No Lockdown : ಲಾಕ್‌ಡೌನ್‌ ಇಲ್ಲ, ನೈಟ್‌ ಕರ್ಪ್ಯೂ ಮುಂದುವರಿಕೆ, ವೀಕೆಂಡ್‌ ಕರ್ಪ್ಯೂ ಬಗ್ಗೆ ಶುಕ್ರವಾರ ನಿರ್ಧಾರ : ಸಚಿವ ಆರ್.‌ ಅಶೋಕ್‌

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್‌ ಕರ್ಪ್ಯೂ ಯಥಾಸ್ಥಿತಿಯಂತೆ ಮುಂದುವರಿಯಲಿದೆ. ರಾಜ್ಯದಲ್ಲಿ ಲಾಕ್‌ಡೌನ್‌ (No Lockdown) ಯಾವುದೇ ಕಾರಣಕ್ಕೂ ಹೇರಿಕೆ ಮಾಡುವುದಿಲ್ಲ. ಅಲ್ಲದೇ ವೀಕೆಂಡ್‌ ಕರ್ಪ್ಯೂ ಬಗ್ಗೆ ಶುಕ್ರವಾರದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್.‌ ಅಶೋಕ್‌ ತಿಳಿಸಿದ್ದಾರೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್‌ ತುರ್ತು ಸಭೆ ನಡೆದಿದೆ. ಸಚಿವರಾದ ಆರ್.‌ ಅಶೋಕ್‌, ಆರೊಗ್ಯ ಸಚಿವ ಡಾ.ಸುಧಾಕರ್‌, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ಕೋವಿಡ್‌ ತಜ್ಞರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರದಲ್ಲಿ ಮಾತನಾಡಿದ ಸಚಿವ ಆರ್‌. ಅಶೋಕ್‌, ರಾಜ್ಯದಲ್ಲಿ ಕೋವಿಡ್‌ ಸೋಂಕು ಜನವರಿ 25 ರ ವೇಳೆಗೆ ಭಾರೀ ಏರಿಕೆ ಕಾಣಲಿದೆ. ನಂತರದಲ್ಲಿ ಕೊರೊನಾ ಸೋಂಕು ಇಳಿಕೆಯಾಗಲಿದೆ. ಕೊರೊನಾ ಯಾವಾಗ ಇಳಿಕೆಯಾಗಲಿದೆ ಎಂದು ನೋಡಿಕೊಂಡು ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡುವುದಿಲ್ಲ, ಅಲ್ಲದೇ ಟಫ್‌ ರೂಲ್ಸ್‌ ಜಾರಿ ಮಾಡುವುದಿಲ್ಲ. ವಿಕೇಂಡ್‌ ಕರ್ಪ್ಯೂ ಬಗ್ಗೆ ಶುಕ್ರವಾರದ ನಡೆಯಲಿರುವ ಸಭೆಯ ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ಆರುವರೆ ಕೋಟಿ ಜನರ ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್‌ ಸಮಸ್ಯೆ ಎದುರಾಗದಂತೆ ಕ್ರಮವಹಿಸುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿನ ಐದಾರು ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್‌ ಪ್ರಮಾಣ ತುಂಬಾ ಕಡಿಮೆಯಾಗಿದೆ. ಹೀಗಾಗಿ ಅಂತಹ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಮಾತನಾಡಿದ್ದಾರೆ. ವ್ಯಾಕ್ಸಿನೇಷನ್‌ ಹೆಚ್ಚಿಸುವ ಕುರಿತು ಸೂಚನೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಶಾಲೆಗಳಿಗೆ ಸಂಬಂಧಿಸಿದಂತೆ ಸದ್ಯ ಯಥಾಸ್ಥಿತಿ ಮುಂದುವರಿಯಲಿದ್ದು, ಶುಕ್ರವಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗವುದು ಎಂದಿದ್ದಾರೆ.

ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಟೆಸ್ಟಿಂಗ್‌ ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಒಂದೂವರೆ ಲಕ್ಷದಷ್ಟು ಟೆಸ್ಟಿಂಗ್‌ ಮಾಡಿದ್ರೆ ಸಾಕು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಲ್ಲಿ ಟೆಸ್ಟಿಂಗ್‌ ಪ್ರಮಾಣ ಕಡಿಮೆಯಿದೆ. ಈ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗುತ್ತದೆ. ಹೋಟೆಲ್‌ ಮಾಲೀಕರ ಮಾತು ಕೇಳಿ ಜನರನ್ನು ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಕೊರೊನಾದಿಂದ ಗುಣಮುಖರಾದ ಸಿಎಂ ಬೊಮ್ಮಾಯಿ : ಕೋವಿಡ್‌ ತುರ್ತು ಸಭೆ ಆರಂಭ

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಸೇವಿಂಗ್ ಡೇ ಆಫರ್ ಆರಂಭ; ಲ್ಯಾಪ್‌ಟಾಪ್ ಖರೀದಿಗೆ ಸುವರ್ಣಾವಕಾಶ!

(no lockdown, night curfew continue : minister R. Ashok)

Comments are closed.