Naveen Shekharappa : ಕೊನೆಗೂ ತಾಯ್ನಾಡು ತಲುಪುತ್ತಿದೆ ನವೀನ್ ಮೃತದೇಹ : ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ಬೆಂಗಳೂರು : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತ ಮೆಡಿಕಲ್ ವಿದ್ಯಾರ್ಥಿ ನವೀನ್ (Naveen Shekharappa ) ಕೊನೆಗೂ ತಾಯ್ನಾಡು ತಲುಪುವ ಗಳಿಗೆ ಸನ್ನಿಹಿತ ವಾಗಿದ್ದು ಸೋಮವಾರ ಬೆಳಗಿನ ಜಾವ ನವೀನ್ ಮೃತದೇಹ ತಾಯ್ನಾಡು ತಲುಪಲಿದ್ದು ಅಂದೇ ಮಧ್ಯಾಹ್ನದ ವೇಳೆ ಪಾರ್ಥಿವ ಶರೀರ ಹುಟ್ಟೂರನ್ನು ತಲುಪಲಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಕಾರ್ಕಿವ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಾವೇರಿ ಮೂಲದ ನವೀನ್ ಸಾವನ್ನಪ್ಪಿದ್ದರು. ಯುದ್ಧದ ವೇಳೆ ನಡೆದ ಶೆಲ್ ದಾಳಿಯಲ್ಲಿ ನವೀನ್ ಸಾವನ್ನಪ್ಪಿದ್ದರು.

ನವೀನ್ ಸಾವನ್ನಪ್ಪಿದ ಸುದ್ದಿ ತಿಳಿದಾಗಿನಿಂದ‌ ನವೀನ್ ಪೋಷಕರು ನವೀನ್ ಮೃತದೇಹವನ್ನು ತರಿಸಿ ಕೊಡುವಂತೆ ದುಂಬಾಲು ಬಿದ್ದಿದ್ದರು. ಮನೆಗೆ ಭೇಟಿ ನೀಡಿದ ಎಲ್ಲ ರಾಜಕೀಯ ನಾಯಕರು ಹಾಗೂ ಗಣ್ಯರಿಗೆ ಕೊನೆ ಸಲ ಮಗನ ಮುಖವನ್ನು ನೋಡುವ ಅವಕಾಶ ಕಲ್ಪಿಸಿ ಎಂದು ಕೈಮುಗಿದು ಬೇಡಿಕೊಂಡಿದ್ದರು.ಇದಾದ ಬಳಿಕ ನವೀನ್ ಪೋಷಕರ ಜೊತೆ ಮಾತನಾಡಿದ್ದ ಪ್ರಧಾನಿ ನರೇಂದ್ರ‌ ಮೋದಿ ಮೃತದೇಹ ತರಿಸಿಕೊಡುವ ಭರವಸೆ ನೀಡಿದ್ದರು. ಇದಲ್ಲದೇ ನವೀನ್ ಕುಟುಂಬಸ್ಥರನ್ನು ಭೇಟಿ ಮಾಡಿದ್ದ ಸಿಎಂ ಬೊಮ್ಮಾಯಿ ಕೂಡ ವಿದೇಶಾಂಗ ಸಚಿವಾಲಯ ಉಕ್ರೇನ್ ಸರ್ಕಾರ ಹಾಗೂ ಎಂಬಸಿ ಜೊತೆ ಸಂಪರ್ಕದಲ್ಲಿದೆ ಎಂದಿದ್ದರು.

Body Of Medical Student Naveen Shekharappa Killed In Ukraine To Reach Bengaluru On Monday
image credit : PIB

ಎಲ್ಲರ ಪ್ರಯತ್ನದ ಬಳಿಕ ಈಗ ಉಕ್ರೇನ್ ನಲ್ಲಿದ್ದ ನವೀನ್ ಶೇಖರಪ್ಪ ನ್ಯಾನಗೌಡರ್ ಶವ ಕರ್ನಾಟಕ್ಕೆ ಬರುತ್ತಿದೆ. ಸೋಮವಾರದಂದು ನವೀನ್ ಶವ ತಾಯ್ನಾಡು ತಲುಪಲಿದ್ದು, ಮಾರ್ಚ್ 21 ರಂದು ಬೆಳಗಿನಜಾವ 3.30ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ಬಳಿಕ ನೇರವಾಗಿ ಸ್ವಗ್ರಾಮ ಹಾವೇರಿ ಜಿಲ್ಲೆ ಚಳಗೇರಿಗೆ ಶವ ರವಾನೆಯಾಗಲಿದೆ. ಈ ಬಗ್ಗೆ ಉಕ್ರೇನ್ ನಲ್ಲಿರೋ ಭಾರತೀಯ ರಾಜಭಾರ ಕಛೇರಿ ಅಧಿಕಾರಿಗಳಿಂದ ಪೋಷಕರಿಗೆ ಮಾಹಿತಿ ನೀಡಲಾಗಿದೆ.

Body Of Medical Student Naveen Shekharappa Killed In Ukraine To Reach Bengaluru On Monday

ನವೀನ್ (Naveen Shekharappa )ಹುಟ್ಟೂರಲ್ಲೇ ಅಂತ್ಯಕ್ರೀಯೆ

ಮೃತಪಟ್ಟು 20 ದಿನಗಳ ನಂತರ ಪೋಷಕರಿಗೆ ಶವ ಹಸ್ತಾಂತರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನೆರವೇರಿಸೋ ಬದಲಿಗೆ ಆಸ್ಪತ್ರೆಗೆ ಕೊಡೋಕೆ ಚಿಂತನೆ ನಡೆದಿದೆ ಎಂದು ನವೀನ್ ಸಹೋದರ ಹರ್ಷ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರೋ ಹರ್ಷ, ಮೃತಪಟ್ಟು ಬಹಳ ದಿನ ಆಗಿರೋದ್ರಿಂದ ಆಸ್ಪತ್ರೆಗೆ ಕೊಡೋ ತೀರ್ಮಾನ ಮಾಡಿದ್ದೇವೆ. ಈ ಕುರಿತು ವೈದ್ಯರ ಸಲಹೆ ಪಡೆಯುತ್ತಿದ್ದೇವೆ ವೈದ್ಯರ ಸಲಹೆಯ ನಂತರ ಅಂತಿಮ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

Body Of Medical Student Naveen Shekharappa Killed In Ukraine To Reach Bengaluru On Monday

ಆದರೆ ಮೂಲಗಳ ಮಾಹಿತಿ ಪ್ರಕಾರ ನವೀನ್ ಮೃತದೇಹ ಈಗಾಗಲೇ ಡಿಕಾಂಪೋಸ್ಟ್ ಹಂತದಲ್ಲಿರೋದರಿಂದ ದೇಹದಾನ ಸಾಧ್ಯವಿಲ್ಲ ಎನ್ನಲಾಗುತ್ತಿದ್ದು, ಕೇವಲ ಅಂತ್ಯಕ್ರಿಯೆ ನಡೆಸಲು ಮಾತ್ರ ಅವಕಾಶವಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಓದಲು ಹೋಗಿ ಸ್ಮಶಾನ ಸೇರಿದ ನವೀನ್ ಮೃತದೇಹದ ಅಂತಿಮ ದರ್ಶನ ಅವಕಾಶ ಹೆತ್ತವರಿಗೆ ಸಿಕ್ಕಂತಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಬಜೆಟ್ ಮಂಡನೆಗೆ ಸಜ್ಜಾದ ಅಧಿಕಾರಿಗಳು: ಬಜೆಟ್ ಪ್ರಮುಖ ಅಂಶ ಇಲ್ಲಿದೆ

ಇದನ್ನೂ ಓದಿ : ಮದುವೆಯಾಗೋಣ ಎಂದು ಕರೆದು ಪೆಟ್ರೋಲ್‌ ಸುರಿದು ಬೆಂಕಿ ಇಟ್ಟ : ಪ್ರೇಮಿಯ ಹುಚ್ಚಾಟಕ್ಕೆ ತಹಶೀಲ್ದಾರ ಪುತ್ರಿ ಬಲಿ

(Body Of Medical Student Naveen Shekharappa Killed In Ukraine To Reach Bengaluru On Monday)

Comments are closed.