ಕುಂದಾಪುರದ ಶ್ರೀ ಸ್ವರ್ಣನೂಪುರ ಯಕ್ಷಗಾನ ಮಂಡಳಿ : ಯಕ್ಷ ಕಿನ್ನರ ಸಂಭ್ರಮ 2025
ಕುಂದಾಪುರ : ಕುಂದಾಪುರದ ಶ್ರೀ ಸ್ವರ್ಣನೂಪುರ ಯಕ್ಷಗಾನ ಮಂಡಳಿ (Kundapura Sri Swarnupura Yakshagana Mandali) ಯ 3ನೇ ವರ್ಷದ ವಾರ್ಷಿಕೋತ್ಸವ ಸ್ವರ್ಣನೂಪುರ ಯಕ್ಷ ಕಿನ್ನರ ಸಂಭ್ರಮ 2025 ರಂಗ ತಾರಾ ಚಂದ್ರಮ ಕಾರ್ಯಕ್ರಮವು ಜುಲೈ 20ರಂದು ನಡೆಯಲಿದೆ.
ಸ್ವರ್ಣನೂಪುರ ಯಕ್ಷಗಾನ ಮಂಡಳಿ ಕುಂದಾಪುರ ಇದರ ವ್ಯವಸ್ಥಾಪಕರಾದ ಗಣೇಶ್ ಸಿ ಗುನಗ ಯೋಜನೆಯಲ್ಲಿ ಕುಂದಾಪುರದ ಹಂಗಳೂರು ಶನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಸ್ವರ್ಣನೂಪುರ ಯಕ್ಷ ಕಿನ್ನರ ಸಂಭ್ರಮ 2025 ರಂಗ ತಾರಾ ಚಂದ್ರಮ ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಉದ್ಘಾಟಿಸಲಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ತಾಲೂಕು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಉಡುಪಿ ಜಿಲ್ಲಾ ಶಾಖೆಯ ಜಿಲ್ಲಾ ಡೈರೆಕ್ಟರ್ ಶ್ರೀಕಾಂತ ಜಿ. ಗುನಗ ಅವರು ಸಭಾಧ್ಯಕ್ಷೆಯನ್ನು ವಹಿಸಲಿದ್ದಾರೆ.

ಕುಂದಾಪುರದ ಆದರ್ಶ ಆಸ್ಪತ್ರೆಯ ಡಾ.ಆದರ್ಶ್ ಹೆಬ್ಬಾರ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಅಮಾಸೆಬೈಲು ಡ್ಯುಯೆಲ್ ಸ್ಟಾರ್ ಶಾಲೆಯ ಕಾರ್ಯದರ್ಶಿ ಪ್ರಕಾಶ್ ಆಚಾರ್ ವಡ್ಡರ್ಸೆ, ಕಿರಾಡಿ ಯಕ್ಷ ನಕ್ಷತ್ರ ಟ್ರಸ್ಟ್ (ರಿ) ಆರ್ವಸೆಯ ಪ್ರವರ್ತಕರಾದ ಪ್ರಕಾಶ್ ಮೊಗವೀರ ಕಿರಾಡಿ.
ಹಂಗಳೂರು ಶನೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಅಣ್ಣಯ್ಯ ಪೂಜಾರಿ, ಕೋಟೇಶ್ವರದ ಖ್ಯಾತ ವಾಸ್ತುತಜ್ಞರಾದ ಬಸವರಾಜ್ ಶೆಟ್ಟಿಗಾರ್.
ಬೆಂಗಳೂರು ರಾಜಾಜಿ ನಗರದ ಶ್ರೀ ಗುರು ಕಾರುಣ್ಯ ಫ್ಯಾಷನ್ ಡಿಸೈನರ್‌ನ ರವಿ ಪೂಜಾರಿ ಆನಗಳ್ಳಿ ಭಾಗವಹಿಸಲಿದ್ದಾರೆ.
ಉದ್ಯಮಿಗಳಾದ ಚಕ್ಕರ್‌ಮಕ್ಕಿ ಕೃಷ್ಣಪೂಜಾರಿ, ಮಂಜುನಾಥ ಭಂಡಾರಿ ಕೋಟ ಪಡುಕರೆ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ಇದನ್ನೂ ಓದಿ : ಅಂಚೆ ಇಲಾಖೆ ನೀಡ್ತಿದೆ 50 ಲಕ್ಷದ ಜೀವವಿಮೆ : ಮಾಡಿಸುವುದು ಹೇಗೆ ?
