Namma Metro : ಹೊಸ ವರ್ಷ ದಿನದಂದು ತಡರಾತ್ರಿ 2ಗಂಟೆವರೆಗೂ ಸಿಗಲಿದೆ ಮೆಟ್ರೋ

ಬೆಂಗಳೂರು : ಹೊಸ ವರ್ಷದ ಹೊಸ್ತಿಲಿನಲ್ಲಿರುವ ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ (Namma Metro) ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ವರುಷದ ಸಂಭ್ರಮಾಚರಣೆಯಲ್ಲಿ ತೊಡಗಿರುವರನ್ನು ಗಮನದಲ್ಲಿ ಇಟ್ಟುಕೊಂಡು ಬಿಎಂಆರ್‌ಸಿಎಲ್‌ ಮೆಟ್ರೋ ಅವಧಿಯನ್ನು ವಿಸ್ತರಿಸಿದೆ. ಹಾಗಾಗಿ ಮೆಟ್ರೋ ಸಂಚಾರದವರು ಹೊಸವರ್ಷದಂದು ತಡರಾತ್ರಿವರೆಗೂ ಈ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಹೀಗಾಗಿ ಮೆಟ್ರೋ ಸಂಚಾರಿಗಳಿಗೆ ಬಿಎಂಆರ್‌ಸಿಎಲ್‌ ಡಿಸೆಂಬರ್‌ 31ರಂದು ರಾತ್ರಿ ಮೂರು ಗಂಟೆವರೆಗೆ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಿದೆ. ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1ರಂದು ಬೆಳಗಿನ ಜಾವ 2 ಗಂಟೆವರೆಗೂ ಮೆಟ್ರೋ ಸಂಚಾರ ಇರುತ್ತದೆ.ಕೆಂಪೇಗೌಡ ಮೆಟ್ರೋ ಸಂಚಾರ ರಾತ್ರಿ 2ಗಂಟೆಗೆ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ.

ಇದನ್ನೂ ಓದಿ : Metro ticket booking: ಇನ್ಮುಂದೆ ಪೇಟಿಎಂ, ಯಾತ್ರಾ ಆಪ್ ಗಳಲ್ಲೂ ಮೆಟ್ರೋ ಟಿಕೆಟ್ ಲಭ್ಯ; ಬಳಸುವ ವಿಧಾನ ಹೇಗೆ..?

ಇದನ್ನೂ ಓದಿ : Bus caught fire in depot: ಡಿಪ್ಪೋದಲ್ಲಿ ನಿಲ್ಲಿಸಿದ್ದ ಮೂರು ಬಸ್‌ ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಇದನ್ನೂ ಓದಿ : Corona positive case: ಬೆಂಗಳೂರು ಏರ್ ಪೋರ್ಟ್‌ ನಲ್ಲಿ ಹೈ ಅಲರ್ಟ್:‌ ಪತ್ತೆಯಾಯ್ತು ನಾಲ್ಕು ಪ್ರಕರಣಗಳು

ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿರುವ ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಬೆಳಗ್ಗೆ 2 ಗಂಟೆಯವರೆಗೆ ನಗರದಲ್ಲಿ ಮೆಟ್ರೋ ಕಾರ್ಯಾಚರಣೆ ನಡೆಸಲಿದ್ದು, ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬಿಎಂಆರ್‌ಸಿಎಲ್ ಹೇಳಿದೆ. ಜನವರಿ 1ರಂದು ಎಂದಿನಂತೆ 5.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಹೊಸ ವರ್ಷದ ಆಚರಣೆ ಹಿನ್ನಲೆಯಲ್ಲಿ ಎಂ.ಜಿ ರೋಡ್‌ ಬೈಯಪ್ಪನಹಳ್ಳಿ ಕಡೆಯಿಂದ ಸಂಚಾರ ಮಾಡುವ ಪ್ರಯಾಣಿಕರು ಮೆಟ್ರೋ ಬಳಕೆ ಮಾಡಲು ಮನವಿ ಮಾಡಲಾಗಿದೆ. ಬಿಎಮ್‌ಆರ್ಸಿಎಲ್‌ ಎಂ.ಡಿ ಅಂಜುಂ ಪರ್ವೇಜ್‌ ಈ ಕುರಿತು ಮಾಹಿತಿ ನೀಡಿದ್ದಾರೆ.

Namma Metro: On the occasion of New Year, the metro will be available till 2 am

Comments are closed.