4 ಮಕ್ಕಳನ್ನು ಬಲಿ ಪಡೆದ ಕವಾಸಕಿ ರೋಗ : ಕೊರೊನಾ ಹೊತ್ತಲ್ಲೇ ಒಕ್ಕರಿಸಿತು ಮಹಾಮಾರಿ

ಶಿವಮೊಗ್ಗ : ಕೊರೊನಾ ವೈರಸ್ ಸೋಂಕಿನ ಆತಂಕ ಜನರನ್ನು ಕಂಗೆಡಿಸಿದೆ. ಈ ನಡುವಲ್ಲೇ ಮಕ್ಕಳಿಗೆ ಕವಾಸಕಿ ರೋಗ ಒಕ್ಕರಿಸಿದ್ದು, ಶಿವಮೊಗ್ಗದಲ್ಲಿ ನಾಲ್ವರು ಮಕ್ಕಳು ಬಲಿಯಾಗಿದ್ದಾರೆ.

ಕೊರೊನಾ ಹೆಮ್ಮಾರಿ ಮಲೆನಾಡಿನ ಜಿಲ್ಲೆಗಳಲ್ಲಿ ಆರ್ಭಟಿಸುತ್ತಿದೆ. ಕೊರೊನಾ ಸೋಂಕ ಮೂರಲೇ ಅಲೆಯ ಆತಂಕ ಪೋಷಕರನ್ನು ಕಾಡುತ್ತಿದೆ. ಕೊರೊನಾ ರಕ್ಷಣೆಗಾಗಿ ಸಕಲ ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಈ ನಡುವಲ್ಲೇ ಒಕ್ಕರಿಸಿದ ಕವಾಸಕಿ ರೋಗ ಪೋಷಕರನ್ನು ಕಂಗೆಡಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 8 ಮಕ್ಕಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, 4 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪೌಷ್ಠಿಕಾಂಶದ ಕೊರತೆಯಿರುವ ಮಕ್ಕಳಲ್ಲಿಯೇ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ರೀಗ ಕೊರೊನಾ ಸೋಂಕಿಗೆ ತುತ್ತಾಗಿ ನಾಲ್ಕೈದು ವಾರಗಳು ಕಳೆದ ನಂತರದಲ್ಲಿ ಮಕ್ಕಳು ಕವಾಸಕಿ ರೋಗ ಕಾಣಿಸಿಕೊಳ್ಳುತ್ತಿದೆ. ಕವಾಸಕಿ ಸಾಮಾನ್ಯ ರೋಗವಾಗಿದ್ದರೂ ಕೂಡ ಇದೀಗ ಕೊರೊನಾ ಸೋಂಕಿತ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕಂಗೆಡಿಸಿದೆ. ಇನ್ನೊಂದೆಡೆಯಲ್ಲಿ ಮಕ್ಕಳು ತಜ್ಞರು ಕೂಡ ಪೋಷಕರು ಮಕ್ಕಳ ಬಗ್ಗೆ ಕಾಳಜಿವಹಿಸುವಂತೆಯೂ ಸೂಚನೆ ನೀಡಿದ್ದಾರೆ.

ಕವಾಸಕಿ ರೋಗಕ್ಕೆ ತುತ್ತಾದ ಮಕ್ಕಳಲ್ಲಿ ಸಾಮಾನ್ಯವಾಗಿ ಬಹು ಅಂಗಾಂಗದ ಸಮಸ್ಯೆ ಕಾಣಿಸಿಕೊಳ್ಳಲಿದೆ. ಉರಿಯೂತ, ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳಲಿದೆ. ಜಪಾನ್ ದೇಶದ ಮಕ್ಕಳ ತಜ್ಞರಾದ ಟೊಮಿಸಾಕಿ ಕವಾಸಕಿ ಎಂಬವರು 1967ರಲ್ಲಿ ಮೊದಲ ಬಾರಿಗೆ ಈ ಕಾಯಿಲೆಯನ್ನು ಪತ್ತೆ ಹಚ್ಚಿದ್ದರು. ಕವಾಸಕಿ ರೋಗಕ್ಕೆ ತುತ್ತಾದ ಮಕ್ಕಳನ್ನು ವಿಶೇಷವಾಗಿ ಆರೈಕೆ ಮಾಡಬೇಕಾಗಿದೆ. ಅಲ್ಲದೇ ತುರ್ತು ನಿಗಾ ಘಟಕದಲ್ಲಿಯೇ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಅಲ್ಲದೇ ಶೇ.3 ರಿಂದ 5 ರಷ್ಟು ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Comments are closed.