Virat Kohli high-level mask : ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್, ಏನಿದರ ವಿಶೇಷತೆ ಗೊತ್ತಾ ?

ಬೆಂಗಳೂರು: (Virat Kohli high-level mask) ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚೆಗೆ ಏಷ್ಯಾ ಕಪ್ ಟೂರ್ನಿಯ (Asia cup 2022) ವೇಳೆ ಮುಖಕ್ಕೆ ವಿಶೇಷ ಮಾಸ್ಕ್ ಒಂದನ್ನು ಧರಿಸಿ ಟ್ರೈನಿಂಗ್ ನಡೆಸಿದ್ದರು ವಿರಾಟ್ ಕೊಹ್ಲಿ ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಅಭ್ಯಾಸ ನಡೆಸುತ್ತಿದ್ದ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸತತ 10 ನಿಮಿಷಗಳ ಕಾಲ ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಕೊಹ್ಲಿ ಟ್ರೈನಿಂಗ್ ನಡೆಸಿದ್ದರು.

ಸ್ಪೆಷಲ್ ಮಾಸ್ಕ್ ಟ್ರೈನಿಂಗ್ ನಂತರ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 71ನೇ ಶತಕ ಒಲಿದಿತ್ತು. ಗುರುವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಅಬ್ಬರಿಸಿದ್ದ ಕೊಹ್ಲಿ ಕೇವ 53 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಬಾರಿಸಿ, ಎರಡೂ ಮುಕ್ಕಾಲು ವರ್ಷಗಳ ನಂತರ ಶತಕದ ಬರ ನೀಗಿಸಿಕೊಂಡಿದ್ದರು. ಅಂತಿಮವಾಗಿ ಕೊಹ್ಲಿ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 122 ರನ್ ಸಿಡಿಸಿದ್ದರು.

ಹಾಗಾದರೆ ವಿರಾಟ್ ಕೊಹ್ಲಿ ಟ್ರೈನಿಂಗ್ ವೇಳೆ ಬಳಸಿದ್ದ ಸ್ಪೆಷಲ್ ಮಾಸ್ಕ್’ನ ವಿಶೇಷತೆ ಏನು? ಈ ಮಾಸ್ಕ್ ಧರಿಸಿ ಟ್ರೈನಿಂಗ್ ನಡೆಸುವುದರಿಂದ ಏನು ಲಾಭ? ಈ ಕುತೂಹಲ ಸಹಜವಾಗಿಯೇ ಸಾಕಷ್ಟು ಜನರನ್ನು ಕಾಡುತ್ತಿದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ (Virat Kohli high-level mask ) ವಿಶೇಷತೆ

  • ಹೈ-ಲೆವೆಲ್ ಸ್ಪೆಷಲ್ ಮಾಸ್ಕನ್ನು ಸಾಮಾನ್ಯವಾಗಿ ಲಾಂಗ್ ಡಿಸ್ಟೆನ್ಸ್ ರನ್ನರ್’ಗಳು ಬಳಸುತ್ತಾರೆ.
  • ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಟ್ರೈನಿಂಗ್ ನಡೆಸುವುದರಿಂದ ಶ್ವಾಸಕೋಶ ಮತ್ತು ಉಸಿರಾಟದ ಸ್ನಾಯುಗಳು ಬಲಿಷ್ಠಗೊಳ್ಳುತ್ತವೆ.
  • ಲಾಂಗ್ ಡಿಸ್ಟೆನ್ಸ್ ರನ್ನರ್ಸ್, ಫುಟ್ಬಾಲ್ ಆಟಗಾರರು ಸೇರಿದಂತೆ ಜಗತ್ತಿನ ಶ್ರೇಷ್ಠ ಕ್ರೀಡಾಪಟುಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ.
  • ಕ್ರಿಕೆಟಿಗರು ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಟ್ರೈನಿಂಗ್ ನಡೆಸುವುದು ತೀರಾ ವಿರಳ.
  • ಆದರೆ ಫಿಟ್’ನೆಸ್ ಕಡೆ ವಿಶೇಷ ಗಮನ ಹರಿಸುವ ವಿರಾಟ್ ಕೊಹ್ಲಿ ಹೈ-ಲೆವೆಲ್ ಸ್ಪೆಷಲ್ ಮಾಸ್ಕ್ ಧರಿಸಿ ಟ್ರೈನಿಂಗ್ ನಡೆಸುತ್ತಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಫಿಟ್ಟೆಸ್ಟ್ ಆಟಗಾರ. ಫಿಟ್ನೆಸ್’ನಲ್ಲಿ ಕೊಹ್ಲಿ ಅವರನ್ನು ಮೀರಿಸುವ ಮತ್ತೊಬ್ಬ ಆಟಗಾರನಿಲ್ಲ. ವಿಕೆಟ್ ನಡುವಿನ ಓಟದಲ್ಲಿ ವಿರಾಟ್ ಕೊಹ್ಲಿಗೆ ಅವರೇ ಸಾಟಿ. ಅವರ ಜೊತೆ ಓಡಲು ಸಾಧ್ಯವಿಲ್ಲ ಎಂದು ಕಳೆದ ಐಪಿಎಲ್ ಟೂರ್ನಿಯ ವೇಳೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್’ವೆಲ್ ಹೇಳಿಕೆ ನೀಡಿದ್ದರು.

ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

ಇದನ್ನೂ ಓದಿ : Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

Asia cup 2022 Ind vs Pak Virat Kohli high-level mask with Practice

Comments are closed.