ಮೈಸೂರು ವಿವಿ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವೀಸ್ಟ್‌ : ಪೊಲೀಸರ ಮುಂದೆ ಸ್ಪೋಟಕ ಹೇಳಿಕೆ ಕೊಟ್ಟ ಸಂತ್ರಸ್ತೆ

ಮೈಸೂರು : ಸಂಶೋಧನೆಯ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಮನೆಗೆ ಕರೆಯಿಸಿ ಅತ್ಯಾಚಾರವೆಸಗಿರುವ ಆರೋಪ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಸಂತ್ರಸ್ತ ಯುವತಿ ತನ್ನ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದು, ಪ್ರೋಪೆಸರ್‌ ರಾಮಚಂದ್ರ ಪತ್ನಿಯ ವಿರುದ್ದವೇ ಇದೀಗ ದೂರು ನೀಡಿದ್ದಾಳೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿರುವ ಪ್ರೊ.ರಾಮಚಂದ್ರ ಅವರು ತನ್ನನ್ನು ಪಿಎಚ್‌ಡಿ ವಿಚಾರಕ್ಕೆ ಮನೆಗೆ ಕರೆಯಿಸಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿನಿ ತನಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಪ್ರೊ.ರಾಮಚಂದ್ರ ಅವರ ಪತ್ನಿ ಡಾ.ಲೋಲಾಕ್ಷಿ ಆರೋಪ ಮಾಡಿದ್ದರು. ಅತ್ಯಾಚಾರದ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರೋಪೆಸರ್‌ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಆದರೆ ಪೊಲೀಸರ ವಿಚಾರಣೆಯ ವೇಳೆಯಲ್ಲಿ ವಿದ್ಯಾರ್ಥಿನಿ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ. ನಾನು ಪ್ರೊ. ರಾಮಚಂದ್ರ ನನ್ನ ಪಿಎಚ್‌ಡಿ ಮಾರ್ಗದರ್ಶಕರು. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರ ಪತ್ನಿ ಲೋಲಾಕ್ಷಿ ನನ್ನನ್ನು ಹೆದರಿಸಿ ದೂರು ಬರೆಯಿಸಿಕೊಂಡಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿ ಇದೀಗ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ.

ಇದನ್ನೂ ಓದಿ : ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಪತ್ನಿ ಎದುರೇ ಸಿಕ್ಕಿ ಬಿದ್ದ ಕಾಮುಕ ಪ್ರಾಧ್ಯಾಪಕ

ಮೇಲ್ನೋಟಕ್ಕೆ ಇದೊಂದು ಕೌಟುಂಬಿಕ ಕಲಹ ಅನ್ನೋದು ಕಂಡು ಬರುತ್ತಿದೆ. ಪತಿಯ ಮೇಲಿನ ಸಿಟ್ಟಿಗೆ ಪತ್ನಿ ಇದೀಗ ರೇಪ್‌ ಆರೋಪ ಮಾಡಿಸಿದ್ರಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಸಂತ್ರಸ್ತೆ ನೀಡಿದ ಹೇಳಿಕೆಯ ಬೆನ್ನಲ್ಲೇ ರೇಪ್‌ ಪ್ರಕರಣ ಗಂಭೀರತೆಯನ್ನು ಕಳೆದುಕೊಂಡಿದೆ. ಇನ್ನೊಂದೆಡೆ ಮೈಸೂರು ವಿವಿ ಪ್ರಾಧ್ಯಾಪಕ ದಂಪತಿಗಳಿಗೆ ನೋಟಿಸ್‌ ಜಾರಿ ಮಾಡಲು ಚಿಂತನೆಯನ್ನುಚಿಂತನೆ ನಡೆಸಿದೆ. ವೈಯಕ್ತಿಕ ವಿಚಾರದಲ್ಲಿ ಮೈಸೂರು ವಿವಿ ಹೆಸರು ಹಾಳುತ್ತಿದ್ದು, ಇಬ್ಬರ ಪ್ರಕರಣ ಇದೀಗ ವಿವಿಗೆ ಮುಜುಗರ ತಂದಿದೆ ಎಂದು ವಿವಿ ಕುಲಸಚಿವ ಶಿವಪ್ಪ ಹೇಳಿದ್ದಾರೆ.

ಇದನ್ನೂ ಓದಿ : ಗೋಡೆ ಕೊರೆದು ಚಿನ್ನದಂಗಡಿಗೆ ನುಗ್ಗಿದ ಕಳ್ಳರು : ಮಾಲೀಕರ ಜಾಣ್ಮೆಯಿಂದ ತಪ್ಪಿದ್ದ ಬಾರೀ ಕಳವು..!!!

ಆದರೆ ಪ್ರಾಧ್ಯಾಪಕಿ ಡಾ.ಲೋಲಾಕ್ಷಿ ಅವರು ತಾನು ಮಾಡಿರೋ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಸಂತ್ರಸ್ತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾನು ದೂರನ್ನು ನೀಡಿದ್ದೇನೆ. ಆಕೆಯ ಗಂಡ ನನ್ನ ಬಳಿ ಬಂದು ಮನವಿ ಮಾಡಿಕೊಂಡಿದ್ದಾರೆ. ಸಂಸಾರ ಹಾಳಾಗಬಾರದು ಅನ್ನೋ ಕಾರಣಕ್ಕೆ ನಾನು ಅವರನ್ನು ಸೇವ್‌ ಮಾಡುತ್ತಿದ್ದೇನೆ ಎಂದಿದ್ದಾರೆ.

(Big tweet for rape case of PhD research student at Mysore University : The victim who made the statement before the police)

Comments are closed.