Bluetooth Earphones Blast : ಬ್ಲೂಟೂತ್‌ ಇಯರ್‌ ಪೋನ್‌ ಬ್ಲಾಸ್ಟ್‌ : ಯುವಕ ಸಾವು

ಜೈಪುರ : ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬ್ಲೂಟೂತ್‌ ಇಯರ್‌ ಪೋನ್‌ ಬಳಕೆ ಮಾಡುತ್ತಿದ್ದಾರೆ. ಆದರೆ ಇಯರ್‌ ಪೋನ್‌ ಕೆಲವೊಮ್ಮೆ ನಮ್ಮ ಜೀವಕ್ಕೆ ಕುತ್ತು ತರುತ್ತೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್‌ ಎಕ್ಸಾಂಪಲ್.‌ ಬ್ಲೂಟೂತ್‌ ಸ್ಪೋಟಗೊಂಡು ಇಲ್ಲೊಬ್ಬ ಯುವಕ ಸಾವನ್ನಪ್ಪಿದ್ದಾನೆ.

ರಾಜಸ್ತಾನದ ಜೈಪುರ ಜಿಲ್ಲೆಯ ಉದಯಪುರ ಗ್ರಾಮದ ನಿವಾಸಿಯಾಗಿರುವ ಯುವಕನೋರ್ವ ಬ್ಲೂಟೂತ್‌ ಇಯರ್‌ ಪೋನ್‌ ಕಿವಿಗೆ ಹಾಕಿಕೊಂಡು ಮಾತನಾಡುತ್ತಿದ್ದ. ಈ ವೇಳೆಯಲ್ಲಿ ಇಯರ್‌ ಪೋನ್‌ ಸ್ಪೋಟಗೊಂಡಿದೆ. ಯುವಕನ ಎರಡೂ ಕಿವಿಗಳಿಗೆ ಹಾನಿಯಾಗಿದ್ದು, ನಂತರ ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾನೆ.

ಇಯರ್‌ ಪೋನ್‌ ಸ್ಪೋಟಗೊಳ್ಳುತ್ತಿದ್ದಂತೆಯೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಇಯರ್‌ ಪೋನ್‌ ಸ್ಪೋಟಗೊಂಡು ಯುವಕ ಸಾವನ್ನಪ್ಪಿರೋದು ದೇಶದಲ್ಲಿಯೇ ಮೊದಲ ಪ್ರಕರಣ ಎನ್ನಲಾಗುತ್ತಿದೆ. ಇನ್ಮುಂದೆ ಇಯರ್‌ ಪೋನ್‌ ಬಳಸುವ ಮುನ್ನ ಎಚ್ಚರವಾಗಿರೋದು ಒಳಿತು.

ಇದನ್ನೂ ಓದಿ :

ಮೈಸೂರು ವಿವಿ ಅತ್ಯಾಚಾರ ಪ್ರಕರಣಕ್ಕೆ ಬಿಗ್‌ ಟ್ವೀಸ್ಟ್‌ : ಪೊಲೀಸರ ಮುಂದೆ ಸ್ಪೋಟಕ ಹೇಳಿಕೆ ಕೊಟ್ಟ ಸಂತ್ರಸ್ತೆ

ಗೋಡೆ ಕೊರೆದು ಚಿನ್ನದಂಗಡಿಗೆ ನುಗ್ಗಿದ ಕಳ್ಳರು : ಮಾಲೀಕರ ಜಾಣ್ಮೆಯಿಂದ ತಪ್ಪಿದ್ದ ಬಾರೀ ಕಳವು..!!!

(Rajasthan Youth Dies After Bluetooth Earphone Device Explodes in His Ear During Phone Call)

Comments are closed.