Anirudh Jatkar Reaction : ಜೊತೆ ಜೊತೆಯಲಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ : ನಿರ್ದೇಶಕ, ನಿರ್ಮಾಪಕರ ವಿರುದ್ದ ನಟ ಅನಿರುದ್ದ್ ಆರೋಪ

Anirudh Jatkar Reaction : ಕನ್ನಡ ಕಿರುತೆರೆಯ ಜೊತೆ ಜೊತೆಯಲಿ ಧಾರವಾಹಿ ವಿವಾದವನ್ನು ಹುಟ್ಟುಹಾಕಿದೆ. ನಿರ್ದೇಶಕ ಮಧು ಹಾಗೂ ನಟ ಅನಿರುದ್ದ ನಡುವೆ ನಡೆದಿರುವ ವೈಮನಸ್ಸಿನ ಬೆನ್ನಲ್ಲೇ ನಟ ಅನಿರುದ್ದ್‌ ಅವರನ್ನು ಕಿರುತೆರೆಯಿಂದ ಎರಡು ವರ್ಷಗಳ ನಿಷೇಧ ಮಾಡಲಾಗಿದೆ. ಆದ್ರೆ ತನ್ನ ಮೇಲೆ ಹೊರಿಸಲಾಗಿರುವ ಎಲ್ಲಾ ಆರೋಪಗಳಿಗೆ ನಟ ಅನಿರುದ್ಧ ಉತ್ತರ ನೀಡಿದ್ದು, ನಿರ್ದೇಶಕ ಮಧು ಉತ್ತಮ್ ಹಾಗೂ ಜಗದೀಶ್ ಆರೂರು ವಿರುದ್ಧವೇ ಅಸಹಕಾರದ ಆರೋಪ‌ ಮಾಡಿದ್ದಾರೆ. ನಾನು ಹಗಲು ರಾತ್ರಿ ಶೂಟಿಂಗ್ ಮಾಡಿದ್ದೇನೆ.‌ ಒಂದೂವರೆ ವರ್ಷ ನಾವು ಹಗಲು ರಾತ್ರಿ ಶೂಟಿಂಗ್‌ ಮಾಡಿದ್ದೇನೆ. ಕೊರೋನಾ ಟೈಂನಲ್ಲಿ ಸಂಭಾವನೆಯನ್ನೂ ಕಡಿಮೆ‌ ಕೊಟ್ರು ಅದನ್ನು ನಾನು ಸಹಿಸಿಕೊಂಡೆ. ಆದರೆ ಸ್ಕ್ರಿಪ್ಟ್ ಬಗ್ಗೆ ನಾನು ಅಸಮಧಾನ ತೋಡಿಕೊಂಡಿದ್ದು ನಿಜ.

ಯಾಕೆಂದರೇ ಬರ ಬರುತ್ತಾ ಸ್ಕ್ರಿಪ್ಟ್ ನಲ್ಲಿ ನೆಗೆಟಿವ್ ರೋಲ್ ರೀತಿಯಲ್ಲಿ ನನ್ನನ್ನು ಪ್ರಾಜೆಕ್ಟ್ ಮಾಡಲಾಗುತ್ತಿತ್ತು.‌ ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೇನೆ. ಯಾಕೆಂದರೇ ನಾನು ನೆಗೆಟಿವ್ ರೋಲ್ ಮಾಡೋಲ್ಲ ಎಂದು ಆರಂಭದಲ್ಲೇ ಹೇಳಿದ್ದೇನೆ ಎಂದಿದ್ದಾರೆ. ಬೆಂಜ್ ಕಾರು ಅಪಘಾತ ಮಾಡಿದ್ದು ನಾನೇ, ಯಾಕೆಂದರೇ ಡೈಲಾಗ್ ಹೇಳಿಕೊಂಡು ಗಾಡಿ ಡ್ರೈವ್ ಮಾಡೋದು ಕಷ್ಟ. ಆದರೆ ದುಡ್ಡು ಕಾಸಿನ ವಿಚಾರದಲ್ಲಿ ನಾನು ರಾಜಿಗೆ ಸಿದ್ಧ ವಿರಲಿಲ್ಲ. ಇದೆಲ್ಲವನ್ನೂ ಸೇರಿಸಿ ಈಗ ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದು ಅನಿರುದ್ಧ ಸ್ಪಷ್ಟನೆ ನೀಡಿದ್ದಾರೆ.

