ಜೂನ್ 5ಕ್ಕೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ

ಬೆಂಗಳೂರು : ರಾಜ್ಯಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಆಗಮನವಾಗುವ ಸಾಧ್ಯತೆಯಿದೆ. ಕೇರಳಕ್ಕೆ 31 ರಂದು ಪ್ರವೇಶಿಸಲಿರುವ ಮುಂಗಾರಿನಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 1 ರಂದು ನೈಋತ್ಯ ಮುಂಗಾರು ಕೇರಳ ರಾಜ್ಯ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 5 ರಂದು ಪ್ರವೇಶಿಸುವ ನಿರೀಕ್ಷೆ ಇದೆ.ರಾಜ್ಯದ್ಲಲಿ ಮೇ. 29 ರವರೆಗೆ ಮಳೆ ಮುಂದುವರೆಯಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

https://kannada.newsnext.live/public-outcry-was-sparked-in-lakshwadweep-over-reforms-announced-by-new-administration-led-by-bjp-praful-patel-rak/

ಚಂಡಮಾರುತದ ಹಿನ್ನೆಲೆಯಲ್ಲಿ ಕಾಣಿಸಿಕೊಂಡ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ರೈತರು ಕೃಷಿ ಕಾಯಕಲ್ಲಿ ತೊಡಗಿಕೊಂಡಿದ್ದು, ಮುಂಗಾರು ಆಗಮನದ ನಿರೀಕ್ಷೆಯಲ್ಲಿದ್ದಾರೆ.

Comments are closed.