Uppalapathy Venkata Krishnamraju:ಟಾಲಿವುಡ್‌ ರೆಬಲ್‌ ಸ್ಟಾರ್‌ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ನಿಧನ

ತೆಲಗು ಸಿನಿಮಾರಂಗದ ರೆಬಲ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿರುವ (Uppalapathy Venkata Krishnamraju)ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ವಿಧಿವಶರಾಗಿದ್ದಾರೆ. ಇಂದು ಬೆಳಗ್ಗಿನ ಜಾವ 3.25ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಿನಿರಂಗ ಮಾತ್ರವಲ್ಲದೇ, ಪತ್ರಕರ್ತ ಮತ್ತು ಛಾಯಗ್ರಾಹಕರಾಗಿ ಕೂಡ ಜನಪ್ರಿಯತೆಯನ್ನು ಪಡೆದಿದ್ದಾರೆ. ರೆಬಲ್‌ ಸ್ಟಾರ್‌ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

(Uppalapathy Venkata Krishnamraju)ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ಅವರು ಪತ್ನಿ, ಮೂವರು ಪುತ್ರಿಯರು ಸೇರಿದಂತೆ ಅಪಾರ ಸ್ನೇಹಿತರು, ಅಭಿಮಾನಿಗಳು ಹಾಗೂ ಕುಟಂಬಸ್ಥರನ್ನು ಅಗಲಿದ್ದಾರೆ. ಕೃಷ್ಣಂರಾಜು ಅವರು 1940 ರಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲಟೂರು ಗ್ರಾಮದಲ್ಲಿ ಜನಿಸಿದ್ದರು. ಕೃಷ್ಣಂರಾಜು 26ನೇ ವಯಸ್ಸಿನಲ್ಲಿ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 1966ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು “ಚಿಲಕ ಗೋರಿಂಕಾ” ಸಿನಿಮಾದಲ್ಲಿ. ಆರಂಭದಲ್ಲಿ ಖಳನಾಯಕನಾಗಿ ಸಿನಿಂಆದಲ್ಲಿ ನಟಿಸುತ್ತಿದ್ದ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ಅವರು ನಂತರದ ವರ್ಷಗಳಲ್ಲಿ ಖ್ಯಾತ ನಾಯಕ ನಟರಾಗಿ ಹೊರಹೊಮ್ಮಿದ್ದರು.

“ಗೋಪಿಕೃಷ್ಣ ಮೂವಿಸ್” ಲಾಂಛನದ ಅಡಿಯಲ್ಲಿ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಪ್ರಭಾಸ್‌ ನಾಯಕನಟನಾಗಿ ಕಾಣಿಸಿಕೊಂಡಿರು “ರಾಧೇ ಶ್ಯಾಮ” ಸಿನಿಮಾದಲ್ಲಿ ಉಪ್ಪಲಪತ್ತಿ ವೆಂಕಟ ಕೃಷ್ಣಂರಾಜು ಅವರು ಕೊನೆಯದಾಗಿ ಬಣ್ಣ ಹಚ್ಚಿದ್ದರು. ಇನ್ನು ಪ್ರಭಾಸ್‌ ಅವರು ಕೃಷ್ನಂರಾಜುರವರಿಗೆ ಹತ್ತಿರ ಸಂಬಂಧಿ. ಕೃಷ್ಣಂರಾಜುರವರ ನಟನೆಗೆ ಹಲವಾರು ಫಿಲ್ಂ ಫೇರ್ ಪ್ರಶಸ್ತಿ ಹಾಗೂ ನಂದಿ ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ: ರಕ್ತದಲ್ಲಿ ತನ್ನ ಕಲಾಕೃತಿ ಬಿಡಿಸಿದವನಿಗೆ ನಟ ಸೋನು ಸೂದ್​ ಬುದ್ಧಿಮಾತು

ಇದನ್ನೂ ಓದಿ: ಧ್ರುವ ಸರ್ಜಾ ಪತ್ನಿ ಸೀಮಂತಕ್ಕೆ ಗೈರಾದ ಮೇಘನಾ ರಾಜ್‌ : ಸರ್ಜಾ ಕುಟುಂಬದ ಮೇಲೆ ಮುನಿಸಿಕೊಂಡ್ರಾ ಕುಟ್ಟಿಮಾ

ಇದನ್ನೂ ಓದಿ: ಹೊಯ್ಸಳ ಕ್ಕೆ ಬಂದ್ರು ಮೇಘನಾ ಸರ್ಜಾ: ಡಾಲಿ ಅಡ್ಡಾದಿಂದ ಹೊರಬಿತ್ತು ಅಪ್ಡೇಟ್

ಕೃಷ್ಣಂರಾಜು ಅವರು ಸಿನಿಮಾ ಮಾತ್ರವಲ್ಲದೇ ತಮ್ಮನ್ನು ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದರು. ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ, ಗ್ರಾಹಕ ಸೇವೆಗಳು, ಆಹಾರ ಮತ್ತು ಪಡಿತರ ವಿತರಣೆ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಗಳಲ್ಲಿ ಸಚಿವ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಕೃಷ್ಣಂರಾಜುರವರ ನಿಧನದ ಸುದ್ಧಿಯನ್ನು ತಿಳಿದ ಅನೇಕ ಸಿನಿನಟರು, ಅಭಿಮಾನಿಗಳು, ಸೇಹ್ನಿತರು ಹಾಗೂ ಬಂಧುಗಳು‌ ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಸಂತಾಪವನ್ನು ಸೂಚಿಸಿದ್ದಾರೆ.

Comments are closed.