Kerala Devotie death kolluru : ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಮುಳುಗುತ್ತಿದ್ದ ಮಗನ ರಕ್ಷಣೆಗೆ ಇಳಿದ ಕೇರಳದ ಮಹಿಳೆ ನೀರು ಪಾಲು

ಕುಂದಾಪುರ: (Kerala Devotie death kolluru) ಓಣಂ ಹಿನ್ನೆಲೆಯಲ್ಲಿ ಮಹಿಳೆ ತನ್ನ ಕುಟುಂಬಸ್ಥರ ಜೊತೆಗೆ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಮಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆ ಮಗನ ರಕ್ಷಣೆಗೆ ನದಿಗೆ ಇಳಿದ ಕೇರಳದ ಮಹಿಳೆ ನೀರುಪಾಲಾಗಿದ್ದಾರೆ.

ಕೇರಳದ ತಿರುವನಂತಪುರಂನ ಕಾಚಗಡ ತಾಲೂಕಿನ ಚಕ್ಕಪಾಲ್‌ ಚಿಳಪಿಲ್ಲೆ ಗ್ರಾಮದ ನಿವಾಸಿ ಚಾಂದಿ ಶೇಖರ್‌ (42 ವರ್ಷ) ಎಂಬಾಕೆ ನೀರು ಪಾಲಾಗಿರುವ ಮಹಿಳೆ. ಚಾಂದಿಶೇಖರ್‌ ಪತಿ ಮುರುಗನ್‌ ಓಣಂ ಹಿನ್ನೆಲೆಯಲ್ಲಿ ತನ್ನ ಕುಟುಂಬಸ್ಥರ ಜೊತೆಯಲ್ಲಿ ಮೂಕಾಂಬಿಕೆಯ ದರ್ಶನಕ್ಕಾಗಿ ಕೊಲ್ಲೂರಿಗೆ ಬಂದಿದ್ದರು. ಕೊಲ್ಲೂರಿನ ಯಮುನಾ ವಿಹಾರ್‌ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು.

ಶನಿವಾರ ಸಂಜೆ 5.15ರ ಸುಮಾರಿಗೆ ಕೊಲ್ಲೂರಿನ ಸೌಪರ್ಣಿಕಾ ಸ್ನಾನ ಘಟ್ಟದಲ್ಲಿ ಎಲ್ಲರೂ ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಆದಿತ್ಯನ್‌ ನದಿಯಲ್ಲಿ ನೀರಿಗೆ ಇಳಿದಾಗ ನೀರಿನ ಸೆಳೆತಕ್ಕೆ ಆತ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆಯಲ್ಲಿ ಆದಿತ್ಯನ್‌ ರಕ್ಷಣೆಗೆ ಚಾಂದಿ ಶೇಖರ್‌ ಮುಂದಾಗಿದ್ದಾರೆ. ನಂತರ ಮುರುಗನ್‌ ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಮುರುಗನ್‌ ಹಾಗೂ ಮಗ ಆದಿತ್ಯನ್‌ ನನ್ನು ರಕ್ಷಣೆ ಮಾಡಲಾಗಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ ಚಾಂದಿ ಶೇಖರ್‌ (Kerala Devotie death kolluru) ನೀರು ಪಾಲಾಗಿದ್ದಾರೆ. ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿರುವ ಮಹಿಳೆಗಾಗಿ ಅಗ್ನಿಶಾಮಕ ದಳ ಹಾಗೂ ಕೊಲ್ಲೂರು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಈ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ 10 ಸಾವು

ಗಣೇಶಮೂರ್ತಿ ವಿಸರ್ಜನೆ ವೇಳೆ 10 ಮುಂದಿ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಹರಿಯಾಣದ ಎರಡು ಕಡೆ ಹಾಗೂ ಉತ್ತರ ಪ್ರದೇಶದ ಒಂದು ಕಡೆ ಒಟ್ಟು ಮೂರು ಪ್ರತ್ಯೇಕ ಘಟನೆಗಳಲ್ಲಿ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಹರಿಯಾಣದಲ್ಲಿ ಸೋನಿಪತ್ ನಲ್ಲಿ ಮೂವರು ಮೃತಪಲಟ್ಟಿದ್ದು, ಹರಿಯಾಣದ ಮಹೇಂದ್ರ ಗಢದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಉನ್ನಾವೋನಲ್ಲಿ ಮೂವರು ಮೃತಪಟ್ಟಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ದೇಶದಲ್ಲಿ ಗಣೇಶೋತ್ಸವಕ್ಕೆ ಮಂಕು ಕವಿದಿತ್ತು. ಆದ್ರೆ ಈ ಬಾರಿ ಗಣೇಶೋತ್ಸವಕ್ಕೆ ಮತ್ತೆ ರಂಗು ಬಂದಿದೆ. ಎರಡು ಮೂರುವರ್ಷದಿಂದ ಹಬ್ಬ ಆಚರಿಸದ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲೆಡೆ ಗಣೇಶೋತ್ಸವವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಅದರ ಜೊತೆಗೆ ಕೆಲವೆಡೆ ಅಹಿತಕರ ಘಟನೆಗಳು ನಡೀತಿವೆ.

ಇದನ್ನೂ ಓದಿ : ಸಾಲಿಗ್ರಾಮ : ಮಾದಕವಸ್ತು ಸೇವನೆ, ಮೂವರ ಬಂಧನ

ಇದನ್ನೂ ಓದಿ : Uppalapathy Venkata Krishnamraju:ಟಾಲಿವುಡ್‌ ರೆಬಲ್‌ ಸ್ಟಾರ್‌ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ನಿಧನ

Kerala Devotie death near kollur Mookambika Temple Souparnika River

Comments are closed.