Sleeplessness ಗರ್ಭಿಣಿಯರು ನಿದ್ದೆ ಕಡಿಮೆ ಮಾಡಿದರೆ ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಗೊತ್ತೇ?

ತಾಯಿಯಾಗುತ್ತಿರುವವರು ಹೆಚ್ಚಾಗಿ ಪಡೆದುಕೊಳ್ಳುವ ಸಲಹೆಗಳೆಂದರೆ ಇಬ್ಬರ ಸಲುವಾಗಿ ಊಟಮಾಡಬೇಕು, ವ್ಯಾಯಾಮ ಮಾಡುವಂತಿಲ್ಲ, ಮತ್ತು ಗರ್ಭಿಣಿಯರು ಚೆನ್ನಾಗಿ ನಿದ್ರಿಸಬೇಕು ಹೀಗೆ ಹತ್ತು ಹಲವು. ತಜ್ಞರು ಹೇಳುವುದೇನೆಂದರೆ ನಿದ್ದೆಯ ಕೊರೆತೆಯಿಂದ (‌ sleeplessness) ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಅವುಗಳಲ್ಲಿ ಪ್ರೀಕ್ಲಾಂಪ್ಸಿಯಾ ಅಂದರೆ ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಸಮಸ್ಯೆಗಳು ಮತ್ತು ಮಗುವಿನ ಅಕಾಲಿಕ ಜನನ ಮುಂತಾದವುಗಳು.

ಸರಿಯಾಗಿ ನಿದ್ರಿಸದವರಲ್ಲಿ ಪ್ರಿಕ್ಲಾಂಪ್ಸಿಯಾದ ತೊಂದರೆ ಅಧಿಕವಾಗಿರುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಲೇಬರ್‌ ಪೇನ್‌ ಮತ್ತು ಸಿಸೆರಿಯನ್‌ಗಳನ್ನು ಎದುರಿಸಬೇಕಾಗುತ್ತದೆ ಎಂದು ಖರಗಢ ನ ಮದರ್‌ಹುಡ್‌ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಸುರಭಿ ಸಿದ್ಧಾರ್ಥ ಅವರು ಹೇಳುತ್ತಾರೆ.

ಗರ್ಭಿಣಿಯರಲ್ಲಿ ಹಾರ್ಮೋನ್‌ಗಳ ವ್ಯತಾಸದಿಂದ ಅನೇಕ ಬದಲಾವಣೆಗಳು ಆಗುತ್ತವೆ ಮತ್ತು ಅದು ಬದಲಾಗುತ್ತಲೂ ಇರುತ್ತದೆ. ಒಂಬತ್ತನೇ ತಿಂಗಳುಗಳ ಸಮಯದಲ್ಲಂತೂ ಇಸ್ಟ್ರೋಜಿನ್‌ನ ಪ್ರಮಾಣವು ಅಧಿಕವಾಗಿರುವುದರಿಂದ ರೈನಿಟೈಸ್‌(ಮೂಗಿನ ಅಂಗಾಂಶಗಳ ಊತ) ತೊಂದರೆ ಕಾಣಿಸುವುದು. ಇದರಿಂದ ಗೊರಕೆ, ಅಬ್‌ಸ್ಟ್ರಕ್ಟೀವ್‌ ಸ್ಲೀಪ್‌ ಅಪ್ನಿಯಾಗಳು ತಲೆದೂರುವುದು. ಆದಕಾರಣ ಗರ್ಭಧಾರಣೆಯ ಮೊದಲು ಇರುವ ತೊಂದರೆಗಳು ಗರ್ಭವಸ್ಥೆಯಲ್ಲಿ ಅಧಿಕವಾಗುವುದು ಎಂದು ಡಾ. ಸುರಭಿ ಹೇಳುತ್ತಾರೆ.

ಮತ್ತೊಂದು ಗರ್ಭಾವಸ್ಥೆಯ ಕಡಿಮೆ ನಿದ್ದೆಯ ಸಾಮಾನ್ಯವಾದ ಪರಿಣಾಮವೆಂದರೆ ರೆಸ್ಟಲೆಸ್‌ ಲೆಗ್‌ ಸಿಂಡ್ರೋಮ್‌ (RLS). ಅಂದರೆ ವಿಶ್ರಾಂತಿಯ ಸಮಯದಲ್ಲಿ ಕಾಲುಗಳನ್ನು ಸರಿಸಲು ಅನಿಯಂತ್ರಿತ ರೀತಿಯಲ್ಲಿ ಪ್ರಚೋದನೆಗೊಳ್ಳುವುದು.

Sleeplessness during pregnancy causes many complications
ಸಾಂದರ್ಭಿಕ ಚಿತ್ರ

ಇದನ್ನೂ ಓದಿ: Best Fruits For Skin: ತ್ವಚೆಯ ಆರೋಗ್ಯಕ್ಕೆ ಯಾವೆಲ್ಲಾ ಹಣ್ಣುಗಳನ್ನು ಸೇವಿಸಬೇಕು ಗೊತ್ತಾ!

ಗರ್ಭೀಣಿ ಸ್ತ್ರೀಯರಿಗೆ ಚೆನ್ನಾಗಿ ನಿದ್ರಿಸಲು (‌ sleeplessness) ಅಡ್ಡಿಪಡಿಸುವ ಹಲವು ಕಾರಣಗಳು:

  • ದೇಹದ ನೋವು, ಬೆನ್ನುನೋವು ಮತ್ತು ಸ್ನಾಯುಗಳ ಬಿಗಿತ ನಿದ್ದೆಯ ತೊಂದರೆಗೆ ಕಾರಣವಾಗಬಲ್ಲದು.
  • ಗರ್ಭಕೋಶವು ದೊಡ್ಡದಾಗುವುದರಿಂದ ಅದು ಬ್ಲಾಡರ್‌ ಮೇಲೆ ಒತ್ತಡವನ್ನುಂಟು ಮಾಡಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುಬೇಕಾಗುವುದು.
  • ಕೆಲವು ಗರ್ಭಿಣಿ ಮಹಿಳೆಯರಿಗೆ ಎದೆ ಮತ್ತು ಗಂಟಲಿನಲ್ಲಿ ಉರಿಕಾಣಿಸುವುದರಿಂದ ನಿದ್ದೆಯ ಸಮಸ್ಯೆಯಾಗುವುದು.
    *ನಿದ್ದೆ ಮಾಡುವಾಗ ವಾಕರಿಕೆ ಬಂದಂತಾಗಿ ನಿದ್ದೆ ಇಲ್ಲವಾಗಬಹುದು.
  • ಕಾಲುಗಳಲ್ಲಿನ ಸೆಳೆತವೂ ಸಹ ನಿದ್ರಾಭಂಗಕ್ಕೆ ಕಾರಣವಾಗಬಲ್ಲದು.
Sleeplessness during pregnancy causes many complications

ಹಾಗಾದರೆ, ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ದೆ( sleeplessness) ಮಾಡುವುದಾದರೂ ಹೇಗೆ?

ಆರೋಗ್ಯ ಪೂರ್ಣ ಆಹಾರ ಮತ್ತು ಕೆಫಿನ್‌ ಮತ್ತು ಆಲ್ಕೋಹಾಲ್‌ಗಳ ಸೇವನೆಯಿಂದ ದೂರವಿದ್ದು ಚಟುವಟಿಕೆಯಿಂದಿರುವುದು ಉತ್ತಮ ನಿದ್ದೆಗೆ ಸಹಾಯ ಮಾಡಬಲ್ಲದು.

Sleeplessness during pregnancy causes many complications
  • ತಾಜಾ ಹಣ್ಣು ಮತ್ತು ತರಕಾರಿಗಳು, ಬೇಳೆಕಾಳು,ಲೆಂಟಿಲ್ಸ್‌, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
  • ರಾತ್ರಿಯ ನಿದ್ದೆಯನ್ನು ಕಸಿಯುವ ಕೇಫಿನ್‌ ಮತ್ತು ಆಲ್ಕೋಹಾಲ್‌ಗಳಿಂದ ದೂರವಿರಿ.
  • ಮೆತ್ತಗಿನ ತಲೆದಿಂಬುಗಳನ್ನು ಉಪಯೋಗಿಸಿ.
  • ಪ್ರತಿದಿನ ಒಂದೇ ಸಮಯಕ್ಕೆ ನಿದ್ದೆ ಮಾಡಿ.
  • ರಾತ್ರಿ ಅತಿಯಾಗಿ ಊಟ ಸೇವಿಸಬೇಡಿ.
  • ಟಿವಿ, ಕಂಪ್ಯೂಟರ್‌, ಮೊಬೈಲ್‌ಗಳಂತಹ ಗ್ಯಾಜೆಟ್‌ಗಳನ್ನು ಮಲಗುವ ಕೋಣೆಯಿಂದ ದೂರವಿಡಿ.

ಇದನ್ನೂ ಓದಿ: Potato Health Benefits : ಆಲೂಗಡ್ಡೆ ಎಂದು ದೂರುವ ಮುನ್ನ ಇದನ್ನೊಮ್ಮೆ ಓದಿ

(Sleeplessness during pregnancy causes many complications)

Comments are closed.