Teachers relief fund : ಮತ್ತೊಮ್ಮೆ ಶಿಕ್ಷಕರ ಆಕ್ರೋಶಕ್ಕೆ ಗುರಿಯಾದ ಸಚಿವರು: ಶಿಕ್ಷಕರ ಪರಿಹಾರ ನಿಧಿ ಹಣವೂ RTE ಶುಲ್ಕ ಪಾವತಿಗೆ ಬಳಕೆ

ಬೆಂಗಳೂರು : (Teachers relief fund) ಹಲವು ವರ್ಷಗಳಿಂದ ಆರ್‌ಟಿಇ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಹಿಂತಿರುಗಿಸದ ಕಾರಣಕ್ಕೆ ಚರ್ಚೆಯಲ್ಲಿದ್ದ ಸರ್ಕಾರ ಈ ಭಾರಿ ಆರ್‌ಟಿಇ ಶುಲ್ಕವನ್ನು ಪಾವತಿಸಲು ರಾಜ್ಯದ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯ ಕೋವಿಡ್ -19 ವಿಶೇಷ ಪರಿಹಾರ ನಿಧಿ ಖರ್ಚಿಗೆ ಮುಂದಾಗಿದ್ದು ಶಿಕ್ಷಕ ವಲಯದ ಆಕ್ರೋಶಕ್ಕೆ ತುತ್ತಾಗಿದೆ.

ದಿ ಫೈಲ್ ಈ ಬಗ್ಗೆ ವಿಸ್ಕೃತ ವರದಿ ಪ್ರಕಟಿಸಿದ್ದು, ದಾಖಲೆಯನ್ನು ಕೂಡ ಓದುಗರಿಗೆ ಒದಗಿಸಿದೆ. ರಾಜ್ಯದಲ್ಲಿ ಇದುವರೆಗೂ ರಾಜ್ಯದ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ಪರಿಹಾರ ನಿಧಿಗಾಗಿ ಒಟ್ಟು 103.47 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ಈ ಅನುದಾನದ ಪೈಕಿ 31.14 ಕೋಟಿ ರೂಪಾಯಿಗಳನ್ನು ಸರ್ಕಾರ ಉದ್ದೇಶ ಬದಲಿಸಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಪಾವತಿಗೆ ಬಳಸಲು ಆದೇಶ ನೀಡಿದೆ. ಇದಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅನುಮತಿ ಕೂಡ ನೀಡಿ ಸಹಿ ಹಾಕಿದ್ದಾರೆ.

2021-22 ನೇ ಸಾಲಿನ ಆಯವ್ಯಯದಲ್ಲಿ ಪ್ರಾಥಮಿಕ ಶಾಲೆಗಳ ಆರ್‌ಟಿಇ ಶುಲ್ಕ ಪಾವತಿಗಾಗಿ 700 ಕೋಟಿ ಲೇಖಾನುದಾನ ನೀಡಲಾಗಿತ್ತು. ಈ ಪೈಕಿ 103 ಕೋಟಿಯನ್ನು ಕೊವೀಡ್ ವಿಶೇಷ ಪರಿಹಾರ ನಿಧಿಗೆ ಪ್ಯಾಕೇಜ್ ನೀಡಿತ್ತು. ಆದರೆ ಈ ಹಣವನ್ನು ಪೂರ್ತಿಯಾಗಿ ಪರಿಹಾರಕ್ಕೆ ಬಳಸದೇ ಮತ್ತೆ ಆರ್‌ಟಿಇ ಶುಲ್ಕ ಪಾವತಿಗೆ ಬಳಸಲಾಗಿದೆ ಎಂಬ ಮಾತು ಕೇಳಿಬಂದಿದೆ.

ನಿಧಿಯ ಅನುದಾನವನ್ನು ಅಗತ್ಯ ಉಳ್ಳ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ನೀಡದೇ ಹಣ ಉಳಿದಿದೇ ಎಂಬ ನೆಪ ಮುಂದಿಟ್ಟುಕೊಂಡು ಅಂದಾಜು 31.14 ಕೋಟಿ ರೂಪಾಯಿಯನ್ನು ಮತ್ತೆ ಅರ್‌ಟಿಇ ಶುಲ್ಕ ಪಾವತಿಗೆ ಮರಳಿಸಿರುವುದು ದಾಖಲೆಗಳಿಂದ‌ ಬೆಳಕಿಗೆ ಬಂದಿದೆ.

ಪ್ರಸಕ್ತಾರ್ಥಿಕ ವರ್ಷದಲ್ಲಿ ಸರ್ಕಾರ ಆರ್‌ಟಿಇ ಶುಲ್ಕ ಪಾವತಿಗೆ ಬರೋಬ್ಬರಿ 500 ಕೋಟಿ ಅನುದಾನವನ್ನು ಪಡೆದುಕೊಂಡಿದೆ. ಆದರೂ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯ ಪರಿಹಾರದ ಹಣವನ್ನು ಮತ್ತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. 2021-22 ನೇ ಸಾಲಿನಲ್ಲಿ ರಾಜ್ಯದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲು ಬಜೆಟ್ ನಲ್ಲಿ 103 ಕೋಟಿ ಅನುದಾನ ನೀಡಲಾಗಿತ್ತು.

ಇದನ್ನೂ ಓದಿ : JEE Advanced 2022 Result:JEE ಅಡ್ವಾನ್ಸ್ಡ್ 2022 ಫಲಿತಾಂಶ ಪ್ರಕಟ : ಶಿಶಿರ್ ಆರ್‌ಕೆ ಟಾಪರ್

ಇದನ್ನೂ ಓದಿ : Karnataka Dasara Holidays 2022 : ಸೆಪ್ಟೆಂಬರ್‌ 26 ರಿಂದ ದಸರಾ ರಜೆ ಘೋಷಣೆ : ಸಚಿವರಿಂದ ಮಹತ್ವದ ಆದೇಶ

Minister Nagesh target of teachers anger, Teachers relief fund money used to pay RTE fees

Comments are closed.