Shahrukh Khan : ಶಾರುಖ್‌ ಖಾನ್‌ಗೆ 58ರ ಸಂಭ್ರಮ : ಬೆಳ್ಳಿತೆರೆಯಲ್ಲಿ ಮತ್ತೆ ಮಿಂಚುತ್ತಾರಾ ಬಾಲಿವುಡ್‌ ಬಾದ್‌ಶಾ

Shahrukh Khan Birthday : ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ

Shahrukh Khan Birthday : ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಸದ್ಯ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ನಡುವಲ್ಲೇ ಬಾಲಿವುಡ್‌ ನಟ ಶಾರುಖ್‌ ಖಾನ್‌ 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಕಳದ ನಾಲ್ಕು ವರ್ಷಗಳಿಂದಲೂ ಶಾರುಖ್‌ ಖಾನ್‌ ನಟನೆಯ ಯಾವುದೇ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಿಲ್ಲ. ಒಂದು ಕಾಲದಲ್ಲಿ ಸತತ ಹಿಟ್‌ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದ ಬಾಲಿವುಡ್‌ ಬಾದ್‌ಶಾ ಇದೀಗ ಮತ್ತೆ ಬಾಲಿವುಡ್‌ನಲ್ಲಿ ಕಮಾಲ್‌ ಮಾಡಲು ರೆಡಿ ಆಗಿದ್ದಾರೆ.

Shahrukh Khan 58th birthday celebration Pathaan Dunki Will Bollywood's Badshah shine again on the silver screen
Image Credit to Original Source

2018 ರಲ್ಲಿ ಬಿಡುಗಡೆ ಆದ ಝೀರೋ ಸಿನಿಮಾದ ನಂತರದಲ್ಲಿ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ನಂತರದಲ್ಲಿ ದೊಡ್ಡ ಪರದೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಯಾವುದೇ ಸಿನಿಮಾಗಳು ಹಿಟ್‌ ಆಗಿರಲಿಲ್ಲ. ಆದರೆ ಈ ಬಾರಿ ಬಾದ್‌ಶಾ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಕೊಟ್ರು ಸಿಹಿಸುದ್ದಿ: ಸ್ವಾತಿ ಮುತ್ತಿನ ಮಳೆಹನಿಯೇ ನವೆಂಬರ್ 24 ರಂದು ತೆರೆಗೆ

ಅಶುತೋಷ್ ಗೋವಾರಿಕರ್ ಆಪರೇಷನ್ ಖುಕ್ರಿ, ಫರ್ಹಾನ್ ಅಖ್ತರ್ ಡಾನ್ 3 ನಲ್ಲಿ ಶಾರುಖ್‌ ಖಾನ್‌ ನಟಿಸ್ತಾರಾ ಅನ್ನೋ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವಲ್ಲೇ ಇಂದು ಶಾರುಖ್‌ ಖಾನ್‌ ತಮ್ಮ 58 ನೇ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದಾರೆ. ಬಾಲಿವುಡ್‌ ದಿಗ್ಗಜನ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಸದ್ಯ ಸೂಪರ್‌ ಸಕ್ಸಸ್‌ ಕಂಡಿದೆ. ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ನಟನೆಯ ಸಿನಿಮಾಕ್ಕೆ ನಿರ್ದೇಶಕ ಸಿದ್ದಾರ್ಥ್‌ ಆನಂದ ಆಕ್ಷನ್‌ ಕಟ್‌ ಹೇಳಿದ್ರು. ೨೦೨೩ರಲ್ಲಿ ತೆರೆ ಕಂಡ ಪಠಾಣ್‌ ಸಿನಿಮಾ ವಿಶ್ವದಾದ್ಯಂತ ೧,೦೫೦ ಕೋಟಿ ರೂಪಾಯಿ ಕಲೆಕ್ಸನ್ಸ್‌ ಮಾಡಿದೆ. ಅಲ್ಲದೇ ೨೦೨೩ರಲ್ಲಿ ಎರಡನೇ ಅತೀ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಅನ್ನೋ ಖ್ಯಾತಿಗೆ ಪಾತ್ರವಾಗಿದೆ.

ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ಹುಲಿ ಉಗುರಿನ ಪೆಂಡೆಂಟ್ ಅಧಿಕಾರಿಗಳ ವಶಕ್ಕೆ : ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ

ಸಿನಿಮಾದಲ್ಲಿ ದೀಪಿಕಾ ಪಡುಕೋಣೆಯ ಜೊತೆಗೆ ನಟ ಜಾನ್‌ ಅಬ್ರಾಹಂ ಕೂಡ ಬಣ್ಣಹಚ್ಚಿದ್ದರು. ಇನ್ನು ಶಾರುಖ್‌ ಖಾನ್‌ ಹಾಗೂ ನಯನತಾರಾ ನಟನೆಯ ಹೈ ಆಕ್ವೆನ್‌ ಆಕ್ಷನ್‌ ಥ್ರಿಲ್ಲರ್‌ ಜವಾನ್‌ ಸಿನಿಮಾ ತೆರೆ ಕಂಡಿದ್ದು, ಈಗಾಗಲೇ ಭರ್ಜರಿ ಕಲೆಕ್ಷನ್ಸ್‌ ಮಾಡಿದೆ. ಇನ್ನೊಂದೆಡೆಯಲ್ಲಿ ಜವಾನ್‌ ಸಿನಿಮಾ ಇದೀಗ ಓಟಿಟಿಯಲ್ಲಿ ಕೂಡ ರಿಲೀಸ್‌ ಆಗಿದೆ.

Shahrukh Khan 58th birthday celebration Pathaan Dunki Will Bollywood's Badshah shine again on the silver screen
Image Credit to Original Source

ಜವಾನ್ ಸಿನಿಮಾವನ್ನು ಶಾರುಖ್‌ ಖಾನ್‌ ಹಾಗೂ ಗೌರಿ ಖಾನ್‌ ಅವರ ನಿರ್ಮಾಣದ ರೆಡ್‌ ಚಿಲ್ಲಿಸ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ನಿರ್ಮಾಣ ಮಾಡಿತ್ತು. ಜವಾನ್‌ ಸಿನಿಮಾದಲ್ಲಿ ವಿಜಯ್‌ ಸೇತುಪಡಿ, ಸಂಜಯ್‌ ದತ್‌, ನಯನತಾರಾ, ದೀಪಿಕಾ ಪಡುಕೋಣೆ ಬಣ್ಣಹಚ್ಚಿದ್ದರು. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಸಿನಿಮಾ ವಿಶ್ವದಾದ್ಯಂತ ರಿಲೀಸ್‌ ಆಗಿತ್ತು.

ಇದನ್ನೂ ಓದಿ : ನೆನಪಿನ ಆಳದಲ್ಲಿ ಎರಡು ವರ್ಷ : ಬಾವುಕವಾಗಿ ಅಪ್ಪು ನೆನೆದ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌

ಜವಾನ್‌ ಸಿನಿಮಾದ ಬೆನ್ನಲ್ಲೇ ಡಂಕಿ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಶಾರುಖ್‌ ಖಾನ್‌ ಜನ್ಮದಿನದ ಹೊತ್ತಲ್ಲೇ ಡಂಕಿ ಸಿನಿಮಾದ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಡಂಕಿ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ತಾಪ್ಸಿ ಪನ್ನು, ದಿಯಾ ಮಿರ್ಜಾ, ಬೊಮಣಿ ಇರಾನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಪಠಾಣ್‌ ಸಿನಿಮಾದಲ್ಲಿ ಶಾರುಖ್‌ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಲ್ಮಾನ್‌ ಖಾನ್‌ ನಟನೆಯ ಟೈಗರ್ 3 ಸಿನಿಮಾದಲ್ಲಿ ಬಾಲಿವುಡ್‌ ಬಾದ್‌ಶಾ ವಿಶೇಷ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಟೈಗರ್ 3 ಸಿನಿಮಾದಲ್ಲಿ ಕತ್ರಿಕಾ ಕೈಪ್‌ ಸಲ್ಮಾನ್‌ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇಮ್ರಾನ್‌ ಹಶ್ಮಿ ಪ್ರಮುಖ ಪಾತ್ರದಲ್ಲಿದ್ದಾರೆ.

Shahrukh Khan 58th birthday celebration Pathaan Dunki Will Bollywood’s Badshah shine again on the silver screen ?

Comments are closed.