Udupi mask compulsory: ಉಡುಪಿಯ ಚಿತ್ರಮಂದಿರ, ಮಾಲ್‌ ಹೋಟೆಲ್‌ ಗಳಲ್ಲಿ ಮಾಸ್ಕ್‌ ಕಡ್ಡಾಯ

ಉಡುಪಿ: (Udupi mask compulsory) ಈಗಾಗಲೇ ಆತಂಕಕಾರಿ ಕೊರೊನಾ ದೇಶ, ರಾಜ್ಯ ಹಾಗೇ ಉಡುಪಿಗೂ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಉಡುಪಿಯ ಜಿಲ್ಲಾಧಿಕಾರಿ ಕೂರ್ಮರಾವ್‌ ಅವರು ಉಡುಪಿ ಜಿಲ್ಲೆಯ ಸಾರ್ವಜನಿಕರು ಕೊರೊನಾ ತಡೆಗಟ್ಟಲು ಅಗತ್ಯ ಕಾಳಜಿ ವಹಿಸಬೇಕು, ಜೊತೆಗೆ ಬೂಸ್ಟರ್‌ ಡೋಸ್‌ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಚಿತ್ರಮಂದಿರಗಳು, ಮಾಲ್‌ ಗಳು, ಹೋಟೆಲ್‌ ಗಳು ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ(Udupi mask compulsory)ಗೊಳಿಸಲಾಗಿದ್ದು, ವಿದೇಶದಿಂದ ಹಿಂದಿರುಗಿದ ಪ್ರಯಾಣಿಕರನ್ನು ಅನುಸರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಐಸೋಲೇಶನ್‌ ಬೆಡ್‌ ಗಳನ್ನು ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಜತಾದ್ರಿ ಮಣಿಪಾಲದಲ್ಲಿ ನಡೆದ ಕೋವಿಡ್‌ ತಾಂತ್ರಿಕ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮರಾವ್‌ ಅವರು ” ನೆರೆಯ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ದೇಶದಲ್ಲಿಯೂ ಪ್ರಕರಣಗಳು ಹೆಚ್ಚಾಗುವ ನಿರೀಕ್ಷೆಯಿದೆ. ಈಗಾಗಲೇ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಲ್ಲರೂ ಅದನ್ನು ನಿಯಮಾನುಸಾರವಾಗಿ ಪಾಲಿಸಬೇಕು. ವಿದೇಶದಿಂದ ಹಿಂತಿರುಗಿದವರು, ರೋಗಲಕ್ಷಣಗಳನ್ನು ಹೊಂದಿರುವವರು ಹಾಗೂ ಕೊರೊನಾ ಪಾಸಿಟಿವ್‌ ರೋಗಿಗಳ ಸಂಪರ್ಕಿಸಿದವರು ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಒಂದುವೇಳೆ ಪಾಸಿಟಿವ್‌ ಕಂಡುಬಂದಲ್ಲಿ, ಜೀನೋಮ್‌ ಸೀಕ್ವೆನ್ಸ್‌ ಗಾಗಿ ಮಾದರಿಗಳನ್ನು ಕಳುಹಿಸಬೇಕು.” ಎಂದು ಹೇಳಿದರು.

ಇದನ್ನೂ ಓದಿ : Negetive RT-PCR test: ವಿದೇಶಿ ಪ್ರಯಾಣಿಕರಿಗೆ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

ಇದನ್ನೂ ಓದಿ : 3 Corona positive case: 3 ವಿದೇಶಿ ಪ್ರಯಾಣಿಕರಿಗೆ ಕೊರೊನಾ ಸೋಂಕು ದೃಢ: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 22 ಕ್ಕೆ ಏರಿಕೆ

ಇದನ್ನೂ ಓದಿ : Brain eating amoeba: ಕೊರೊನಾ ಸೋಂಕು ಬೆನ್ನಲ್ಲೇ ಮೆದುಳು ತಿನ್ನುವ ಅಮೀಬಾ ಆತಂಕ: ಅಷ್ಟಕ್ಕೂ ಇದರ ಗುಣಲಕ್ಷಣಗಳೇನು?

After this, District Collector of Udupi Kurmarao said that the public of Udupi district should take necessary care to prevent Corona and also should get booster dose compulsorily.

Comments are closed.