Poisonous Mushroom : ಬೆಳ್ತಂಗಡಿ ಬಳಿ ವಿಷಪೂರಿತ ಅಣಬೆ ಸೇವಿಸಿ : ಅಪ್ಪ – ಮಗನ ಸಾವು

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದುವೆಟ್ಟುವಿವನಲ್ಲಿ ವಾಸಿಸುತ್ತಿದ್ದ ಅಪ್ಪ – ಮಗ ವಿಷಪೂರಿತ ಅಣಬೆಯನ್ನು (Poisonous Mushroom) ಸೇವಿಸಿ ಜೀವ ಕಳೆದುಕೊಂಡ ಘಟನೆ ಮಂಗಳವಾರದಂದು ನಡೆದಿದೆ. ಅಣಬೆಯನ್ನು ಬಳಸಿ ಅಡುಗೆ ಮಾಡಿದ್ದು, ಅದು ವಿಷವಾಗಿ ಪರಿಣಮಿಸಿ ಈ ಸಾವು ಸಂಭವಿಸಿರಬಹುದು ಎಂದು ಮೃತರ ಮನೆಯವರು ಧರ್ಮಸ್ಥಳ ಠಾಣೆಗೆ ದೂರು ದಾಖಲಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ದೂರಿನಲ್ಲಿ ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳಕ್ಕೆ ಸಮೀಪದ ಪುದವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(80) ಮತ್ತು ಅವರ ಪುತ್ರ ಓಡಿಯಪ್ಪ(40)ಮೃತಪಟ್ಟವರಾಗಿದ್ದಾರೆ. ಮೃತಪಟ್ಟ ವಯೋವೃದ್ಧ ಗುರುವ ಹಾಗೂ ಅವರ ಇಬ್ಬರು ಪುತ್ರರಾದ ಕರ್ತ(60) ಹಾಗೂ ಓಡಿಯಪ್ಪ ವಾಸವಾಗಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಈ ಕುಟುಂಬದ ಬಳಿ ಮನೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಹೊಂದಿರಲಿಲ್ಲ. ಮನೆಯನ್ನು ಸಿಮೆಂಟ್‌ ಬ್ಲಾಕ್‌ ಹಾಗೂ ಶೀಟ್‌ಗಳನ್ನು ಬಳಸಿ ನಿರ್ಮಿಸಲಾಗಿತ್ತು. ಈ ಮನೆಯಲ್ಲಿ ವಿದ್ಯುತ್‌ ಹಾಗೂ ಗ್ಯಾಸ್‌ ವ್ಯವಸ್ಥೆ ಕೂಡ ಇರುವುದಿಲ್ಲ. ಮೃತಪಟ್ಟ ಇಬ್ಬರಲ್ಲೂ ಮೊಬೈಲ್‌ ಬಳಕೆ ಕೂಡ ಮಾಡುತ್ತಿರಲಿಲ್ಲ. ಇನ್ನೂ ಮನೆಯಲ್ಲಿ ಅಪ್ಪ ಮತ್ತು ಇಬ್ಬರೂ ಗಂಡು ಮಕ್ಕಳು ಮಾತ್ರ ವಾಸವಾಗಿದ್ದರು. ಮೃತ ಗುರುವ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಮೊಮ್ಮಕ್ಕಳ ಬಳಿ ವಾಸಿಸುತ್ತಿದ್ದಾರೆ. ಓಡಿಯಪ್ಪ ಮಾನಸಿಕವಾಗಿ ಅಸ್ಥವ್ಯಸ್ಥನಾಗಿದ್ದು, ಕರ್ತ ಅವರ ಹೆಂಡತಿ ತೀರಿಕೊಂಡಿದ್ದಾರೆ.