ಧಾರಾವಾಹಿಯಿಂದ ಅನಿರುದ್ದ ಔಟ್‌ : ನಿರ್ಮಾಪಕ ಆರೂರು ಜಗದೀಶ್

ಕರುನಾಡಿನಲ್ಲಿ ವಿಭಿನ್ನ ಕತೆಯೊಂದಿಗೆ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದ ಜೊತೆ ಜೊತೆಯಲ್ಲಿ ಧಾರಾವಾಹಿ ಕಳೆದ ಎರಡು ದಿನಗಳಿಂದ ನಾನಾ ರೀತಿಯ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೂ ಈ ವಿವಾದ ಅಂತ್ಯಕಂಡಿದ್ದು, ಧಾರಾವಾಹಿಯಿಂದ ನಾಯಕ ನಟ ಅನಿರುದ್ಧ ಅವರನ್ನು ಕೈಬಿಡಲಾಗಿದೆ ಎಂದು ನಿರ್ಮಾಪಕ ಆರೂರು ಜಗದೀಶ್ ಖಚಿತಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಜೊತೆ ಜೊತೆಯಲಿ ನಾಯಕ ನಟ ಅನಿರುದ್ಧ ಅವರನ್ನು ಸೀರಿಯಲ್ ನಿಂದ ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅನಿರುದ್ಧ ಅವರು ಶೂಟಿಂಗ್ ಸೆಟ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ. ಸಮಯಕ್ಕೆ ಸರಿಯಾಗಿ ಶೂಟಿಂಗ್ ಗೆ ಬರೋದಿಲ್ಲ. ಕತೆ ಹಾಗೂ ಚಿತ್ರಕತೆ ವಿಷಯದಲ್ಲೂ ಆಸಕ್ತಿ ತೋರದೇ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಕಿರಿ ಕಿರಿ ಮಾಡುತ್ತಾರೆ ಎಂಬೆಲ್ಲ ಆರೋಪಗಳು ಕೇಳಿಬಂದಿದ್ದವು.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟ ಅನಿರುದ್ಧ ಈ ಬಗ್ಗೆ ನನಗೆ ನಿರ್ದೇಶಕರಾಗಲಿ ಅಥವಾ ಸೀರಿಯಲ್ ತಂಡದಿಂದ ಯಾರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ನಾನು ಇನ್ನೂ ಜೊತೆ ಜೊತೆ ಸೀರಿಯಲ್ ನಲ್ಲೇ ಇದ್ದೇನೆ ಎಂದಿದ್ದರು. ಆದರೆ ಈಗ ಝೀ ಕನ್ನಡ ವಾಹಿನಿಯ ಆರೂರು ಜಗದೀಶ್ ಸ್ಪಷ್ಟನೆ ನೀಡಿದ್ದು, ಅಧಿಕೃತವಾಗಿ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಅನಿರುದ್ಧ ಅವರನ್ನು ಕೈಬಿಡಲಾಗಿದೆ ಎಂದು ಮೇಲ್ ಮಾಡಿರೋ ಸಂಗತಿಯನ್ನು ಬಹಿರಂಗಗೊಳಿಸಿದ್ದಾರೆ. ಧಾರಾವಾಹಿ ಬಗ್ಗೆ ಅಪ್ರಚಾರ, ಶೂಟಿಂಗ್ ಗೆ ಅಸಹಕಾರ,ಧನಹಾನಿ ಹಾಗೂ ಮಾನಹಾನಿ ಆರೋಪದ ಅಡಿಯಲ್ಲಿ ಅನಿರುದ್ಧ ಕೈಬಿಡಲಾಗಿದೆ ಎಂದು ಆರೂರು ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.

ಮೇಲ್ ನಲ್ಲಿ ನೇರವಾಗಿ ಅನಿರುದ್ಧಗೆ ಸಂಬಂಧಿಸಿ ಸಂಗತಿಗಳನ್ನು ಉಲ್ಲೇಖಿಸಿದ ಆರೂರು ಜಗದೀಶ್, ಅನಿರುದ್ಧ ಅವರೇ, ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ನಟರಾದ ನೀವು ಹಲವಾರು ಭಾರಿ ಚಿತ್ರೀಕರಣದ ವಾತಾವರಣವನ್ನು , ಪರಿಸರವನ್ನು ಹಾಳು ‌ಮಾಡಿದ್ದೀರಿ. ಧಾರಾವಾಹಿ ನಿಲ್ಲುತ್ತದೆ ಎಂದು ಅಪ ಪ್ರಚಾರ ಮಾಡಿದ್ದೀರಿ. ಸೆಟ್ ನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದೀರಿ. ನಿಮ್ಮಿಂದಾಗಿ ನಿರ್ಮಾಣ ಸಂಸ್ಥೆಗೆ ಅಪಾರ ಪ್ರಮಾಣದ ಧನ ಹಾಗೂ ಮಾನಹಾನಿಯಾಗಿದೆ. ಈ ಕಾರಣಗಳಿಂದಾಗಿ ನಿಮ್ಮನ್ನು ಧಾರಾವಾಹಿ ಯಿಂದ ಮುಂದುವರೆಸಲಾಗುತ್ತಿಲ್ಲ ಎಂದು ತಕ್ಷಣವೇ ಕೈಬಿಡಲಾಗುತ್ತಿದೆ ಎಂದು ಮೇಲ್ ನಲ್ಲಿ ಬರೆಯಲಾಗಿದೆ. ಒಟ್ಟಿನಲ್ಲಿ ಕನ್ನಡದ ಮತ್ತೊಂದು ಸೀರಿಯಲ್ ವಿವಾದಕ್ಕೆ ಕಾರಣವಾಗಿದ್ದು, ಅನಿರುದ್ಧ ಜನಪ್ರಿಯತೆ ಸಹಿಸಲಾಗದೇ ಇಂತಹದೊಂದು ಪಿತೂರಿ ನಡೆದಿದೆ ಎಂದು ಅನಿರುದ್ಧ ಅಭಿಮಾನಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ : jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್​ ಅಪ್ಡೇ​​ಟ್​​ : ಸೀರಿಯಲ್​​ನಿಂದ ನಟ ಅನಿರುದ್ಧಗೆ ಕೊಕ್​​

ಇದನ್ನೂ ಓದಿ : aniruddha banned : ನಟ ಅನಿರುದ್ಧಗೆ ಕಿರುತೆರೆಯಿಂದ 2 ವರ್ಷ ನಿಷೇಧ : ನಿರ್ಮಾಪಕರ ಸಂಘದಿಂದ ತೀರ್ಮಾನ

Anirudh Jatkar Reaction About Jothe Jotheyali serial team controversy

Comments are closed.