ಮೈಸೂರು ದಸರಾ ಮಹೋತ್ಸವಕ್ಕೆ ಕೊರೊನಾ ಕರಿನೆರಳು !

0

ಮೈಸೂರು : ವಿಶ್ವವಿಖ್ಯಾತ ದಸರಾಗೆ ದಿನಗಣನೆ ಆರಂಭವಾಗಿದೆ. ಆದ್ರೆ ಈ ಬಾರಿಯ ದಸರಾಗೆ ಕೊರೊನಾ ಕರಿನೆರಳು ಬಿದ್ದಿದೆ. ದಸರಾ ರೂಪುರೇಷೆಗಳನ್ನ ಸಿದ್ಧಪಡಿಸುವ ಹೈಪವರ್ ಕಮಿಟಿ ಸಭೆ ಇನ್ನೂ ನಡೆಯದಿರುವುದು ದಸರಾ ನಡೆಯುತ್ತೋ ಇಲ್ಲವೋ ಅನ್ನೋ ಅನುಮಾನ ವ್ಯಕ್ತವಾಗಿದೆ.

ಮೈಸೂರು ದಸರಾ ಮಹೋತ್ಸವ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ. ದಸರಾ ಮಹೋತ್ಸವಕ್ಕಾಗಿ ಅರಮನೆ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹೆಮ್ಮಾರಿಯ ಆರ್ಭಟದ ಎಫೆಕ್ಟ್ ಇದೀಗ ಮೈಸೂರು ದಸರಾಕ್ಕೂ ತಟ್ಟಿದೆ.

ವರ್ಷಂಪ್ರತಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ನಡೆಯುತ್ತಿದ್ದ ವಿಶೇಷ ಸಭೆಯಲ್ಲಿ ಇಡೀ ದಸರಾ ರೂಪುರೇಷೆ ಸಿದ್ಧಪಡಿಸುತ್ತಿದ್ದರು. ಈ ಬಾರಿ ಸಭೆ ನಡೆಯದ ಕಾರಣ ಅಧಿಕಾರಿಗಳು ಪೇಚಿಗೆ ಸಿಲುಕಿದ್ದು, ಗಜಪಡೆಗೆ ಆನೆಗಳ ಆಯ್ಕೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ತಯಾರಿ ಮಾಡಿಕೊಳ್ಳಲಾಗದೆ ಗೊಂದಲಕ್ಕೀಡಾಗಿದ್ದಾರೆ.

ಅಗಸ್ಟ್ 21ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೈಸೂರಿಗೆ ಆಗಮಿಸಿದ್ದು, ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಈ ವೇಳೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದಸರಾ ಕುರಿತು ಅಧಿಕಾರಿಗಳ ಸಭೆ ನಡೆಸುವ ಸಾಧ್ಯತೆಯಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಆದೇಶ ಇದುವರೆಗೂ ಬಂದಿಲ್ಲ. ರಾಜ್ಯ ಸರಕಾರ ಇದುವರೆಗೂ ದಸರಾ ಆಚರಣೆಯ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.

Leave A Reply

Your email address will not be published.