ಕರ್ತರವರು ಮಧ್ಯ ವ್ಯಸನಿಯಾಗಿದ್ದು, ನವೆಂಬರ್‌ 21ರಂದು ಮೂರು ಗಂಟೆಗೆ ಪುದುವೆಟ್ಟು ಪೇಟೆಗೆ ಹೋಗಿದ್ದ ಸಮಯದಲ್ಲಿ ತಮ್ಮ ಓಡಿಯಪ್ಪ ಕಾಡಿನಿಂದ ಅಣಬೆಯನ್ನು ತಂದು ಅದನ್ನು ಬೇಯಿಸಿ ಪದಾರ್ಥವನ್ನು ಮಾಡಿ ತಂದೆ ಮತ್ತು ಮಗ ಊಟ ಮಾಡಿದ್ದಾರೆ. ಮಧ್ಯ ವ್ಯಸನಿಯಾಗಿದ್ದ ಕರ್ತ ಸೋಮವಾರ ಸಂಜೆ ಆರು ಗಂಟೆ ಹೊತ್ತಿಗೆ ಮನೆಯಿಂದ ಮೂರು ನಾಲ್ಕು ಕಿಲೋ.ಮೀಟರ್‌ ದೂರದಲ್ಲಿ ಇದುವ ಬೊಳ್ಳನಾರು ಎಂಬ ಪ್ರದೇಶದಲ್ಲಿ ಮಧ್ಯವನ್ನು ಕುಡಿದು ಬಿದಿದ್ದಾರೆ. ಮರುದಿನ ಮಂಗಳವಾರ ಬೆಳಿಗ್ಗೆ ಎಚ್ಚರವಾಗಿ ಮನೆಗೆ ಬಂದು ನೋಡಿದಾಗ ತಂದೆ ಮತ್ತು ತಮ್ಮ ಮನೆಯ ಅಂಗಳದಲ್ಲಿ ಶವವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದು, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ : Shraddha letter: ಕೊನೆಗೂ ಹೇಳಿದಂತೆ ಮಾಡಿಯೇ ಬಿಟ್ಟ ಅಫ್ತಾಬ್; 2 ವರ್ಷಗಳ ಹಿಂದೆಯೇ ಪತ್ರದಲ್ಲಿ ಅಫ್ತಾಬ್ ಕ್ರೂರತೆಯನ್ನು ಬಿಚ್ಚಿಟ್ಟಿದ್ದ ಶೃದ್ಧಾ

ಇದನ್ನೂ ಓದಿ : Delhi Murder Case : ಒಂದೇ ಕುಟುಂಬದ ನಾಲ್ವರ ಇರಿದು ಕೊಂದ ಮಾದಕ ವ್ಯಸನಿ

ಇದನ್ನೂ ಓದಿ : Mangaluru blast FSL Report: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಬೆಚ್ಚಿಬೀಳಿಸಿದ ಎಫ್‌ಎಸ್‌ಎಲ್‌ ವರದಿ

ಗುರುವ ಹಾಗೂ ಓಡಿಯಪ್ಪ ಕಾಡಿನಿಂದ ಅಣಬೆಯನ್ನು ತಂದು ಪದಾರ್ಥ ಮಾಡಿ ರಾತ್ರಿ ಊಟ ಮಾಡಿದ್ದು, ಇದರಿಂದಾಗಿ ಇಬ್ಬರಿಗೂ ವಾಂತಿ-ಭೇದಿ ಆರಂಭವಾಗಿದ್ದು, ನೆರವಿಗಾಗಿ ಕೂಗಿಕೊಂಡಿದ್ದಾರೆ. ಅವರ ಮನೆಯ ಅಕ್ಕಪಕ್ಕದಲ್ಲಿ ಮನೆ ಇಲ್ಲದೇ ಇರುವುದರಿಂದ ಆ ಸಮಯದಲ್ಲಿ ನೆರವಿಗಾಗಿ ಕೂಗಿದ್ದರೂ ಯಾರ ಸಹಾಯವು ಸಿಗದೇ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮನೆಯೊಳಗೆ ಅನ್ನ ಹಾಗೂ ಉಳಿದ ಅಣಬೆ ಪದಾರ್ಥ ಪತ್ತೆ ಆಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದು, ಮೃತದೇಹಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯುಕ್ತ ಆಹಾರ ಸೇವಿಸಿದ ಪರಿಣಾಮ ಈ ಸಾವು ಆಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು ಈ ಕುರಿತು ಹೆಚ್ಚಿನ ತನಿಖೆಯ ಮೂಲಕ ಸ್ಪಷ್ಟವಾದ ಕಾರಣ ತಿಳಿಯಬೇಕಿದೆ.

Eat poisonous mushroom near Belthangadi : Death of father and son

Comments are closed.