಿಂದ ಸೋರಿಕೆಯಾಗಿರುವ ಕೆಮಿಕಲ್‌ ಸುಮಾರು ಐನೂರು ಮೀಟರ್‌ ವರೆಗೂ ವ್ಯಾಪಿಸಿದೆ. ಸ್ಥಳಕ್ಕೆ ಯಲ್ಲಾಪುರ ಹಾಗೂ ಮುಂಡಗೋಡು ಅಗ್ನಿಶಾಮಕದಳದ ಸಿಬ್ಬಂದಿ ಗಳು ಭೇಟಿಯನ್ನು ನೀಡಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿದೆ.

chemical Tanker blast yellapura

ಟ್ಯಾಂಕರ್‌ನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಬಹುದೂರದ ವರೆಗೂ ಕೆಮಿಕಲ್‌ ಸೋರಿಕೆಯಾಗಿವುದು ಜನರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಜವಾದ್‌ ಚಂಡಮಾರುತದ ಆರ್ಭಟ : ಅ.17 ರ ವರೆಗೆ ಭಾರಿ ಮಳೆ

ಇದನ್ನೂ ಓದಿ : ಮತಾಂತರ ಕೇಂದ್ರಕ್ಕೆ ಹಿಂಜಾವೇ ಮುತ್ತಿಗೆ : ನಾಲ್ವರು ಅರೆಸ್ಟ್‌

(Chemical tanker blast a fire that spans 400 meters near Yellapura in Uttara kannada )

Comments are closed.