Virat Kohli: ಲಂಡನ್‌ನಲ್ಲಿ ವಿರಾಟ್; ಪತ್ನಿ ಅನುಷ್ಕಾ ಜೊತೆ ಸೂರ್ಯರಶ್ಮಿಯನ್ನು ಚುಂಬಿಸಿದ ಕಿಂಗ್ ಕೊಹ್ಲಿ

ಲಂಡನ್: (Virat Kohli Anushka Sharma Surya Rashmi) ಎರಡೂವರೆ ವರ್ಷಗಳಿಂದ ಮರೀಚಿಕೆಯಾಗಿದ್ದ 71ನೇ ಅಂತಾರಾಷ್ಟ್ರೀಯ ಶತಕವನ್ನು ಏಷ್ಯಾ ಕಪ್ ಟೂರ್ನಿಯಲ್ಲಿ ದಕ್ಕಿಸಿಕೊಂಡಿರುವ ವಿರಾಟ್ ಕೊಹ್ಲಿ ಸದ್ಯ ಲಂಡನ್’ನಲ್ಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಅಲ್ಲಿಂದ ನೇರವಾಗಿ ಲಂಡನ್’ಗೆ ಹಾರಿರುವ ಕೊಹ್ಲಿ, ಅಲ್ಲಿ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಪ್ರೃತಿಯ ಮಡಿಲಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಪೋಟೋವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಕೊಹ್ಲಿ, “ಬ್ಯೂಟಿಫುಲ್ ಮಾರ್ನಿಂಗ್” ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಏಷ್ಯಾ ಕಪ್’ನಲ್ಲಿ ಆಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ’’ಚಾಕ್ಡಾ ಎಕ್ಸ್’ಪ್ರೆಸ್’’ ಸಿನಿಮಾ ಶೂಟಿಂಗ್’ಗಾಗಿ ಲಂಡನ್’ನಲ್ಲಿದ್ರು. ಹೀಗಾಗಿ ಏಷ್ಯಾ ಕಪ್ ಮುಗಿಯುತ್ತಿದ್ದಂತೆ ಪತ್ನಿ ಹಾಗೂ ಮುದ್ದಿನ ಮಗಳನ್ನು ನೋಡಲು ಕೊಹ್ಲಿ ಲಂಡನ್’ಗೆ ತೆರಳಿದ್ದಾರೆ.

https://www.instagram.com/p/CicNOOHNrtj/?igshid=YmMyMTA2M2Y=

2019ರ ಡಿಸೆಂಬರ್ ತಿಂಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ಎದುರಿಸಿದ್ದ ವಿರಾಟ್ ಕೊಹ್ಲಿ, 1020 ದಿನಗಳ ನಂತರ 71ನೇ ಶತಕ ಬಾರಿಸಿದ್ದರು. ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಕೊಹ್ಲಿ ಅವರ 71ನೇ ಶತಕ ಬಂದಿತ್ತು. ಆರಂಭಿಕನಾಗಿ ಕಣಕ್ಕಿಳಿದಿದ್ದ ಕೊಹ್ಲಿ, ಕೇವಲ 61 ಎಸೆತಗಳಲ್ಲಿ ಅಜೇಯ 122 ರನ್ ಸಿಡಿಸಿ ಅಬ್ಬರಿಸಿದ್ದರು. 34 ತಿಂಗಳುಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ನಂತರ, ಆ ಶತಕವನ್ನು ಪತ್ನಿ ಅನುಷ್ಕಾ ಶರ್ಮಾಗೆ ಡೆಡಿಕೇಟ್ ಮಾಡಿದ್ದರು. ಕಳೆದ ಎರಡೂವರೆ ವರ್ಷಗಳಿಂದ ಕ್ರಿಕೆಟ್ ಜೀವನದಲ್ಲಿ ಕೊಹ್ಲಿ ಅತ್ಯಂತ ಕಷ್ಟದ ಸಮಯ ಎದುರಿಸುತ್ತಿದ್ದಾಗ ಧೈರ್ಯ ತುಂಬಿದ್ದು ಅನುಷ್ಕಾ ಶರ್ಮಾ. ಹೀಗಾಗಿ 71ನೇ ಶತಕವನ್ನು ಪತ್ನಿಗೆ ಅರ್ಪಿಸಿದ್ದರು.

ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, 5 ಪಂದ್ಯಗಳಿಂದ 92ರ ಅಮೋಘ ಸರಾಸರಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳೊಂದಿಗೆ 276 ರನ್ ಕಲೆ ಹಾಕಿದ್ದರು. ಸದ್ಯ ಕ್ರಿಕೆಟ್’ನಿಂದ ಸಣ್ಣ ವಿರಾಮ ಪಡೆದಿರುವ ಕಿಂಗ್ ಕೊಹ್ಲಿ, ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ತವರು ಟಿ20 ಸರಣಿಯ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ನಡೆಯಲಿದೆ. 2ನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಹಾಗೂ 3ನೇ ಪಂದ್ಯ ಸೆಪ್ಟೆಂಬರ್ 25ರಂದು ಹೈದರಾಬಾದ್’ನಲ್ಲಿ ನಡೆಯಲಿದೆ. ನಂತರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಇದನ್ನೂ ಓದಿ : New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್

ಇದನ್ನೂ ಓದಿ : Assistant commissioner : ಬೆಚ್ಚಿ ಬೀಳಿಸುತ್ತೆ ಪೊಲೀಸ್ ಅಧಿಕಾರಿ ಮೇಲೆ ದಾಳಿಯ ದೃಶ್ಯ

Virat Kohli in London King Kohli kissed Surya Rashmi with his wife Anushka Sharma

Comments are closed.