Bengaluru Bulls enters play off : ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು ಬುಲ್ಸ್, ಯು.ಪಿ ಯೋಧಾ

ಹೈದರಾಬಾದ್: ಯು.ಪಿ ಯೋಧಾ ವಿರುದ್ಧ ಗೆದ್ದು 12ನೇ ಗೆಲುವು ದಾಖಲಿಸಿದ ಬೆಂಗಳೂರು ಬುಲ್ಸ್ ತಂಡ, ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಆವೃತ್ತಿಯ ಟೂರ್ನಿಯಲ್ಲಿ ಪ್ಲೇ ಆಫ್ ಹಂತಕ್ಕೆ ಎಂಟ್ರಿ (Bengaluru Bulls enters play off) ಕೊಟ್ಟಿದೆ.

ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯು.ಪಿ ಯೋಧಾ ವಿರುದ್ಧ 38-35ರ ಅಂತರದಲ್ಲಿ ಜಯಭೇರಿ ಬಾರಿಸಿತು. ಬೆಂಗಳೂರು ಪರ ಸ್ಟಾರ್ ರೇಡರ್ ಭರತ್ ಹೂಡ 8 ರೇಡ್ ಪಾಯಿಂಟ್ಸ್ ಗಳಿಸಿದರೆ, ರೈಟ್ ಕಾರ್ನರ್ ಡಿಫೆಂಡರ್ ಸೌರಭ್ ನಂದಲ್ 4 ಟ್ಯಾಕಲ್ ಪಾಯಿಂಟ್ಸ್ ಹಾಗೂ ಲೆಫ್ಟ್ ಕಾರ್ನರ್ ಡಿಫೆಂಜರ್ ಅಮಾನ್ 5 ಟ್ಯಾಕಲ್ ಪಾಯಿಂಟ್ಸ್ ಗಳಿಸಿ ಬುಲ್ಸ್ ಗೆಲುವಿಗೆ ಕಾರಣರಾದರು.

ಈ ಗೆಲುವಿನೊಂದಿಗೆ ಅಂಕ ಗಳಿಕೆಯನ್ನು 68ಕ್ಕೆ ಏರಿಸಿಕೊಂಡ ಬೆಂಗಳೂರು ಬುಲ್ಸ್, 3ನೇ ತಂಡವಾಗಿ ಪ್ಲೇ ಆಫ್’ಗೆ ಅರ್ಹತೆ ಪಡೆಯಿತು. ಬುಲ್ಸ್ ವಿರುದ್ಧ ಸೋತರೂ ಒಂದು ಅಂಕ ಸಂಪಾದಿಸಿದ ಯು.ಪಿ ಯೋಧಾ ಒಟ್ಟು 66 ಅಂಕಗಳೊಂದಿಗೆ 4ನೇ ತಂಡವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು. ಅಂಕಪಟ್ಟಿಯ ಅಗ್ರಸ್ಥಾನಿ ಜೈಪುರ ಪಿಂಕ್ ಪ್ಯಾಂಥರ್ಸ್ (74 ಅಂಕ) ಮತ್ತು ಪುಣೇರಿ ಪಲ್ಟನ್ (74 ಅಂಕ) ಈಗಾಗ್ಲೇ ಮೊದಲ ಎರಡು ತಂಡಗಳಾಗಿ ಪ್ಲೇ ಆಫ್ ಪ್ರವೇಶಿಸಿವೆ.

ನಾಲ್ಕು ತಂಡಗಳು ಇದೀಗ ಪ್ಲೇ ಆಫ್ ಹಂತಕ್ಕೇರಿದ್ದು, ಉಳಿದ 2 ಸ್ಥಾನಗಳಿಗಾಗಿ ತಮಿಳ್ ತಲೈವಾಸ್ (61 ಅಂಕ), ದಬಾಂಗ್ ಡೆಲ್ಲಿ (55 ಅಂಕ), ಹರ್ಯಾಣ ಸ್ಟೀಲರ್ಸ್ (51 ಅಂಕ), ಯು ಮುಂಬಾ (51 ಅಂಕ), ಗುಜರಾತ್ ಜೈಂಟ್ಸ್ (51 ಅಂಕ) ತಂಡಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 38-36ರಲ್ಲಿ ರೋಚಕವಾಗಿ ಮಣಿಸಿದ ಗುಜರಾತ್ ಜೈಂಟ್ಸ್ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಇದನ್ನೂ ಓದಿ : Kuldeep Sen life story : ಕ್ಷೌರಿಕನ ಮಗ ಭಾರತ ಪರ ಏಕದಿನ ಕ್ರಿಕೆಟ್ ಆಡಿದ ರೋಚಕ ಕಥೆ

ಇದನ್ನೂ ಓದಿ : KL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ ಉತ್ತರ

ಇದನ್ನೂ ಓದಿ : India vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ

ಪ್ರೊ ಕಬಡ್ಡಿ ಲೀಗ್-9: ಸೋಮವಾರದ ಪಂದ್ಯಗಳು (Pro Kabaddi League) :

  1. ಪುಣೇರಿ ಪಲ್ಟನ್ Vs ಪಾಟ್ನಾ ಪೈರೇಟ್ಸ್
  2. ಹರ್ಯಾಣ ಸ್ಟೀಲರ್ಸ್ Vs ಜೈಪುರ ಪಿಂಕ್ ಪ್ಯಾಂಥರ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bengaluru Bulls enters play off : Bengaluru Bulls, UP Yodha entered the play offs

Comments are closed.