ಚಿರು ಸಮಾಧಿ‌ ಜೊತೆಗೆ ಸ್ಮಾರಕ….! ಮೊದಲ‌ಪುಣ್ಯತಿಥಿಯಂದು ನಡೆಯಲಿದೆ ಭೂಮಿಪೂಜೆ…!!

ನೋಡ ನೋಡುತ್ತ ಸ್ಯಾಂಡಲ್ ವುಡ್ ನ ಸ್ಮೈಲ್ ಕಿಂಗ್ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿ ಒಂದು ವರ್ಷವಾಗುತ್ತಿದೆ. ಈ ವೇಳೆ ಮೇಘನಾ ರಾಜ್ ಚಿರು ನೆನಪುಗಳನ್ನು ಸ್ಮರಣೀಯವಾಗಿಸಲು ಸಿದ್ಧತೆ ನಡೆಸಿದ್ದಾರಂತೆ.

ಜೂನ್ ೭,೨೦೨೦ ರಂದು ಚಿರು ಸರ್ಜಾ ತೀವ್ರ ಹೃದಯಾಘಾತದಿಂದ ಪ್ರೀತಿಯ ಮಡದಿ ಹಾಗೂ ಕುಟುಂಬವನ್ನು ಅಗಲಿದ್ದರು. ಚಿರು‌ ನಿಧನರಾದಾಗ ಮೇಘನಾ ಐದು ತಿಂಗಳ ಗರ್ಭಿಣಿ.

ಪತಿ‌ ನಿಧನದ ನೋವಿನ ನಡುವಲ್ಲೂ ಅಕ್ಟೋಬರ್ ೨೨ ರಂದು ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಜ್ಯೂನಿಯರ್ ಚಿರು ಎಂದೇ ಎಲ್ಲರೂ ಪರಿಗಣಿಸಿರೋ ಪುಟಾಣಿಗೆ ಈಗ ೭ ತಿಂಗಳು.

https://kannada.newsnext.live/monsoon-karnataka-entry-june-first-week/amp/

ಇನ್ನೇನು ಒಂದು ವಾರದಲ್ಲಿ ಚಿರು ಮೊದಲ ಪುಣ್ಯ ಸ್ಮರಣೆ ನಡೆಯಲಿದೆ. ಕನಕಪುರ ರಸ್ತೆಯ ನೆಲಗೋಳಿ ಗ್ರಾಮದಲ್ಲಿರೋ ಧ್ರುವ್ ಸರ್ಜಾ ಫಾರಂ ಹೌಸ್ ನಲ್ಲಿ ಚಿರು ಸಮಾಧಿ‌ಮಾಡಲಾಗಿತ್ತು.

ಈಗ ಅದೇ ಸಮಾಧಿ‌ ಬಳಿ ‌ಚಿರು‌ ನೆನಪುಗಳನ್ನು ಅಮರವಾಗಿಸಲು ಸಿದ್ಧರಾಗಿದ್ದಾರಂತೆ. ಅದಕ್ಕಾಗಿ ಚಿರು ಮೊದಲ ಪುಣ್ಯತಿಥಿಯಂದೇ ಮೇಘನಾ ರಾಜ್ ಚಿರು ಸಮಾಧಿ ಬಳಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರಂತೆ.

https://kannada.newsnext.live/public-outcry-was-sparked-in-lakshwadweep-over-reforms-announced-by-new-administration-led-by-bjp-praful-patel-rak/amp/

ಚಿರು ನೆನಪುಗಳನ್ನು ಸ್ಮರಣಿವಾಗಿಸುವ ಉದ್ದೇಶದಿಂದ ಸ್ಮಾರಕ ನಿರ್ಮಾಣವಾಗಲಿದ್ದು, ಇದರಲ್ಲಿ ಚಿರು ಬಾಲ್ಯದಿಂದ‌ ಆರಂಭಿಸಿ ಇಲ್ಲಿಯವರೆಗಿನ ಎಲ್ಲ ಪೋಟೋಗಳನ್ನು ಇಡಲು ನಿರ್ಧರಿಸಲಾಗಿದೆಯಂತೆ.ಇದುವರೆಗೂ ಚಿರು ಸಾಧನೆಯನ್ನೆಲ್ಲ ಅಲ್ಲಿ ದಾಖಲಿಸಿ ನೆನಪುಗಳನ್ನು ಅಮರವಾಗಿರುವ ಉದ್ದೇಶದಿಂದ‌ ಮೇಘನಾ ಈ ಪ್ರಯತ್ನಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಜ್ಯೂನಿಯರ್ ಚಿರು ಕೂಡ ಮೊದಲ ಬಾರಿಗೆ ಸಮಾಧಿ ಬಳಿ ತೆರಳಲಿದ್ದು ತಂದೆಗೆ ಪೂಜೆ ಸಲ್ಲಿಸಲಿದ್ದಾನೆ. ಚಿರು ಅಗಲಿಕೆಯ ನೋವಿನಲ್ಲೂ ಸ್ಮಾರಕ‌ ನಿರ್ಮಾಣದ ಸಂಗತಿ ಅಭಿಮಾನಿಗಳಿಗೆ ಖುಷಿ ತಂದಿದ್ದು ನೆಚ್ಚಿನ ನಟನ ಸ್ಮಾರಕ ವೀಕ್ಷಣೆಗೆ ಕಾದಿದ್ದಾರೆ.

Comments are closed.