ಭಾನುವಾರ, ಏಪ್ರಿಲ್ 27, 2025
Homebusinessಈ ಗೃಹಿಣಿಯರಿಗೆ ಮಾತ್ರವೇ ನಾಳೆ ಜಮೆ ಆಗಲಿದೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ

ಈ ಗೃಹಿಣಿಯರಿಗೆ ಮಾತ್ರವೇ ನಾಳೆ ಜಮೆ ಆಗಲಿದೆ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ ಹಣ

- Advertisement -

ಬೆಂಗಳೂರು : ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಇದೀಗ ರಾಜ್ಯದ ಗೃಹಿಣಿಯರ ಪಾಲಿಗೆ ವರದಾನವಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಜಮೆ ಆಗಿದೆ. ಆದ್ರೀಗ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣದ (Gruhalakshmi 2nd Installment) ಕುರಿತು ಗುಡ್‌ನ್ಯೂಸ್‌ ಸಿಕ್ಕಿದೆ.

ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ಸಾಕಷ್ಟು ಗೃಹಿಣಿಯರು ಪಡೆದುಕೊಂಡಿದ್ದಾರೆ. ಆದ್ರೆ ಈ ಪೈಕಿ 9 ಲಕ್ಷ ಮಹಿಳೆಯರಿಗೆ ಮೊದಲ ಕಂತಿನ ಹಣ ಇನ್ನೂ ಜಮೆ ಆಗಿಲ್ಲ. ಯಾವ ಕಾರಣಕ್ಕೆ ಹಣ ಜಮೆ ಆಗಿಲ್ಲಾ ಅನ್ನೋ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾಹಿತಿಯನ್ನು ನೀಡಿದ್ದರು.

Karnataka Only these housewives will receive the 2nd instalment of Gruha Lakshmi Yojana tomorrow call tollfree number 1902
Image credit to Original Source

ಆದರೆ ಎರಡನೇ ಕಂತಿನ ಹಣ ಯಾವಾಗ ಜಮೆ ಆಗುತ್ತೆ ಅನ್ನೋ ಗೊಂದಲ ಹಲವರಲ್ಲಿತ್ತು. ಆದ್ರೀಗ ಸರಕಾರವೇ ಗುಡ್‌ನ್ಯೂಸ್‌ ಕೊಟ್ಟಿದೆ. ಅಕ್ಟೋಬರ್‌ 15 ರಂದು ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಗೃಹಿಣೆಯರ ಖಾತೆಗೆ ಜಮೆ ಆಗಲಿದೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ಪಡೆದುಕೊಂಡಿರುವ ಮಹಿಳೆಯರಿಗೆ ಎರಡನೇ ಕಂತಿನ ಹಣವೂ ಜಮೆ ಆಗಲಿದೆ. ಆದರೆ ಮೊದಲ ಕಂತಿನ ಹಣ ಜಮೆ ಆಗದೇ ಇರುವ ಎಲ್ಲರಿಗೂ ಕೂಡ ಎರಡನೇ ಕಂತಿನ ಹಣ ಜಮೆ ಆಗಲಿದೆ ಅಂತ ಹೇಳೋದಕ್ಕೆ ಸಾಧ್ಯವಿಲ್ಲ.

Karnataka Only these housewives will receive the 2nd instalment of Gruha Lakshmi Yojana tomorrow call tollfree number 1902
Image Credit to Original Source

ಮೊದಲ ಕಂತಿನ ಹಣ ಪಾವತಿಯಾಗದ 9 ಲಕ್ಷ ಮಹಿಳೆಯರ ಪೈಕಿ ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದ ಹಣ ಜಮೆ ಆಗಿರಲಿಲ್ಲ. ಇನ್ನೂ ಕೆಲವರು ತಮ್ಮ ರೇಷನ್‌ ಕಾರ್ಡ್‌ ಜೊತೆಗೆ ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆಯನ್ನು ಜಮೆ ಮಾಡಿರಲಿಲ್ಲ. ಜೊತೆಗೆ ಇನ್ನೂ ಕೆಲವರ ರೇಷನ್‌ ಕಾರ್ಡಿನಲ್ಲಿ ಮನೆಯ ಯಜಮಾನರು ಪುರುಷರಾಗಿದ್ದರು.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್‌ ಗಿಫ್ಟ್‌

ಆದರೆ ಸರಕಾರ ಎರಡು ಬಾರಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿದೆ. ಈ ಮೂಲಕ ರೇಷನ್‌ ಕಾರ್ಡ್‌ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಪಡಿತರ ಕಾರ್ಡ್‌ ಜೊತೆಗೆ ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ತಪ್ಪುಗಳನ್ನು ಸರಿ ಪಡಿಸಿಕೊಂಡು ಅರ್ಜಿ ಸಲ್ಲಿಸಿದ್ದರೆ.

ಅಂತಹ ಗೃಹಿಣಿಯರಿಗೆ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಜಮೆ ಆಗಲಿದೆ. ಅಲ್ಲದೇ ಮೊದಲ ಕಂತಿನ ಹಣ ಇನ್ನೂ ಸಿಗದೇ ಇರುವ ಗೃಹಿಣಿಯರ ಅರ್ಜಿ ಮಾನ್ಯವಾದ್ರೆ ಎರಡು ಕಂತುಗಳ ಒಟ್ಟು 4000 ರೂಪಾಯಿ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ಇನ್ನೂ ಬಂದಿಲ್ವಾ ? ಈ ಕೆಲಸ ಮಾಡಿದ್ರೆ ಇಂದೇ ಜಮೆ ಆಗುತ್ತೆ

ಒಂದೊಮ್ಮೆ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ನಿಮ್ಮ ಅರ್ಜಿ ಸರಿಯಾಗಿಯೇ ಇದ್ದು, ನಿಮಗೆ ಹಣ ಬಂದಿಲ್ಲ ಅಂತಾದ್ರೆ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ಥಳೀಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ಇಲ್ಲವಾದ್ರೆ ಟೋಲ್‌ ಪ್ರೀ ಸಂಖ್ಯೆ 1902 ಅಥವಾ 8147500500 ಗೆ ಕರೆ ಮಾಡಿ ಮಾಹಿತಿ ಪಡೆಯಲು ಅವಕಾಶವಿದೆ.

Karnataka Only these housewives will receive the 2nd instalment of Gruha Lakshmi Yojana tomorrow call tollfree number 1902
Image Credit to Original Source

ರಾಜ್ಯದ ಕಾಂಗ್ರೆಸ್‌ ಸರಕಾರ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಈಗಾಗಲೇ ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದೆ. ಯುವ ನಿಧಿ ಯೋಜನೆಯನ್ನು ಈ ವರ್ಷಾಂತ್ಯದಲ್ಲಿ ಜಾರಿಗೆ ತರುವುದಾಗಿ ರಾಜ್ಯ ಸರಕಾರ ಈಗಾಗಲೇ ಘೋಷಣೆಯನ್ನು ಮಾಡಿದೆ

ಗೃಹಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರು ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಮೂಲಕ ರಾಜ್ಯದ ಮನೆಯ ಯಜಮಾನಿಗೆ ವಾರ್ಷಿಕವಾಗಿ 24 ಸಾವಿರ ರೂಪಾಯಿ ದೊರೆಯಲಿದೆ.

Karnataka Only these housewives will receive the 2nd instalment of Gruha Lakshmi Yojana tomorrow call tollfree number 1902

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular