Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

ತುಮಕೂರು : Govinda Karajola : ವಿಪಕ್ಷ ನಾಯಕ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳನ್ನು ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬರೋಬ್ಬರಿ 75 ವರ್ಷಗಳ ಬಳಿಕ ಮಠ -ಮಾನ್ಯಗಳು ಹಾಗೂ ದೇವಾಲಯಗಳ ಬಗ್ಗೆ ಈಗ ಸಿದ್ದರಾಮಯ್ಯಗೆ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು 75 ವರ್ಷಗಳ ಕಾಲ ತಿರಸ್ಕಾರದ ಮನೋಭಾವನೆಯಲ್ಲಿದ್ದರು.ಮುಪ್ಪಿನ ಕಾಲಕ್ಕೆ ಅವರಿಗೆ ಮಠ ಮಾನ್ಯಗಳ ಬಗ್ಗೆ ಜ್ಞಾನೋದಯವಾಗಿದೆ ಹೀಗಾಗಿ ಅವರು ಈಗ ಟೆಂಪಲ್​ ರನ್​ ಮಾಡುತ್ತಾ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಹಿಂದೂ ಧರ್ಮವನ್ನು ಒಡೆಯಲು ಮಾಡಿದ ಕೆಲಸಕ್ಕೆ ಪಶ್ಚಾತಾಪ ಮಾಡಿಕೊಳ್ಳಲು ಈಗ ಮಠಕ್ಕೆ ತೆರಳಿದ್ದಾರೆ. ಮಠಾಧೀಶರ ಬಳಿ ಹೋಗಿ ಅಂಗಲಾಚಿ ಬೇಡಿಕೊಂಡು ಮುಂದೆಂದೂ ಇಂತಹ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ. ಇದು ಒಳ್ಳೆಯ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ .

ಚುನಾವಣೆ ಹತ್ತಿರ ಬಂತು ಅಂದರೆ ಸಾಕು ಕಾಂಗ್ರೆಸ್​ನವರು ಹೊಸ ವೇಷ ಧರಿಸಿಕೊಳ್ತಾರೆ. ವೇಷಭೂಷಣಗಳನ್ನು ಹಾಕಿಕೊಂಡು ಜನರಿಗೆ ಮೊಸ ಮಾಡುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಸ್ವಾತಂತ್ರ್ಯ ಬಂದು 60 ವರ್ಷಗಳ ಕಾಲ ಜನರಿಗೆ ಕಾಂಗ್ರೆಸ್​ ಮೋಸ ಮಾಡಿದ್ದಾರೆ. ಇದು ಜನರಿಗೆ ತಿಳಿದ ಬಳಿಕ ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ 2ನೇ ಬಾರಿಗೆ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. 40 ವರ್ಷಗಳಿಂದ ದೇಶದಲ್ಲಿ ಯಾವುದೇ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ.

ನರೇಂದ್ರ ಮೋದಿಯ ಕಾಲದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರವನ್ನು ನಡೆಸುತ್ತಿದೆ. ಮುಂದೆ ಕೂಡ ಬಿಜೆಪಿ ಅಧಿಕಾರವನ್ನು ನಡೆಸಲಿದೆ. 2023ರಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ರಂಭಾಪುರಿ ಸ್ವಾಮೀಜಿ ಮುಂದೆ ಸಿದ್ದರಾಮಯ್ಯ ಪಶ್ಚತಾಪ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಸ್ವಾಮೀಜಿ ಸತ್ಯ ಹೇಳಿದ್ರಾ, ಸುಳ್ಳು ಹೇಳಿದ್ರಾ ನನಗೆ ಗೊತ್ತಿಲ್ಲ.ನಾನು ಸ್ಥಳದಲ್ಲಿ ಇರಲಿಲ್ಲ, ನಾನು ಸಾಕ್ಷ್ಯ ಅಲ್ಲ ಎಂದು ಹೇಳಿದರು.

ತುಮಕೂರಿನಲ್ಲಿ ಕಾಂಗ್ರೆಸ್ ನಿಂದ ಪಾರ್ಕ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, ವೀರ ಸಾವರ್ಕರ್​​ ಕುಟುಂಬವು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಕಾಲು ಕೆದರಿಕೊಂಡು ಹೋರಾಟ ಮಾಡಿ ಜೈಲು ಸೇರಿದೆ. ಬ್ರಿಟೀಷರು ಸಾವರ್ಕರ್​​​ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಂಡಿದ್ದರು. ಇದಕ್ಕೆ ಇತಿಹಾಸವಿದೆ. ಸಾವರ್ಕರ್​ ಮನೆತನದ ಇತಿಹಾಸ ಗೊತ್ತಿಲ್ಲದೇ ಇರುವವರು ಏನೇನೋ ಮಾತನಾಡಿದರೆ ಅದನ್ನು ದೇಶದ ಜನತೆ ಕ್ಷಮಿಸೋದಿಲ್ಲ ಎಂದು ಗುಡುಗಿದರು.

ಇವತ್ತಿನ ಕಾಂಗ್ರೆಸ್ಸಿನವರು ಯಾರು ಕೂಡ ಸ್ವಾತಂತ್ರ್ಯ ಹೋರಾಟದ ಮೂಲದಿಂದ ಬಂದವರಲ್ಲ. ಮಹಾತ್ಮಾ ಗಾಂಧಿಯಂತಹ ದೇಶಕ್ಕಾಗಿ ಹೋರಾಡಿದ ಸೇನಾನಿ ಮನೆತನದವರು ಯಾರೂ ಕಾಂಗ್ರೆಸ್​​ನಲ್ಲಿಲ್ಲ. ಅಧಿಕಾರದ ಆಸೆಗಾಗಿ ಕಾಂಗ್ರೆಸ್​ ಸೇರಿದವರೇ ಹೆಚ್ಚಾಗಿ ಇದ್ದಾರೆ. ಪ್ರಸ್ತುತ ಕಾಂಗ್ರೆಸ್​​ನಲ್ಲಿರುವವರಿಗೆ ನನ್ನದೊಂದು ಪ್ರಶ್ನೆಯಿದೆ, ಕಾಂಗ್ರೆಸ್​​ನಲ್ಲಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಯಾರಾದರೂ ಇದ್ದರೆ ಅದರ ಪಟ್ಟಿ ನೀಡಿ. ಕಾಂಗ್ರೆಸ್​ನವರು ಸ್ವಾತಂತ್ರ್ಯ ಹೋರಾಟದ ಮೂಲ ಮನೆತನದವರು ಅಂತ ಒಪ್ಪುತ್ತೇವೆ ಎಂದು ಹೇಳಿದರು .

ಇದನ್ನು ಓದಿ : shock for Congress :ಮುರುಗೇಶ್​ ನಿರಾಣಿ-ಎಸ್​.ಆರ್​ ಪಾಟೀಲ್​ ದೋಸ್ತಿಯಿಂದ ಎಚ್ಚೆತ್ತ ಕಾಂಗ್ರೆಸ್​ : ಎಸ್​.ಆರ್​ ಪಾಟೀಲ್​ಗೆ ಹೈಕಮಾಂಡ್​ ಬುಲಾವ್​​

ಇದನ್ನೂ ಓದಿ : Pramod Muthalik : ಕುಂಕುಮ, ಕೇಸರಿ ಬಣ್ಣ ಕಂಡರೆ ಉರಿಯುವ ಸಿದ್ದರಾಮಯ್ಯ ಮಠಕ್ಕೆ ಹೋಗೋದು ಮತದಾಹಕ್ಕೆ : ಪ್ರಮೋದ್​ ಮುತಾಲಿಕ್​ ಕಿಡಿ

Minister Govinda Karajola outrage against Congress

Comments are closed.