ಸ್ವರ್ಣನೂಪುರ ಪ್ರಶಸ್ತಿ ಪುರಸ್ಕಾರ, ಗೌರವ ಸಮ್ಮಾನ
ಇದೇ ಸಂದರ್ಭದಲ್ಲಿ ಸ್ವರ್ಣನೂಪುರ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವು ನೆರವೇರಲಿದೆ. ಸ್ವರ್ಣನೂಪುರ ಯಕ್ಷಗಾನ ಮಂಡಳಿ ಕುಂದಾಪುರ ಇದರ ವ್ಯವಸ್ಥಾಪಕರಾದ ಗಣೇಶ್ ಸಿ ಗುನಗ ಸಂಯೋಜನೆಯಲ್ಲಿ ನಡೆಯಲಿದೆ.
ಯಕ್ಷಗಾನದ ಖ್ಯಾತ ಭಾಗವತ, ಶಿಕ್ಷಕರಾದ ರಾಜೇಶ್ ಕರ್ಕೇರ ದಂಪತಿ ಕೋಡಿಕನ್ಯಾನ ಇವರಿಗೆ ಈ ಬಾರಿಯ ಸ್ವರ್ಣನೂಪುರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೇ ಕುಮಾರಿ ಪೂಜಾ ಆಚಾರ್ ತೆಕ್ಕಟ್ಟೆ ಅವರಿಗೆ ಗೌರವ ಸನ್ಮಾನ ನೆರವೇರಲಿದೆ.

ಕೇಶವ ಕೈಪಾಡಿ ದಂಪತಿಗೆ ವಿಶೇಷ ಅಭಿನಂದನೆ ಹಾಗೂ ಹರ್ತಟ್ಟು ವಿಘ್ನೇಶ್ ದೇವಾಡಿಗ ಅವರಿಗೆ ಗುರವಂದನೆ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲಾಗುತ್ತದೆ.
Kundapura Sri Swarnupura Yakshagana Mandali : ಭಾನು ಪ್ರೌತ್ರ ಯಕ್ಷಗಾನ
ಮಧ್ಯಾಹ್ಮ 3 ಗಂಟೆಗೆ ಯಶಸ್ವಿ ಕಲಾವೃಂದ (ರಿ) ಕೊಮೆ-ತೆಕ್ಕಟ್ಟೆ ಇದರ ಆಯ್ದ ವಿದ್ಯಾರ್ಥಿಗಳಿಂದ ಯಕ್ಷ ಗಾನ ವೈಭವ ಕಾರ್ಯಕ್ರಮವು ನಡೆಯಲಿದೆ.
ಸಂಜೆ 5.3೦ ರಿಂದ ಸ್ವರ್ಣನೂಪುರ ಸಂಸ್ಥೆಯ ವಿದ್ಯಾರ್ಥಿಗಳಿಂದ ಪೌರಾಣಿಕ ಯಕ್ಷಗಾನ ಭಾನು ಪೌತ್ರ ಪ್ರಸಂಗವು ಯಕ್ಷಗುರುಗಳಾದ ವಿಘ್ನೇಶ್ ದೇವಾಡಿಗ ಅವರ ದಕ್ಷ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ : ಎಲ್‌ಐಸಿ ಕನ್ಯಾದಾನ ಯೋಜನೆ : 121 ರೂ. ಹೂಡಿಕೆ ಮಗಳ ಭವಿಷ್ಯ, ಮದುವೆಗೆ ಪಡೆಯಿರಿ 27 ಲಕ್ಷ ರೂ.
ಭಾಗವತರಾದ ರಾಜೇಶ್ ಕರ್ಕೇರ ಕೋಡಿ, ಪ್ರಶಾಂತ್ ಪೂಜಾರಿ ಪಡುಕರೆ, ಪೂಜಾ ಆಚಾರ್ ತೆಕ್ಕಟ್ಟೆ. ಮದ್ದಲೆಯಲ್ಲಿ ಕೃಷ್ಣ ಗಿಳಿಯಾರು, ವಿಶ್ವನಾಥ್ ಸಾಸ್ತಾನ.
ಚಂಡೆಯಲ್ಲಿ ಕೃಷ್ಣನಂದ ಶೆಣೈ ಶಿರಿಯಾರ, ತನೀಶ್ ಕೋಟೇಶ್ವರ ಅವರು ಹಿಮ್ಮೆಳದಲ್ಲಿ ಸಹಕರಿಸಲಿದ್ದಾರೆ. ಕಾರ್ಯಕ್ರಮವನ್ನು News Next ನೇರಪ್ರಸಾರ ಮಾಡಲಿದೆ.
Kundapura Sri Swarnupura Yakshagana Mandali Yaksha Kinnar Sambraham 2025 in Kannada news



